ಅಂಬರ್ ಗ್ರೀಸ್ ಹೆಸರಲ್ಲಿ ತಿಮಿಂಗಿಲಗಳಿಗೂ ಗಂಡಾಂತರ..!!

Share

 

Writing;ಪರಶಿವ ಧನಗೂರು

ಅಂಬರ್ ಗ್ರೀಸ್ ಹೆಸರಲ್ಲಿ ತಿಮಿಂಗಿಲಗಳಿಗೂ ಗಂಡಾಂತರ..!!

ಇತ್ತೀಚೆಗೆ ಈ ಸ್ಮಗ್ಲಿಂಗ್ ಜಗತ್ತು ದೋ ನಂಬರ್ ದಂಧೆಕೋರರ ಗುಂಪುಗಳು ಕೋಟ್ಯಂತರ ರೂಪಾಯಿಗಳ ಆಸೆಯಿಂದ ತಿಮಿಂಗಿಲ ವಾಂತಿಯ ಹಿಂದೆ ಬಿದ್ದಿದ್ದಾರೆ! ಈಗ ಎಲ್ಲೆಲ್ಲೂ ತೆಲುವ ಚಿನ್ನ! ಸಮುದ್ರ ನಿಧಿ! ಎಂದು ಕರೆಸಿಕೊಳ್ಳುವ ಅಂಬರ್ ಗ್ರೀಸ್ ಎಂಬ ತಿಮಿಂಗಿಲ ವಾಂತಿಯದ್ದೇ ವಾಸನೇ!! ಮಾಂಸಾಹಾರಿ ಸಸ್ತನಿಯಾದ ಅಳಿವಿನಂಚಿನಲ್ಲಿರುವ ಸ್ಪರ್ಮ್ ವೇಲ್ ಜಾತಿಯ ಈ ತಿಮಿಂಗಿಲ ವಾಂತಿಗೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರಿ ಬೇಡಿಕೆ! ಈಗ ಸದ್ಯಕ್ಕೆ ಭೂಮಿ ಮೇಲೆ ಅತಿ ದೊಡ್ಡ ಜೀವಿ ಎನಿಸಿಕೊಂಡಿರುವ ಈ ವೀರ್ಯ ತಿಮಿಂಗಿಲದ ಹೊಟ್ಟೆಯಲ್ಲಿ ಅಪರೂಪದ ನಿಧಿಯಿದೆ ಎನ್ನುವಷ್ಟರ ಮಟ್ಟಿಗೆ ತಿಮಿಂಗಿಲ ವಾಂತಿಯನ್ನು ಜನರು ಆರಾಧಿಸಲು ಸುರುಮಾಡಿದ್ದಾರೆ! ಮೀನಿನ ಮಲಕ್ಕೂ ಮಹಾನ್ ಗೌರವ! ಎಲ್ಲಾಕಡೆ ಅಂಬರ್ ಗ್ರೀಸ್ ನದ್ದೇ ಹವಾ! ವಾಂತಿ ಎಂದರೆ ಮಾರು ದೂರ ಓಡುವ ಮಾನವ ಈ ತಿಮಿಂಗಿಲ ವಾಂತಿಗಾಗಿ ಸಮುದ್ರತೀರದಲ್ಲಿ ಹಗಲು ರಾತ್ರಿ ನಿದ್ದೆಗೆಟ್ಟು ತಪಸ್ಸು ಮಾಡುತ್ತಾ ಕಾಯುತ್ತಿದ್ದಾನೆಂದರೇ ನೀವೂ ನಂಬಲೇಬೇಕು. ಏಕೆಂದರೆ ಈಗ ಜಗತ್ತಿನ ಬ್ಲಾಕ್ ಮಾರ್ಕೆಟ್ ನಲ್ಲಿ, ಕೆಲವು ದೇಶಗಳ ಓಪನ್ ಮಾರ್ಕೆಟ್ ನಲ್ಲೂ ಈ ಅಂಬರ್ ಗ್ರೀಸ್ ಸದ್ದು ಮಾಡುತ್ತಿದೆ; ದುಡ್ಡೂ ಮಾಡುತ್ತಿದೆ! ಇದರ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಗೊಂದು ಕೋಟಿಯಂತೇ!! ಹಾಗಾದರೇ ಕೋಟಿ ಯಾರಿಗೆ ತಾನೇ ಬೇಡವೇಳೀ? ಅದಕ್ಕಾಗಿಯೇ ಈಗ ಕೋಟ್ಯಂತರ ರೂಪಾಯಿ ಹಣ ಸಂಪಾದಿಸಲು ಸಾರ್ಟ್ ಕಟ್ ವಿದ್ಯೆ.. ವಾಂತಿ ವ್ಯಾಪಾರ! ಐಷಾರಾಮಿ ಭಂಗಲೆಯ ಜನರಿಗಾಗಿ ದುಬಾರಿ ಬೆಲೆಯ ಸುಗಂಧ ದ್ರವ್ಯ (ಸೆಂಟ್)ತೈಲ ತಯಾರಿಸಲು ಈ ತಿಮಿಂಗಿಲ ವಾಂತಿಯನ್ನು ಉಪಯೋಗಿಸುತ್ತಾರೆ ಎಂಬ ಸೆನ್ಸೇಷನಲ್ ಸುದ್ಧಿ ಅದ್ಯಾವಾಗಿನಿಂದ ಪ್ರಸಾರವಾಯ್ತೋ ಗೊತ್ತಿಲ್ಲ ಈಗದು

