ಚೆನ್ನೈ,ಮೇ,೩೦: ತಮಿಳುನಾಡಿನಲ್ಲಿ ಎಐಡಿಎಂಕೆ ಪಕ್ಷದಲ್ಲಿ ಆಂತರಿಕ ಕಿತ್ತಾಟಗಳ ಈ ಸಂದರ್ಭದಲ್ಲಿ ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಬಹಿರಂಗವಾರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.
ಪಕ್ಷದಲ್ಲಿ ಆಗಿರುವ ಎರಡು ಬಣಗಳಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ ಹೀಗಾಗಿ ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಸರಿದಾರಿಗೆ ತರಬೇಕು ಎಂದರೆ ಅದಕ್ಕೆ ಶಶಿಕಲಾಗೆ ಮಾತ್ರ ಸಾದ್ಯ ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಾತನಾಡಿರುವ ಆಡಿಯೋ ಕ್ಲಿಪ್ ಈಗ ಬಹಿರಂಗವಾಗಿದೆ.
ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ನಡುವಿನ ಬಣ ರಾಜಕೀಯದಿಂದ ಕಂಗೆಟ್ಟಿರುವ ಎಐಎಡಿಎಂಕೆ ಅನ್ನು ಸರಿ ದಾರಿಗೆ ತರುವ ಸಲುವಾಗಿ ಅವರು ಮರಳಿ ರಾಜಕೀಯ ಪ್ರವೇಶಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನಡುವಿನ ಬಹಿರಂಗ ಕಿತ್ತಾಟದಿಂದ ನಾನು ಬೇಸರಗೊಂಡಿದ್ದೇನೆ. ಕೋವಿಡ್ -೧೯ ಸಾಂಕ್ರಾಮಿಕ ಒಂದು ಹಂತಕ್ಕೆ ಬಂದ ಕೂಡಲೇ ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ,’ ಎಂದು ಶಶಿಕಲಾ ಅವರು ತಮ್ಮ ಬೆಂಬಲಿಗರೊಂದಿಗೆ ಮಾತನಾಡಿರುವ ದೂರವಾಣಿ ಸಂಭಾಷಣೆಯ ಆಡಿಯೊ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.
ಮಾಡಬೇಡಿ. ಎಐಎಡಿಎಂಕೆಯನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತೇನೆ. ಕೋವಿಡ್ ಸಾಂಕ್ರಾಮಿಕ ಅಂತ್ಯವಾಗುತ್ತಲೇ ನಾನು ಬರುತ್ತೇನೆ,’ ಎಂದು ಶಶಿಕಲಾ ಅವರು ಬೆಂಬಲಿಗ ಲಾರೆನ್ಸ್‌ಗೆ ಹೇಳಿರುವುದು ಆಡಿಯೊದಲ್ಲಿದೆ.’ಒಂದೊಳ್ಳೆ ನಿರ್ಧಾರವನ್ನು ನಾನು ಶೀಘ್ರದಲ್ಲೇ ಪ್ರಕಟಿಸುತ್ತೇನೆ. ಶೀಘ್ರದಲ್ಲೇ ಬರುತ್ತೇನೆ. ನಾನು ಬರುವುದು ನಿಶ್ಚಿತ. ಅವರು ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಇದು ನನಗೆ ನೋವುಂಟುಮಾಡಿದೆ. ಪಕ್ಷಕ್ಕಾಗಿ ನಾವು ತ್ಯಾಗ ಮಾಡಿದ್ದೇವೆ. ಆದರೆ, ಈಗ ಪಕ್ಷ ಹಾಳಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ,’ ಎಂದು ತಂಜಾವೂರಿನ ಸುರೇಶ್ ಎಂಬುವರೊಂದಿಗೆ ಮಾತನಾಡಿರುವ ಮತ್ತೊಂದು ದೂರವಾಣಿ ಸಂಭಾಷಣೆಯೂ ಬಹಿರಂಗವಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ’ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂನ ಮೂಲಗಳು, ಆಡಿಯೊ ಅಸಲಿಯದ್ದು. ಎಐಎಡಿಎಂಕೆಯ ಬೆಳವಣಿಗೆಗಳನ್ನು ತೀರ ಹತ್ತಿರದಿಂದ ಗಮನಿಸುತ್ತಿರುವ ಶಶಿಕಲಾ ಒಂದೆರಡು ತಿಂಗಳ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ, ಎಂದು ಮಾಹಿತಿ ನೀಡಿವೆ.
ಮತ್ತೇ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಶಶಿಕಲಾ
Share