ಕೃಷ್ಟಜನ್ಮಾಷ್ಟಮಿ ಮತ್ತು ಅದರ ಆಚರಣೆ ಹೇಗೆ .ಈ ಆಚರಣೆ ಹೇಗೆ ಬಂತು ಎನ್ನುವ ಕುರಿತು ಸರ್ವಮಂಗಳ ಅವರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ
ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ
ಸರ್ವಮಂಗಳ
ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು ಮದ್ಯರಾತ್ರಿಯಲ್ಲಿ ವಸುದೇವನ ಪತ್ನಿಯಾದ ದೇವಕಿಯು ಶ್ರೀಕೃಷ್ಣನಿಗೆ ಜನ್ಮವಿತ್ತಳು…. ಸೂರ್ಯನು ಸಿಂಹ ರಾಶಿಯಲ್ಲಿರುವಾಗ ಜನ್ಮೋತ್ಸವವನ್ನು ವೈಭವದಿಂದ ಆಚರಿಸಬೇಕು. ..
ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸುವವರು ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುವರು. ಕೃಷ್ಣ ಜನ್ಮಾಷ್ಟಮಿ ಉಪವಾಸ ಕೋಟಿ ಸಂಖ್ಯಾ ಏಕಾದಶಿಗೆ ಸಮಾನವಾಗಿದೆ.ಯಾರು ಕೃಷ್ಣ ಜನ್ಮಾಷ್ಟಮಿ ವ್ರತವನ್ನಾಚರಿಸುವವರೋ ಅವನಿಗೆ ಶುಭ ಫಲಗಳು ಲಭಿಸುವವು . ಪುತ್ರ ಸಂತಾನ ,ಆರೋಗ್ಯ ಮತ್ತು ಆತುಲವಾದ ಸೌಭಾಗ್ಯದ ಪ್ರಾಪ್ತಿಯಾಗುವದು.
ಆಚರಣೆ ವಿಧಾನ…ಕೃಷ್ಣ ಜನ್ಮಾಷ್ಟಮಿ ದಿನವನ್ನು ಸಂಪೂರ್ಣ ಉಪವಾಸ ದಿಂದಲೇ ಕಳೆಯಬೇಕು.
ಶುದ್ಧವಾದ ಒಂದು ಸ್ಥಳದಲ್ಲಿ ದೇವಕೀ ದೇವಿಯ ಸಲುವಾಗಿ ಒಂದು ಸುಂದರವಾದ ಹೆರಗೆ ಮನೆಯನ್ನು ಮಾಡಬೇಕು , ಗೋಕುವನ್ನು ನಿರ್ಮಿಸಬೇಕು. ಗೋಕುಲದ ಮದ್ಯದಲ್ಲಿ ಷಷ್ಠಿದೇವಿಯೊಂದಿಗೆ ಶ್ರೀಕೃಷ್ಣನ ಪ್ರತಿಮೆಯನ್ನು ಇಡಬೇಕು. ಆ ಪ್ರತಿಮೆ ಯಥಾ ಶಕ್ತಿ ಬೆಳ್ಳಿ ,ತಾಮ್ರ ,ಹಿತ್ತಾಳೆ ,ಮೃತ್ತಿಕೆಯಿಂದಾಗಲಿ ಮಾಡಿದ್ದಿರಬೇಕು. ಕಟ್ಟಿಗೆಯಿಂದ ಮಾಡಿದ್ದರೂ ನಡೆಯುತ್ತೆ. ಮಂಚದ ಮೇಲೆ ತಾಯಿಯಸ್ತನ್ಯಪಾನ ಮಾಡುತ್ತಿರುವ ಶ್ರೀಕೃಷ್ಣನ ಪ್ರತಿಮೆಯನ್ನೂ ಇಡಬೇಕು, ಸೂತಿಕಾ ಗ್ರಹದ ಒಂದು ಸ್ಥಳದಲ್ಲಿ ಯಶೋದಾ ದೇವಿಯ ಪ್ರತಿಮೆಯನ್ನು ಮಾಡಿ ಇಡಬೇಕು. ಬಾಣಂತಿ ದೇವಕಿಯನ್ನು ಕೃಷ್ಣನ ಬದಿಗಿರುವಂತೆ ಇಡಬೇಕು.