 

ಜಗತ್ತಿನ ಎಲ್ಲೆಡೆ ವೈರಲ್ ಆಗಿದೆ ಆದ ಕಾರಣಕ್ಕಾಗಿಯೆ ಈಗ ಪಾಪ ಅಪರೂಪದ ಅಳಿವಿನಂಚಿನ ಸಮುದ್ರ ಜಲಚರ ಜೇವಿಗಳಾದ ತಿಮಿಂಗಿಲಗಳಿಗೆ ಗಂಡಾಂತರ ಎದುರಾಗಿದೆ! ಕಡಲ್ಗಳ್ಳರು ಈ ತಿಮಿಂಗಿಲ ವಾಂತಿಗಾಗಿ ಸಮುದ್ರದ ಅಲೆಗಳನ್ನೂ ಲೆಕ್ಕಿಸದೇ ಆಳಸಮುದ್ರಕ್ಕೆ ಲಗ್ಗೆ ಇಟ್ಟು ತಿಮಿಂಗಿಲಗಳನ್ನು ವಾಂತಿಗಾಗಿ ಕೊಂದು ಮಾರಣಹೋಮ ನಡೆಸುತ್ತಿರುವ ವರದಿಗಳು ಆತಂಕಕ್ಕೆ ಕಾರಣವಾಗಿದೆ!
ಜಗತ್ತಿನ ಕೆಲವು ಪ್ರತಿಷ್ಠಿತ ಸುಗಂಧ ದ್ರವ್ಯ ತಯಾರಿಕ ಕಂಪನಿಗಳು ವಿಶೇಷವಾಗಿ ಈ ತಿಮಿಂಗಿಲ ವಾಂತಿಯೆಂಬ ಅಂಬರ್ ಗ್ರೀಸ್ ವಸ್ತುವಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ! ಡಾರ್ಕ್ ನೆಟ್ ವೆಬ್ ಸೈಟ್ ನಲ್ಲೂ ಕೂಡ ಕಾಳಸಂತೆಯ ಕರಾಳ ದಂಧೆ ಕೋರರು ಇದೇ ಅಂಬರ್ ಗ್ರೀಸ್ ವಸ್ತುವಿಗಾಗಿ ಬೇಡಿಕೆ ಇಡುತ್ತಿದ್ದಾರೆಂಬ ಸುದ್ಧಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ

