ಏಕತೆಯನ್ನು ಸಾರುವ ವಿಶಿಷ್ಟ ಹಬ್ಬ ದೀಪಾವಳಿ
ಜಿ ಕೆ ಹೆಬ್ಬಾರ್ ಶಿಕಾರಿಪುರ
ದೀಪಗಳ ಹಬ್ಬ ದೀಪಾವಳಿ. ಅನೇಕ ಪುರಾಣ ಇತಿಹಾಸಗಳನ್ನು ಒಳಗೊಂಡಿರುವ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಐದು ದಿನಗಳ ಕಾಲ ಆಚರಿಸುವ ದೊಡ್ಡ ಹಬ್ಬ ಇದು. ವರ್ಷದ ಕೊನೆಯಲ್ಲಿ ಬರುವ ಈ ಹಬ್ಬವನ್ನು ಉತ್ತರ ಭಾರತದಲ್ಲಿ ಹೊಸ ವರ್ಷದ ಹಬ್ಬ ಎನ್ನುವ ರೀತಿಯಲ್ಲೂ ಆಚರಿಸುತ್ತಾರೆ. ಮನೆಯನ್ನು ಹಣತೆಯ ದೀಪದಿಂದ ಅಲಂಕರಿಸಿ, ಸಿಹಿ ಭೋಜನ ಹಾಗೂ ಪಟಾಕಿ ಸಿಡಿಸುವುದರ ಮೂಲಕ ಹಬ್ಬದ ಆಚರಣೆ ಸಂಭ್ರಮ-ಸಡಗರದಿಂದ ನೆರವೇರುವುದು.
೫ ದಿನಗಳ ಕಾಲ ಸುದೀರ್ಘವಾಗಿ ಆಚರಿಸಲಾಗುವ ಈ ಹಬ್ಬದ ಎರಡನೇ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಆಶ್ವಯುಜ ಮಾಸ, ಕೃಷ್ಣ ಪಕ್ಷದ ಹದಿನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಹಿಂದೂ ದಂತ ಕತೆಯ ಪ್ರಕಾರ ಈ ದಿನದಂದು ಕೃಷ್ಣ ಪರಮಾತ್ಮ, ಕಾಳಿ ದೇವಿ, ಸತ್ಯಭಾಮ ದೇವತೆಗಳು ದುಷ್ಟ ನರಕಾಸುರನನ್ನು ಸೋಲಿಸಿ ವಿಜಯ ಸಾಧಿಸಿದ್ದರು ಎಂದು ಗುರುತಿಸಲಾಗಿತ್ತು. ಪ್ರೀತಿಯಿಂದ ಈ ಹಬ್ಬವನ್ನು ಛೋಟಿ ದೀಪಾವಳಿ ಎಂದು ಸಹ ಕರೆಯುತ್ತಾರೆ. ನರಕ ಚತುರ್ದಶಿಯ ವಿಶೇಷ ವಿಚಾರ ಹಾಗೂ ಆಚರಣೆಯ ಬಗ್ಗೆ ಇರುವ ಪವಿತ್ರವಾದ ಮಹತ್ವದ ಇದೆ.
ಹಿಂದೂ ದಂತಕಥೆಯ ಪ್ರಕಾರ, ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ. ಇವನು ಹಲವಾರು ರಾಜ್ಯಗಳನ್ನು ಆಳುತ್ತಿದ್ದನು. ಇವನ ಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯ ಹಾಗೂ ಮೋಸಗಳನ್ನು ಮಾಡುತ್ತಿದ್ದನು. ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ ಒಳಗಾಗಿದ್ದನು. ನಂತರ ತಾನು ಸ್ವರ್ಗವನ್ನು ಆಳಬೇಕು ಎಂದು ಯಸಿದನು. ಈ ಬಯಕೆಯ ಪ್ರಯುಕ್ತ ಯುದ್ಧಕ್ಕಾಗಿ ಇಂದ್ರ ದೇವನನ್ನು ಆಹ್ವಾನಿಸಿದನು. ಇಂದ್ರನು ವಿಷ್ಣು ದೇವನಲ್ಲಿ ಸಹಾಯ ಯಾಚಿಸಿದನು. ಆಗ ವಿಷ್ಣು ದೇವರು ಕೃಷ್ಣನ ಅವತಾರದಲ್ಲಿ ಬಂದು ಸಹಾಯ ಮಾಡುವುದಾಗಿ ಭರವಸೆ ನೀಡಿದನು.
