15 ಲಕ್ಷಕ್ಕಿಂತ ಕಡಿಮೆ ಆಧಾಯ ಹೊಂದಿದವರೆಗೆ ತೆರಿಗೆ ವಿನಾಯಿತಿ?

Share

15 ಲಕ್ಷಕ್ಕಿಂತ ಕಡಿಮೆ ಆಧಾಯ ಹೊಂದಿದವರೆಗೆ ತೆರಿಗೆ ವಿನಾಯಿತಿ?

by ಕೆಂಧೂಳಿ

ನವದೆಹಲಿ, ಜ,26-2025 ರ ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಮದ್ಯಮ ವರ್ಗದ ಜನರಿಗೆ ಸಿಹಿ ಸುದ್ದಿವಸಿಗುವ ಸಾದ್ಯತೆಗಳಿವೆ.10ರಿಂದ 15 ಲಕ್ಷ ರೂ ಕಡಿಮೆ ಆಧಾಯ ಹೊಂದಿದವರಿಗೆ ತೆರಿಗೆ ವಿನಾಯಿತಿ ಸಿಗುವ ಸುಳಿವು ನೀಡಿದೆ.

ಫೆಬ್ರವರಿ 1ರಂದು 2025-26 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಧ್ಯಮ ಜನರಿಗೆ ಸಿಹಿಸುದ್ದಿ ಸಿಗುವ ಸುಳಿವು ನೀಡಿದ್ದಾರೆ

ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಮೂಲಸೌಕರ್ಯಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಗಮನಹರಿಸಲಾಗಿದೆ. ಮಧ್ಯಮ ವರ್ಗದವ ಜನರಿಗೆ ಅನುಕೂಲವಾಗುವಂತೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಇದರಿಂದ ಜನರ ಖರ್ಚಿನ ವೆಚ್ಚ ಹೆಚ್ಚಾಗಿ ಆ ಮೂಲಕ ಆರ್ಥಿಕತೆಗೆ ಬಾರಿ ಲಾಭವಾಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಶುಕ್ರವಾರ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಹಲ್ವಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಲೋಕಸಭೆಯಲ್ಲಿ ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ತಯಾರಿಕೆಯ ಅಂತಿಮ ಅಂತದಲ್ಲಿದ್ದು, ಹಲ್ವಾ ತಯಾರಿಸಿ ಬಜೆಟ್ ತಯಾರಿಸಿದ್ದ ಸಿಬ್ಬಂದಿಗೆ ನೀಡಲಾಗಿದೆ.

Girl in a jacket
error: Content is protected !!