ಇದ್ದಕ್ಕಿದ್ದಂತೆ ಸಮುದ್ರದೊಳಗೆ ಮೀನು, ಮುತ್ತು,ರತ್ನ ಹವಳ, ಹುಡುಕುತಿದ್ದ ವರ್ತಕರು, ತಿಮಿಂಗಿಲ ಮೀನಿನ ಮಾಂಸ ಮೂಳೆಗಳಿಗಾಗಿ ಬೇಟೆಯಾಡುತಿದ್ದ ಕಡಲ್ಗಳ್ಳರು ಎಲ್ಲಾ ಬಿಟ್ಟು ತಲೆಕೆಡಿಸಿಕೊಂಡು ಈಗ ನೇರವಾಗಿ ಅಂಬರ್ ಗ್ರೀಸ್ಗಾಗಿ ಸಮುದ್ರದ ಮೇಲೆ ಸವಾರಿ ಹೊರಟಿದ್ದಾರೆ! ಅವರ ಕಣ್ಢುಗಳಲ್ಲೀಗ ಕೋಟಿಯ ಕನಸು! ತಿಮಿಂಗಿಲ ವಾಂತಿಯ ಹೊಳಪು! ಸ್ಟರ್ಮ್ ವೇಲ್ ಜಾತಿಯ ಜಲಚರ ಸಸ್ಣನಿಯಾದ ಈ ತಿಮಿಂಗಿಲದ ಹೊಟ್ಟೆಯಲ್ಲಿ ವಿಶಿಷ್ಟ ರೀತಿಯ ಕೆಮಿಕಲ್ ಸಂಯೋಜನೆ ಯಿಂದ ಉಂಟಾಗುವ ಬೂದುಬಣ್ಣದ ಅಂಟು ಅಂಟಾದ ಕೆಲವೊಮ್ಮೆ ಗಟ್ಟಿಯಾದ ಕಲ್ಲಿನಂತಹ ವಸ್ತು ವನ್ನು ತಿಮಿಂಗಿಲದ ಹೊಟ್ಟೆ ಬಗೆದು ಕೊಂದು ತರಲು ಹಿಂಡು ಗಟ್ಟಲೇ ಸ್ಮಗ್ಲರ್ ಗಳು ಆಯ್ದ ಕಡಲತಡಿಯಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತ್ತಿರುವ ವಿಚಾರ ಹರಿದಾಡುತ್ತಿದೆ! ಪ್ರಾಚೀನ ಕಾಲದಿಂದಲೂ ಇತಿಹಾಸ ಹೊಂದಿರುವ ಈ ಅಂಬರ್ ಗ್ರೀಸ್ ಅನ್ನು ಜಗತ್ತಿನ ಮೊದಲ ಮಹಾಮಾರಿ ಪ್ಲೇಗ್ ವಿರುದ್ಧ ಮುಲಾಮಿನಂತೆ ಬಳಸಲಾಗಿತ್ತಂತೇ! ಆಗಲೇ ಹಲವಾರು ರೋಗಗಳನ್ನು ಗುಣಪಡಿಸುವ ವೈದ್ಯಕೀಯ ಪರ್ಯಾಯವಾಗಿ ಈ ತಿಮಿಂಗಿಲ ವಾಂತಿಯನ್ನು ಉಪಯೋಗಿಸಿದ್ದಾರೆ ಎನ್ನಲಾಗುತ್ತಿದೆ!

