ಬೆಂಗಳೂರು ವಿಮಾನ ನಿಲ್ದಾಣಕ್ಕೆ  `ಅತ್ಯುತ್ತಮ ವಿಮಾನ ನಿಲ್ದಾಣ’ ಪುರಸ್ಕಾರ

Share

ಬೆಂಗಳೂರು,ಮಾ,26: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವು ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಒಳಗಾಗಿದ್ದು ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ ಎರಡು ಪ್ರಮುಖ ಪುರಸ್ಕಾರಗಳನ್ನು ಗೆದ್ದಿದೆ.

ಬೆಂಗಳೂರು ವಿಮಾನ ನಿಲ್ದಾಣವು ಸಾಮಾನ್ಯ ವಿಭಾಗದಲ್ಲಿ `ಶ್ರೇಷ್ಠ ವಿಮಾನ ನಿಲ್ದಾಣ’ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ ಮತ್ತು `ಏವಿಯೇಷನ್ ಇನ್ನೊವೇಷನ್’ ಪುರಸ್ಕಾರ ಗಳಿಸಿದೆ. ಈ ಮಾನ್ಯತೆಯು ಉದ್ಯಮದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿದೆ ಮತ್ತು ಗ್ರಾಹಕ ಸೇವೆ, ಸೌಲಭ್ಯಗಳು ಮತ್ತು ಆವಿಷ್ಕಾರಗಳ ಮೌಲ್ಯಮಾಪನದ ನಂತರ ನೀಡಲಾಗುತ್ತದೆ.

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂದಿಯಾ ಈ ಪ್ರಶಸ್ತಿಗಳನ್ನು ಮಾರ್ಚ್ 25, 2022ರಂದು ಹೈದರಾಬಾದ್‌ನ ಹೋಟೆಲ್ ತಾಜ್ ಕೃಷ್ಣಾದಲ್ಲಿ ಪ್ರದಾನ ಮಾಡಿದ್ದು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯಮದ ನಾಯಕರು ಮತ್ತಿತರೆ ಪಾಲುದಾರರು ಉಪಸ್ಥಿತರಿದ್ದರು.
ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಎಫ್‌ಐಸಿಸಿಐ ಜಂಟಿಯಾಗಿ ಆಯೋಜಿಸಿದ್ದ ಈ ಪ್ರಶಸ್ತಿಗಳನ್ನು ಭಾರತದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದ ಮತ್ತು ಗಮನಾರ್ಹ ಕೊಡುಗೆಗಳನ್ನು ನೀಡಿದವರಿಗೆ ನೀಡಲಾಗುತ್ತದೆ ಎಂದುಎಂ.ಡಿ. ಮತ್ತು ಸಿಇಒ ಹರಿ ಮರಾರ್ ಹೇಳಿದರು.
“ಪ್ರಯಾಣಿಕರಿಗೆ ಉನ್ನತ ಪ್ರಯಾಣದ ಅನುಭವ ನೀಡುವಲ್ಲಿ ನಮ್ಮ ಸತತ ಪ್ರಯತ್ನಗಳಿಗೆ ವಿಂಗ್ಸ್ ಇಂಡಿಯಾ 2022ರಿಂದ ಈ ಪುರಸ್ಕಾರ ಪಡೆಯುವುದು ನಮಗೆ ನಿಜಕ್ಕೂ ಗೌರವ ತಂದಿದೆ. ವಿಶ್ವ ಮಟ್ಟದ ವಿಮಾನಗಳ ನಿರ್ವಾಹಕರಾಗಿ ಬೆಂಗಳೂರು ವಿಮಾನ ನಿಲ್ದಾಣವು ಡಿಜಿಟಲ್ ಪರಿಹಾರಗಳು ಹಾಗೂ ತಂತ್ರಜ್ಞಾನದ ಆವಿಷ್ಕಾರಗಳನ್ನು ಪೂರೈಸುವಲ್ಲಿ ಹೆಜ್ಜೆಗಳನ್ನು ಇರಿಸಿದ್ದು ಪ್ರಯಾಣವನ್ನು ತಡೆರಹಿತ ಮತ್ತು ಸ್ಮರಣೀಯವಾಗಿಸುತ್ತದೆ ಎಂದರು.

ಈ ಪ್ರಶಸ್ತಿಗಳು ನಮಗೆ ಪ್ರಯಾಣಿಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ನಮ್ಮ ಸೇವೆಗಳನ್ನು ಹೆಚ್ಚಿಸಲು ಮತ್ತಷ್ಟು ಪ್ರೇರೇಪಿಸುತ್ತವೆ” ಎಂದು ಹೇಳಿದರು.

 

Girl in a jacket
error: Content is protected !!