ಬಲರಾಮ ,ಗೋಕುಲದಲ್ಲಿ ಕೈಮುಗಿದು ಕೊಂಡು ನಿಂತಿರುವ ದೇವತೆಗಳು , ಯಕ್ಷರು ವಿದ್ಯಾಧರರು ಮುಂತಾದವರ ಪ್ರತಿಮೆಯನ್ನು ಮತ್ತು ವಸುದೇವನ ಪ್ಪತಿಮೆಯನ್ನು ಮಾಡಿ ಇಡಬೇಕು. ನಂತರ ಮದ್ಯದಲ್ಲಿ ಇಟ್ಟಿರುವ ಕೃಷ್ಣ ನ ಪ್ರತಿಮೆಗೆ ಆಹ್ವಾನ ಅರ್ಘ್ಯ ಪಾದ್ಯ ಕೊಟ್ಟು ಹೂವಿನಿಂದ ಸ್ನಾನ ಪ್ರೋಕ್ಷಣೆ ಮಾಡಿ ಗೆಜ್ಜೆ ವಸ್ತ್ರವನ್ನು ಎರಿಸಿ ಗಂದ ಅಕ್ಷತೆ ನಾನಾ ಪರಿಮಳ ಪುಷ್ಪವನ್ನು ತುಳಸಿಮಾಲೆಯಿಂದ ಅಲಂಕರಿಸುತ್ತಾರೆ, ಕೃಷ್ಣ ಅಷ್ಟೋತ್ತರ ಹೇಳಿ ತುಳಸಿ ಪಾರಿಜಾತ ಪುಷ್ಪಳನ್ನು ಏರಿಸಿ. ವಸುದೇವ ,ದೇವಕಿಯುರ , ಶ್ರೀಕೃಷ್ಣನ ,ಬಲರಾಮ , ನಂದಯಶೋಧೆಯರ , ಒಂದೊಂದೇ ಹೇಸರು ಹೇಳುತ್ತಾ ಪೂಜಿಸಲಾಗುತ್ತದೆ, ಹಣ್ಣು ಹಾಲು ನೈವೇದ್ಯ .. ಮತ್ತು ಮನೆತನದಲ್ಲಿ ಯಾವರೀತಿ ಪದ್ದತಿ ಪ್ರಕಾರ ನೈವೇದ್ಯ ಮಾಡಿ… ಕೆಲವರು ಮದ್ಯರಾತ್ರಿಯಲ್ಲಿ ಅರ್ಘ್ಯ ಕೊಟ್ಟು ನಾನಾ ತರಹದ ಚಕ್ಕುಲಿ , ಉಂಡಿ ಫರಾಳವನ್ನು ನೈವೇದ್ಯ ಮಾಡುತ್ತಾರೆ ,ಕೆಲವರು ಬೇಳಿಗ್ಗೆ ಪೂಜೆಮಾಡಿದ ಮೇಲೆ ನೈವೇದ್ಯ ಮಾಡುತ್ತಾರೆ ಅದು ಅವರವರ ಮನೆಪದ್ದತಿ ಪ್ರಕಾರ ಮಾಡುತ್ತಾರೆ
ನಂತರ ಚಂದ್ರೋದಯವಾಗಲು ಶ್ರೀ ಹರಿಯನ್ನು ನೆನೆಸುತ್ತಾ ಶಶಾಂಕನಿಗೆ ಅರ್ಘ್ಯ ವನ್ನು ಕೊಡಲಾಗುತ್ತದೆ.
ಚಂದ್ರನಿಗೆ ಅರ್ಘ್ಯ ವನ್ನು ಕೊಡುವಾಗ ಹೇಳುವ ಮಂತ್ರ..ಹೀಗಿರುತ್ತದೆ…
ಕ್ಷೀರಸಾಗರದಲ್ಲಿ ಹುಟ್ಟಿದ ,ಅತ್ರಿಗೋತ್ರ ಸಮುದ್ಭೂತನಾದ , ರೋಹಿಣಿಪತಿಯಾದ ಚಂದ್ರನೇ ,ನಿನಗೆ ನಾನು ನಮಸ್ಕರಿಸುತ್ತೇನೆ. ನಾನು ಕೊಟ್ಟ ಅರ್ಘ್ಯ ವನ್ನು ಸ್ವೀಕರಿಸು ಅಂತ ಹೇಳಿ ಚಂದ್ರನಿಗೆ ಅರ್ಘ್ಯ ಕೊಟ್ಟು
ನಂತರ ಮದ್ಯರಾತ್ರಿಯಲ್ಲಿ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ತೂಗಿ ಆರತಿ ನೈವೇದ್ಯ ಮಾಡಲಾಗುತ್ತದೆ.
ನಂತರ ಶ್ರೀಕೃಷ್ಣನಿಗೆ ಶುದ್ಧವಾದ ಜಲವನ್ನು ಶಂಖದಲ್ಲಿ ಹಾಕಿ ಪುಷ್ಪ ಫಲ ಚಂದನಗಳೊಂದಿಗೆ ಅರ್ಘ್ಯ ವನ್ನು ಕೊಡಬೇಕು . ಅರ್ಘವನ್ನು ಕೊಡುವಾಗ ನೆಲದಮೇಲೆ ಮೊಳಕಾಲನ್ನು ಊರಿ ತೆಂಗಿನಕಾಯಿ ಸಮರ್ಪಣೆಯೊಂದಿಗೆ ಹೀಗೆ ಹೇಳಲಾಗುತ್ತದೆ..
ಇದನ್ನು ನಿಮಗೆ ಕನ್ನಡದಲ್ಲಿ ಕೆಲವರು ಹೀಗೆ ಹೇಳುತ್ತಾರೆ..