ನಮ್ಮ ಪೂರ್ವಜರು ಪರಿಮಳ ದ್ರವ್ಯದ ಜೊತೆಗೆ ಮಸಾಲ ಪದಾರ್ಥಗಳಲ್ಲೂ ಬಳಕೆ ಮಾಡುವ ಅಭ್ಯಾಸವಿಟ್ಟುಕೊಂಡಿದ್ದರಂತೇ! ಹಲವು ವಿಧದ ಮದ್ಯಪಾನಗಳಿಗೆ ಸುವಾಸನೆ ತರಲು ಈ ಅಂಬರ್ ಗ್ರೀಸ್ ವಸ್ತುವನ್ನು ಬಳಸುತಿದ್ದರಂತೇ! ಈಜಿಪ್ಟ್ ನವರು ಇದನ್ನು ದೂಪದ ದ್ರವ್ಯ ವಾಗಿ ಸುಡುತ್ತಿದ್ದರಂತೆ! ಚೀನಾದವರು ಇದನ್ನು ಡ್ರಾಗನ್ಸ್ ಸ್ಪಿಟಲ್ ಸುಗಂಧವೆಂದು ಬಳಸುತ್ತಿದ್ದರಂತೆ!
ಈ ಎಲ್ಲಾ ಊಹಾಪೋಹ ಉದಾಹರಣೆಗೆ ಯಾವುದೇ ಸರಿಯಾದ ವೈಜ್ಞಾನಿಕ ಪುರಾವೆಗಳಳಿಲ್ಲದಿದ್ದರೂ ಈಗ ಸದ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತಿಮಿಂಗಿಲ ವಾಂತಿಗಾಗಿ ಮಾತ್ರ ಬೇಡಿಕೆ ಇರುವುದಂತೂ ಸುಳ್ಳಲ್ಲ. ಆದ ಕಾರಣದಿಂದಲೇ ಅಂಬರ್ ಗ್ರೀಸ್ ಸಿಕ್ಕರೇ ಒಂದೇ ಸಲಕ್ಕೆ ಒಂದೇ ದಿನಕ್ಕೆ ಕೋಟಿ ಕೋಟಿ ಹಣ ಗಳಿಸಬಹುದೆಂಬ ಲೆಕ್ಕಾಚಾರ ಹಾಕುತ್ತಾ ಹಲವಾರು ಮಾಫಿಯಾ ಗ್ಯಾಂಗ್ ಗಳು ದೋ ನಂಬರ್ ದಂಧೆಕೋರರು ಈ ತಿಮಿಂಗಿಲ ವಾಂತಿಯನ್ನು ಹುಡುಕಿಕೊಂಡು ಸಮುದ್ರದಾಳದಲ್ಲಿ ಬೆಲೆ ಬೀಸುತ್ತಾ ಅಲೆಯುತ್ತಿದ್ದಾರಂತೆ! ಕರಾವಳಿ ತೀರಗಳಲ್ಲಿ ಹಗಲು ರಾತ್ರಿ ಚಳಿಮಳೆಯೆನ್ನದೇ ಕಾಯುತ್ತಾ ತಿಮಿಂಗಿಲ ವಾಂತಿಯು ತೇಲಿಬರುವುದೇನೋ ಎಂಬ ಭ್ರಮೆಯಲ್ಲಿ ಕೆಲವರು ಅಲ್ಲಿಯೇ ಟೆಂಟ್ ಹಾಕಿ ಕಾರ್ಯಾಚರಣೆ ಗಿಳಿದಿರುವ ಸುದ್ದಿಯೂ ಹರಿದಾಡುತ್ತಿವೆ. ಇನ್ನೂ ಕೆಲವು ದಂಧೆ ಕೋರ ವಂಚಕರು ಈ ತಿಮಿಂಗಿಲ ವಾಂತಿಯನ್ನು ಹೋಲುವ ನಕಲೀ ಮೇಣದ ಅಂಬರ್ ಗ್ರೀಸ್ ತಯಾರಿಸಿ ಇಟ್ಟುಕೊಂಡು ಕೋಟ್ಯಂತರ ರೂಪಾಯಿ ಹಣ ಸಂಪಾದಿಸಲು , ವ್ಯಾಪಾರ ಮಾಡಿ ಯಾಮಾರಿಸಿ ಮೋಸ ಮಾಡಲು ಕಾದು ಕುಳಿತಿದ್ದಾರೆ ಎಂಬ ಮಾಹಿತಿಯೂ ಇದೆ.

