ಸೆಟ್ರಲ್ ವಿಸ್ಟ್ರಾ ಯೋಜನೆ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

Share

ನವದೆಹಲಿ,ಮೇ,೩೧: ಸೆಂಟ್ರಲ್ ವಸ್ಟಾ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಈ ಯೋಜನೆ ಒಂದು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದೆ.
ಅಲ್ಲದೆ ಈ ಅರ್ಜಿ ನಿಜವಾದ ಅರ್ಜಿಯಲ್ಲಿ ಇದು ಅರ್ಜಿದಾರರ ಪ್ರೇರಿತವಾಗಿದೆ ಹಾಗಾಗಿ ಅರ್ಜಿಯನ್ನು ೧,೦೦,೦೦೦ ವೆಚ್ಚದೊಂದಿಗೆ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ
ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ಕೆಲಸವು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಲ್ಲಿನ ಕೆಲಸದ ಭಾಗ ಮತ್ತು ಸಾರ್ವಜನಿಕ ಮಹತ್ವವುಳ್ಳದ್ದಾಗಿದೆ ಎಂದು ಹೇಳಿದರು. ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿಯ ನಿರ್ಮಾಣವನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಎಂದು ಅದು ಹೇಳಿದೆ.

ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಅದೇ ಜಾಗದಲ್ಲಿ ಇರುವುದರಿಂದ, ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸಲು ನಿರ್ದೇಶನಗಳನ್ನು ನೀಡುವ ಪ್ರಶ್ನೆಯೇ ಇಲ್ಲ” ಎಂದು ನ್ಯಾಯಾಲಯ ಹೇಳಿದೆ. ಡಿಡಿಎಂಎಯ ಏಪ್ರಿಲ್ ೧೯ ರ ಆದೇಶದ ಬಗ್ಗೆ ಉಲ್ಲೇಖಿಸಿದ ನ್ಯಾಯಪೀಠ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಅಲ್ಲೇ ಇರುವುದರಿಂದ ಕಾಮಗಾರಿ ಕೆಲಸಕ್ಕೆ ನಿರ್ಬಂಧ ವಿಧಿಸಿಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯ ಮೇ ೧೭ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಇಡೀ ಸೆಂಟ್ರಲ್ ವಿಸ್ಟಾ ಯೋಜನೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಅತ್ಯಗತ್ಯ ಯೋಜನೆಯಾಗಿದೆ ಎಂದು ಹೇಳಿದ ನ್ಯಾಯಾಲಯ, ಸಂಸತ್ತಿನ ಸಾರ್ವಭೌಮ ಕಾರ್ಯಗಳನ್ನು ಅಲ್ಲಿ ನಡೆಸಲಾಗುವುದು. ಸಾರ್ವಜನಿಕರು ಈ ಯೋಜನೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಸೆಂಟ್ರಲ್ ಅವೆನ್ಯೂದಲ್ಲಿ ನವೆಂಬರ್ ಮೊದಲು ಕಾಮಗಾರಿ ಪೂರ್ಣಗೊಳ್ಳಬೇಕಿದೆ ಮತ್ತು ಈ ಸಮಯವು ಒಪ್ಪಂದದಲ್ಲಿ ಹೇಳಿರುವುದಾಗಿದೆ. “ಸಮಯಕ್ಕೆ ತಕ್ಕಂತೆ ವೇಳಾಪಟ್ಟಿಯೊಳಗೆ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ” ಎಂದು ನ್ಯಾಯಪೀಠ ಹೇಳಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಉಳಿಯುವ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊವಿಡ್ ೧೯ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಹಾಗಾಗಿ ಈ ಯೋಜನೆ ಕಾಮಗಾರಿಗೆ ತಡೆ ನೀಡಲು ನ್ಯಾಯಾಲಯದ ಮುಂದೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.
ಇದು ಅರ್ಜಿದಾರರು ಸಲ್ಲಿಸಿದ ಪ್ರೇರಿತ ಅರ್ಜಿಯಾಗಿದೆ ಮತ್ತು ಇದು ನಿಜವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅಲ್ಲ’ ಎಂದು ನ್ಯಾಯಾಲಯವು ಅರ್ಜಿದಾರರ ಮೇಲೆ ೧ ಲಕ್ಷ ವೆಚ್ಚ ವಿಧಿಸಿ ವಜಾಗೊಳಿಸಿದೆ

Girl in a jacket
error: Content is protected !!