“ಹೇ ಶ್ರೀಹರೇ ಕಂಸನವಧೆ ಮಾಡುವದಕ್ಕಾಗಿ ಮತ್ತು ಭೂಭಾರ ವನ್ನು ಕಡಿಮೆ ಮಾಡುವದಕ್ಕಾಗಿ ಈ ಭೂಮಿಯ ಮೇಲೆ ಅವತಾರ ಮಾಡಿರುವಿ ದೇವಕ ದೇವಿಯಿಂದ ಸಹಿತನಾದ ನೀನು ನಾನು ಕೊಡುತ್ತಿರುವ ಈ ಅರ್ಘ್ಯ ವನ್ನು ಸ್ವೀಕರಿಸು ಪ್ರಭೋ ಅಂತ ಹೇಳಿ ಅರ್ಘ್ಯ ವನ್ನು ಕೊಟ್ಟು…”
ನಂತರ ಕೈಮುಗಿದು
ಹೇ ಜಗನ್ನಾಥ್ ದೇವಕಿಪುತ್ರ , ಪ್ರಭೋ, ವಸುದೇವಾತ್ಮಜಾ , ಅನಂತ ನನ್ನನ್ನು ಈ ಭವಸಾಗರದಿಂದ ಉದ್ವರಿಸು ಎಂದು ಪ್ರಾರ್ಥನೆ ಮಾಡುತ್ತಾರೆ.
ನಂತರ ಮಾರನೇಯ ದಿನ ಪಾರಣಿಮಾಡಿ ನಾನಾ ಭಕ್ಷ್ಯಗಳನ್ನು ಅಡುಗೆ ಮಾಡಿ ನೈವೇದ್ಯ ಆರತಿ ಮಾಡಲಾಗುತ್ತದೆ.
ಏನಿದು ಕಥೆಯ ವಿವರ
ಹಿಂದಕ್ಕೆ ಅಂಗದೇಶದಲ್ಲಿ ಮಿತಜಿತ ಎಂಬ ಹೆಸರಿನ ಒಬ್ಬರಾಜನಿದ್ದ ಅವನಿಗೆ ಮಹಾಸೇನ ಅನ್ನುವ ಮಗನಿದ್ದ ಅವನು ಯಾವಾಗಲೂ ಸದಾಚಾರದಿಂದಲೇ ರಾಜ್ಯಭಾರ ಮಾಡುತ್ತಿದ್ದ ಹೀಗೆ ಇರಬೇಕಾದರೆ ದೈವಯೋಗದಿಂದ ಪಾಕಂಡಿಗಳೊಂದಿಗೆ ವಾಸ ಪ್ರಸಂಗ ಬಂದಿತು,ಅವರ ಸಹವಾಸದಿಂದ ರಾಜನು ಅಧರ್ಮ ಕಾರ್ಯ ನಿರತನಾದ ವೇದಶಾಸ್ತ್ರ ಪುರಾಣಗಳನ್ನು ನಿಂದಿಸತೊಡಗಿದ.ನಂತರ ಅವನು ಗತಿಸಲು ಯಮದೂತರು ಪಾಶಗಳಿಂದ ಕಟ್ಟಿ ಯಮಧರ್ಮನಿದ್ದಲ್ಲಿ ಸೆಳೆದೊಯ್ದರು.
ನರಕದಲ್ಲಿ ಒಗೆಯಲ್ಪಟ ಅವನು ಬಹುವರುಷಗಳವರೆಗೆ ನರಕ ಯಾತನೆ ಅನುಭವಿಸಿ ದ ನಂತರ ಪಾಪಶೇಷದಿಂದ ಪಿಶಾಚಿಯೋನಿಯಲ್ಲಿ ಜನಿಸಿ ಹಸಿವು ನೀರಡಿಕೆಗಳಿಂದ ತಿರುಗಾಡುತ್ತಿರುವಾಗ
ದೈವ ನೀಯೊಗದಿಂದ ಋಷಿಮುನಿಗಳು ಮಾಡುತ್ತಿರುವ
ಕೃಷ್ಣ ಜನ್ಮಾಷ್ಟಮಿ ವ್ರತ ಪೂಜೆಯನ್ನು ಮತ್ತು ನಾಮ ಸಂಕಿರ್ತ್ಯನಾದಿಗಳಿಂದ , ಶ್ರೀಹರಿಯ ನಾಮ ಕಥೆಯನ್ನು ಶ್ರವಣಮಾಡಿ,
ಇದರಿಂದ ತಕ್ಷಣವೇ ಪಾಪ ಮುಕ್ತನಾಗಿ ಶುದ್ಧನಾದನು. ಪ್ರೇತ ದೇಹವನ್ನು ತ್ಯಜಿಸಿ ದಿವ್ಯ ವಿಮಾನದಲ್ಲಿ ಕುಳಿತು ವಿಷ್ಣುವಿನ ಸನ್ನಿಧಿ ಹೊಂದಿದನು…..ಇದು ಕಷ್ಣಜನ್ಮಾಷ್ಟಮಿಯ ಕಥೆಯ ವಿವರ…