ರೈಸ್ ಪುಲ್ಲಿಂಗ್ ದಂಧೆಕೋರರು ತಯಾರಿಸಿರುವ ಈ ನಕಲೀ ಅಂಬರ್ ಗ್ರೀಸ್ ಕೂಡ ಈಗ ಕೆಲವರ ಬಳಿಯಿವೆ! ರೆಡ್ ಮರ್ಕೂರಿ, ಈಸ್ಟ್ ಇಂಡಿಯಾ ಕಂಪನಿ ಬಾಂಡ್ ಪೇಪರ್ ಗಳು, ತಾಮ್ರದ ಚೆಂಬಿನ ಜೊತೆಗೆ ಈ ನಕಲಿ ತಿಮಿಂಗಿಲ ವಾಂತಿಯನ್ನು ವ್ಯಾಪಾರಕ್ಕಿಟ್ಟು ವಂಚನೆ ನಡೆಸುವ ಗುಂಪುಗಳು ಈಗ ದೇಶಾದ್ಯಂತ ಅಲ್ಲಲ್ಲಿ ಸಕ್ರಿಯವಾಗಿವೆ! ಯಾಮಾರಿದರಂತೂ ಚೆಂಬು ಗ್ಯಾರಂಟಿ. ನಕಲೀ ಪ್ರಾಡೆಕ್ಟ್ ಗಳನ್ನೇ ಒರಿಜಿನಲ್ ಎಂದು ನಂಬಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆಯೆಂದು ಯಾಮಾರಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಬಿಸಿನೆಸ್ ಮ್ಯಾನ್ ಗಳನ್ನು, ವಂಚಿಸುವ ನೆಟ್ವರ್ಕ್ ಜಾಲಗಳೇ ಕೊರೋನೋತ್ತರ ವಿಶ್ವದಲ್ಲಿ ಈಗ ಹೆಚ್ಚು ಸಕ್ರಿಯವಾಗಿವೆ.ಈಗ ಭಾರತದಲ್ಲಷ್ಟೆ ಅಲ್ಲದೆ ಹಲವಾರು ದೇಶಗಳಲ್ಲೂ ಇಂತದೇ ಅಂಬರ್ ಗ್ರೀಸ್ ಹವಾ ಜೋರಾಗಿಯೇ ಎದ್ದಿದೆ. ಕೆಲವರು ರೈಸ್ ಪುಲ್ಲಿಂಗ್ ಎಂಬ ತಾಮ್ರದ ವಸ್ತುವಿಗಾಗಿ ಹಿಂದೆ ಬಿದ್ದಿದ್ದಂತೆ ಈ ತಿಮಿಂಗಿಲ ವಾಂತಿಗಾಗಿ ಹಿಂದೆ ಬಿದ್ದು ಕೋಟಿಗಟ್ಟಲೆ ಹಣ ಗಳಿಸುವ ಆಸೆಯಿಂದ ಜನರನ್ನು ವಂಚಿಸುತ್ತಾ ಪೊಲೀಸರ ಅತಿಥಿಗಳಾಗುತ್ತಾ ಜೈಲು ಸೇರುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ದ ಹಲವಾರು ಜಿಲ್ಲೆಗಳಲ್ಲಿ ಇಂತಹ ಹಲವಾರು ಅಂಬರ್ ಗ್ರೀಸ್ ಗ್ಯಾಂಗ್ ಗಳನ್ನು ಹಿಡಿದು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿರುವ ಕರ್ನಾಟಕ ಪೊಲೀಸರು ಈ ತಿಮಿಂಗಿಲ ವಾಂತಿಯ ಹಿಂದಿನ ಕರಾಳ ದಂಧೆಯನ್ನು ಬೇಧಿಸಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

 