ಯಾವಾಗಲೂ ಒಳ್ಳೆಯದ್ದೇ ಗೆಲ್ಲುತ್ತದೆ
ನರಕಾಸುರನು ಹೆಂಗಸರನ್ನು ಹೊರತುಪಡಿಸಿ ಯಾರಿಂದಲೂ ಸೋಲನ್ನು ಹೊಂದಬಾರದು ಎಂದು ಬ್ರಹ್ಮನಿಂದ ವರ ಪಡೆದುಕೊಂಡಿದ್ದನು. ಭಗವಾನ್ ವಿಷ್ಣು ಕೃಷ್ಣನ ಅವತಾರದಲ್ಲಿರುವಾಗ ಗರುಡನನ್ನು ಸಾರ್ತಿ ಎಂದು ಕರೆದನು. ಅವನ ಹೆಂಡತಿ ಸತ್ಯಭಾಮ ನರಕಾಸುರನ ಮೇಲೆ ಆಕ್ರಮಣ ಮಾಡಿ ಕೊಂದಳು. ಈ ದಿನವನ್ನು ದುಷ್ಟನನ್ನು ಸಂಹವರಿಸಿ ವಿಜಯವನ್ನು ಪಡೆದ ದಿನವಾದ್ದರಿಂದ ವಿಜಯದ ಸಂಕೇತವಾಗಿ ಹಬ್ಬವನ್ನು ಆಚರಿಸಿದರು. ಈ ದಿನವನ್ನು ವಿವಿಧ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುವುದನ್ನು ಇಂದಿಗೂ ಕಾಣಬಹುದು.
ಈ ದೀಪಾವಳಿ ಹಬ್ಬವನ್ನು ದೇಶದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಈ ದಿನವನ್ನು ಕಾಳಿ ಚೌದಾಸ್ ಎಂದು ಖ್ಯಾತಿ ಪಡೆದುಕೊಂಡಿದೆ. ಕಾಳಿ ದೇವಿಯು ಕತ್ತಲೆ ಮತ್ತು ಹದಿನಾಲ್ಕನೇ ದಿನವನ್ನು ಸೂಚಿಸುತ್ತದೆ. ಕೋಲ್ಕತ್ತಾದ ಕೆಲವು ಪ್ರದೇಶದಲ್ಲಿ ದುರ್ಗಾದೇವಿಯ ವಿಗ್ರಹವನ್ನು ಇಂದಿನ ವರೆಗೂ (ಹದಿನಾಲ್ಕು ದಿನಗಳ ಕಾಲವೂ) ಇಟ್ಟುಕೊಂಡಿರುತ್ತಾರೆ. ಬಳಿಕ ರಾತ್ರಿಯ ವೇಳೆಯಲ್ಲಿಮುಳುಗಿಸುತ್ತಾರೆ
ದಕ್ಷಿಣ ಭಾರತ
ದಕ್ಷಿಣ ಭಾರದತ ಬಹುತೇಕ ಪ್ರದೇಶದಲ್ಲಿ ದೀಪಾವಳಿಯ ಹಬ್ಬವನ್ನು ರಾತ್ರಿಯ ಸಮಯದಲ್ಲಿ ಆಚರಿಸುತ್ತಾರೆ. ಪೂರ್ವ ಯೋಜಿತವಾಗಿ ಜನರು ಹಬ್ಬವನ್ನು ಸ್ವಾಗತಿಸಲು ಎಣ್ಣೆ ಸ್ನಾನ ಮಾಡುವುದರ ಮೂಲಕ ಪವಿತ್ರತೆಯನ್ನು ಪಡೆದುಕೊಳ್ಳುತ್ತಾರೆ. ನಂತರ ವಿಷ್ಣು ಅಥವಾ ವಿಠ್ಠಲನ ದೇವಸ್ಥಾನಕ್ಕೆ ಹೋಗುವಾಗ ಹಣೆಯ ಮೇಲೆ ಎಣ್ಣೆ ಮತ್ತು ಕುಂಕುಮ ಮಿಶ್ರಣದ ನಾಮವನ್ನು ಅನ್ವಯಿಸಿಕೊಳ್ಳುತ್ತಾರೆ.