ಈ ಅಂಬರ್ ಗ್ರೀಸ್ ನಮ್ಮ ಭಾರತದಲ್ಲಿ ನಿಷೇಧಿತ ವಸ್ತುವಾಗಿದ್ದು ಈ ಸ್ಟರ್ಮ್ ವೇಲ್ ಜಾತಿಯ ಜಲಚರ ಪ್ರಾಣಿಗಳ ಶಿಕಾರಿಯನ್ನು ,ದಾಸ್ತಾನು, ಸ್ಮಗ್ಲಿಂಗ್ ಮಾರಾಟವನ್ನು ಸಂಪೂರ್ಣ ವಾಗಿ ಕಾನೂನು ಬಾಹಿರವಾಗಿ ನಿಷೇಧಿಸಲಾಗಿದೆ. ಈಗ ಈ ತಿಮಿಂಗಿಲಗಳನ್ನು ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ವನ್ಯ ಪ್ರಾಣಿಗಳೆಂದು ಘೋಷಣೆ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅಡಿ ಕೊಲ್ಲುವ, ಸ್ಮಗ್ಲಿಂಗ್ ಮಾಡುವ ಆರೋಪಿಗಳನ್ನು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗಟ್ಟಬಹುದಾಗಿದೆ. ಕೆ.ಜಿ.ಗೊಂದು ಕೋಟಿ ಬೆಲೆ ಬಾಳುವ ವಸ್ತುವೆಂದು ಈ ತಿಮಿಂಗಿಲ ವಾಂತಿಯನ್ನು ಬೆನ್ನತ್ತಿ, ರಾತ್ರಿ ಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗುವ ಹುಚ್ಚು ಮೋಹಕ್ಕೆ ಬಿದ್ದು ವಾರಕ್ಕೊಂದು ತಂಡ ಈಗ ರಾಜ್ಯದಲ್ಲಿ ಬಂದೀಖಾನೆಗೆ ಅಂದರ್ ಆಗುತ್ತಿವೆ. ನಿಜವಾಗಲೂ ಈ ತಿಮಿಂಗಿಲ ವಾಂತಿಗೆ (ಅಂಬರ್ ಗ್ರೀಸ್) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಷ್ಟೊಂದು ಕಿಮ್ಮತ್ತು ಇದೆಯಾ? ಒಂದು ಕೆ.ಜಿ. ಅಂಬರ್ ಗ್ರೀಸ್ ಒಂದು ಕೋಟಿ ಬೆಲೆಬಾಳುತ್ತಾ? ಎಂಬುದು ಈಗಲೂ ಬಗೆಹರಿಯದ ಪ್ರಶ್ನೆಯೇ. ಏಕೆಂದರೆ ಹಲವಾರು ವಂಚಕರ ಜಾಲಗಳು ಹೆಣೆದಿರುವ ಬಲೆಯಾಗಿರಲೂಬಹುದು. ಸುಗಂಧ ದ್ರವ್ಯಗಳನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಈ ತಿಮಿಂಗಿಲ ವಾಂತಿಯ ಯಾವ ಪಾತ್ರ ವಹಿಸುತ್ತದೆ? ನಿಜವಾಗಲೂ ಈ ಅಂಬರ್ ಗ್ರೀಸ್ ಗೆ ಅಂತಹ ವಿಶೇಷ ಗುಣವಿದೆಯೇ? ಎಂಬ ಅನುಮಾನಗಳು ಈಗ ತನಿಖೆ ನಡೆಸುತ್ತಿರುವ ಪೊಲೀಸರಿಗೂ ಕಾಡುತ್ತಿವೆ. ಏಕೆಂದರೆ ಇದುವರೆಗೂ ಹಲವಾರು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಹೂವು, ಹೆಣ್ಣುಗಳು ಮತ್ತು ಕೆಲವು ಸಸ್ಯಗಳು ಮರಗಳ ಎಲೆಗಳು, ತೊಗಟೆಯನ್ನು ಬಳಸಿ ಸುವಾಸನಾ ಭರಿತವಾದ ವೈವಿಧ್ಯಮಯವಾದ ಹಲವಾರು ಸುಗಂಧ ದ್ರವ್ಯಗಳನ್ನೂ, ಆಹಾರ ಪದಾರ್ಥಗಳಿಗೆ ಬಳಸುವ ಸುಗಂಧವನ್ನು ಸೂಸುವ ಎಣ್ಣೆ ಗಳನ್ನೂ, ಮದ್ಯಪಾನಕ್ಕೆ ಬೆರೆಸುವ ದ್ರವ್ಯಗಳನ್ನು ತಯಾರಿಸಲಾಗುತ್ತಿದೆ ಆದರೆ ಎಲ್ಲಿಯೂ ತಿಮಿಂಗಿಲ ವಾಂತಿಯ ಮಹತ್ವದ ಬಗ್ಗೆಯಾಗಲೀ ಪ್ರಾಮುಖ್ಯತೆ ವಿಚಾರವಾಗಲೀ ಸುದ್ದಿಗೆ ಬಂದಿರಲಿಲ್ಲ. ಆದರೂ ಈಗ ಎಲ್ಲಾ ಕಡೆಯೂ ಸುವಾಸನೆ ಭರಿತ ಸೆಂಟುಗಳ ಹಿಂದೆ ವಾಂತಿಯ ವಾಸನೆ ಹರಿದಾಡುತ್ತಿದೆ! ಮಧ್ಯ ಪ್ರಾಚ್ಯದ ಅರಬ್ ಯೆಮೆನ್ ನಾ ದಕ್ಷಿಣ ಭಾಗದ ಕಡಲಿನಲ್ಲಿ ಮೀನು ಬೇಟೆಗೆ ಹೋಗಿದ್ದ 35 ಜನ ಮೀನುಗಾರರಿಗೆ 127 ಕೆ.ಜಿ. ತಿಮಿಂಗಿಲ ವಾಂತಿ ಸಿಕ್ಕಿದ್ದರಿಂದ ಅವರೆಲ್ಲಾ ರಾತ್ರೋರಾತ್ರಿ ಕೋಟ್ಯಾಧಿಪತಿ ಗಳಾದರೂ! ಜಪಾನಲ್ಲೊಬ್ಬ ಮೀನು ಹಿಡಿಯಲು ಹೋಗಿದ್ದ ಬಡವನೊಬ್ಬ ಅಂಬರ್ ಗ್ರೀಸ್ ಸಿಕ್ಕು ಶ್ರೀಮಂತನಾದ! ಎಂಬಿತ್ಯಾದಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹರಿದಾಡುತ್ತಿವೆ. ಬ್ಲಾಕ್ ಗೋಲ್ಡ್ ಎಂದು ಕರೆಯುವ ಈ ಅಂಬರ್ ಗ್ರೀಸ್ ರೂಪುಗೊಳ್ಳಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಆದರೇ ಈ ಅಂಬರ್ ಗ್ರೀಸ್ ಕದಿಯಲು ಕಡಲ್ಗಳ್ಳರು ಕ್ಷಣದಲ್ಲೇ ತಿಮಿಂಗಿಲಗಳನ್ನು ಕೊಂದು ನಿರ್ನಾಮ ಮಾಡಲು ಹೊರಟಿದ್ದಾರೆ. ಸುಗಂಧ ದ್ರವ್ಯಗಳು ಹೆಚ್ಚು ಕಾಲ ಕೆಡದಂತೆ ಸುವಾಸನೆ ಭರಿತ ವಾಗಿರಲು ಈ ಅಂಬರ್ ಗ್ರೀಸ್ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಅಂಬರ್ ಗ್ರೀಸ್ ಗಾಗಿ ತಿಮಿಂಗಿಲ ಗಳನ್ನು ಕೊಲ್ಲಬೇಕಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ದಿನೇ ದಿನೇ ದುಬಾರಿ ಯಾಗುತ್ತಿದೆಯಂತೇ! ಈ ವೀರ್ಯ ತಿಮಿಂಗಿಲಗಳು ಅಪರೂಪದ ಪ್ರಭೇದಗಳಾಗಿರುವುದರಿಂದ ಕಳ್ಳ ಸಾಗಾಣಿಕೆದಾರರು ಈ ವೀರ್ಯ ತಿಮಿಂಗಿಲ(ಸ್ಟೆರ್ಮ್ ವೆಲ್) ಪ್ರಭೇದಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಇಂಡೋನೇಷ್ಯಾ, ಯು.ಕೆ. ಶ್ರೀಲಂಕಾ ಮುಂತಾದ ದೇಶಗಳ ಸಮುದ್ರಯಾನಗಳ ಮೂಲಕ ಈ ಅಂಬರ್ ಗ್ರೀಸ್ ಅನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆಯಂತೆ. ತಮಿಳು ನಾಡು, ಮುಂಬೈ, ಗುಜರಾತ್, ಅಹಮದಾಬಾದ್,ಕೇರಳದ ಕಡಲ ತೀರಗಳಲ್ಲಿ ಈ ಅಂಬರ್ ಗ್ರೀಸ್ ಅನ್ನು ಹೆಚ್ಚಾಗಿ ಪೊಲೀಸರು ಇದುವರೆಗೂ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು.ಮೈಸೂರು. ಮಡಿಕೇರಿ.ಶಿರಸಿ.ಕಾರವಾರ.ಸೋಮವಾರಪೇಟೆ.ಮುಂತಾದ ಕಡೆ ದಾಸ್ತಾನು ಮಾಡಿ ಅಡಗಿಸಿಟ್ಟಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲ ವಾಂತಿಯನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಸ್ಮಗ್ಲರ್ ಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದಂಧೆಕೋರರ ಬಂಧನ-ಬಿಡುಗಡೆ ಹೀಗೆಯೇ ನಡೆಯುತ್ತಿದೆ. ಆದರೇ ಒಳಗೊಳಗೇ ಮಾತ್ರ ಅಪರೂಪದ ಅಳಿವಿನಂಚಿನ ಸಮುದ್ರ ಜಲಚರ ಜೇವಿಗಳಾದ ತಿಮಿಂಗಿಲಗಳ ಮಾರಣಹೋಮ ಸದ್ದಿಲ್ಲದೆ ನಡೆಯುತ್ತಲೇ ಇದೆ. ಈ ದುರಾಸೆಯ ದುರುಳ ಮಾನವ ಇನ್ಯಾವ್ಯಾವ ಜೀವಿಗಳ ಮೇಲೆ ತನ್ನ ವಕ್ರದ್ರಷ್ಠಿ ಬೀರುತ್ತಾನೋ..? ಅವನೆಗದೆಷ್ಟು ಹಣದ ಹಸಿವೋ..?

 

Girl in a jacket
error: Content is protected !!