ಮಹಾರಾಷ್ಟ್ರ, ಮುಂಬೈ ಮತ್ತು ಪುಣೆಯ ಜನರು ಈ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ “ಅಭ್ಯಂಗ ಸ್ನಾನ” ಮಾಡುತ್ತಾರೆ. ಚಂದನ, ಹಳದಿ, ಮುಲ್ತಾನಿ ಮಿಟ್ಟಿ, ಕಡ್ಲೇ ಹಿಟ್ಟು, ಗುಲಾಬಿ ನೀರುಗಳನ್ನು ಸೇರಿಸಿ ಮಿಶ್ರಣ ಮಾಡುತ್ತಾರೆ. ಅದನ್ನು ಉಬ್ಬನ್ ಎಂದು ಕರೆಯುವರು. ಸ್ನಾನಕ್ಕೂ ಮುನ್ನ ಮನೆಯ ಮಂದಿಯೆಲ್ಲಾ ಪರಸ್ಪರ ಉಬ್ಬನ್‌ಅನ್ನು ದೇಹಕ್ಕೆ ಅನ್ವಯಿಸಿಕೊಳ್ಳುವುದರ ಮೂಲಕ ಸಂತೋಷ ಪಡುತ್ತಾರೆ. ಬಳಿಕ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಸಿದ್ಧತೆಯ ಮೂಲಕ ಗಣೇಶ ಮತ್ತು ವಿಷ್ಣು ದೇವರ ಆರಾಧನೆ ಮಾಡಲಾಗುವುದು. ಈ ವರ್ಷ ಅಭ್ಯಂಗ ಸ್ನಾನಕ್ಕೆ ಸೂಕ್ತ ಸಮಯವೆಂದರೆ ಮುಂಜಾನೆ ೫.೨೨ರಿಂದ ಮುಂಜಾನೆ ೬.೪೬ರವರೆಗೆ ಎನ್ನಲಾಗುವುದು.
ಗೋವಾದ ಜನರು ತಮ್ಮ ದಿನಚರಿಯನ್ನು ಆರಂಭಿಸುವ ಮೊದಲು ನರಕಾಸುರನನ್ನು ದಹನ ಅಥವಾ ಸುಟ್ಟಿ ನಾಶಪಡಿಸುತ್ತಾರೆ. ನಂತರ ಸ್ನಾನ ಮಾಡಿ ಪವಿತ್ರತೆ ಪಡೆದು ದೇವರ ಪೂಜೆ ಮಾಡುತ್ತಾರೆ.
ಉತ್ತರ ಭಾರತದ ಹಲವೆಡೆ ವಿಶೇಷವಾಗಿ ಉಬ್ಬನ್ ಅನ್ನು ತಯಾರಿಸುತ್ತಾರೆ. ಸ್ನಾನಕ್ಕಿಂತಲೂ ಮೊದಲು ಉಬ್ಬನ್‌ಅನ್ನು ದೇಹಕ್ಕೆ ಸಂಪೂರ್ಣವಾದಗಿ ಅನ್ವಯಿಸಿಕೊಳ್ಳುತ್ತಾರೆ. ಸಂಜೆಯ ಸಮಯದಲ್ಲಿ ದೀಪ ಹಚ್ಚುವಾಗ ದೇಹದಿಂದ ತೆಗೆದ ಉಬ್ಬನ್ ಅನ್ನು ಬೆಂಕಿಯೊಳಗೆ ಬಿಸಾಡುತ್ತಾರೆ. ಇದು ಕಲ್ಮಶ ಎಂದು ಪರಿಗಣಿಸಲಾಗುವುದು. ಅಲ್ಲದೆ ಅದನ್ನು ದೂರ ಇರಿಸುತ್ತಾರೆ.
ನೀರು ಹಬ್ಬ ಹಾಗೂ ಎಣ್ಣೆ ಸ್ನಾನದ ಮಹತ್ವ
ಹಬ್ಬದ ದಿನ ಮುಂಜಾನೆ ಅಭ್ಯಂಗ ಸ್ನಾನ ಮಾಡಿ ವಿಷ್ಣು ದೇವಸ್ಥಾನ ಮತ್ತು ಕೃಷ್ಣನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ. ನಮಗೆ ಬಂದ ದುಸ್ಥಿತಿಗಳು ಮಾಯವಾಗುತ್ತವೆ. ಅದೃಷ್ಟ, ಸಮೃದ್ಧತೆ ಹಾಗೂ ಸಂತಸವು ಜೀವನದಲ್ಲಿ ದ್ವಿಗುಣವಾಗುವುದು. ನಮ್ಮ ಪಾಪಗಳು ನಿವಾರಣೆಯಾಗಿ ಪುರ್ಣಯ ಲಭಿಸುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.
ಹಬ್ಬದ ದಿನ ಉಬ್ಬನ್ ಸ್ನಾನ ಮಾಡಿ ಹೊಸ ಬಟ್ಟೆಯನ್ನು ತೊಟ್ಟಿಕೊಂಡರೆ ಕುಬೇರ ದೇವರಿಗೆ ಮೆಚ್ಚುಗೆಯಾಗುವುದು. ಅಲ್ಲದೆ ತನ್ನ ಭಕ್ತರಿಗಾಗಿ ಅಪಾರ ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವದಿಸುವನು ಎನ್ನುವ ನಂಬಿಕೆಯಿದೆ. ಕುಬೇರ ದೇವನು ಜೀವನದಲ್ಲಿ ಇದ್ದ ಎಲ್ಲಾ ಚಿಂತೆಗಳನ್ನು ನಿವಾರಿಸಿ ಜೀವನದಲ್ಲಿ ಸಂತೋಷವನ್ನು ಪೂರೈಸುವನು
ಕೆಲವು ನಂಬಿಕೆಗಳ ಪ್ರಕಾರ, ಮನೆಯಲ್ಲಿ ಇರುವ ಮುದುಕರು ಅಥವಾ ವಯಸ್ಸಾದವರು ಮನೆಯ ಸುತ್ತಲೂ ದೀಪವನ್ನು ಬೆಳಗಿಸಬೇಕು. ದೀಪವು ಮನೆಯ ಆವರಣದಿಂದ ಅಂತರವನ್ನು ಹೊಂದಿರಬೇಕು ಎನ್ನುವುದನ್ನು ಮರೆಯಬಾರದು. ದೀಪದ ಜ್ವಾಲೆಯಲ್ಲಿ ಸಿಕ್ಕಿ ಬಿದ್ದ ಎಲ್ಲಾ ಕೆಟ್ಟ ಶಕ್ತಿಗಳು ನಾಶವಾಗುತ್ತವೆ. ಮನೆಗೆ ಒಳ್ಳೆಯ ಶಕ್ತಿಯ ಆಗಮನವಾಗುವುದು.