ಲಾಕ್ ಡೌನ್ ಹಿನ್ನೆಲೆ; ದೆಹಲಿಯಲ್ಲಿ ಕೊರೊನಾ ಪ್ರಕರಣ ಇಳಿಕೆ

Share

ನವದೆಹಲಿ,ಮೇ,14: ದೇಶದ ರಾಜದಾನಿ ನವದೇಹಲಿಯಲ್ಲಿ ಈಗ ಕೊರೊನಾ ಪ್ರಮಾಣ ಇಳಿಕೆಯಾಗಿದೆ.
ಕಳೆದ ಒಂದು ತಿಂಗಳಿಂದ ಆತಂಕ ಮೂಡಿಸಿದ್ದಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದ್ವಿತೀಯ ಅಲೆಯು, ರಾಷ್ಟ್ರ ಕೊರೊನಾ ಸೋಂಕು ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದೆ.
ಲಾಕ್‌ಡೌನ್‌ ನಾಲ್ಕನೇ ವಾರ ಮುಂದುವರಿದ ಪರಿಣಾಮ ಸೋಂಕಿತರ ಶೇಕಡಾವಾರು ಪ್ರಮಾಣ ಇದೇ ಮೊದಲ ಬಾರಿಗೆ ಶೇ 15ಕ್ಕಿಂತ ಕಡಿಮೆ ದಾಖಲಾಗಿದೆ.

ಸತತ 6 ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾದವರ ಸಂಖ್ಯೆ ಹೆಚ್ಚುತ್ತ ಸಾಗಿರುವುದು ಸಾರ್ವಜನಿಕರ ಆತಂಕವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ.
ಗುರುವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿರುವ 73,675 ಜನರ ಪೈಕಿ 10,489 (ಶೇ 14.24) ಜನರಲ್ಲಿ ಸೋಂಕು ದೃಢಪಟ್ಟಿದೆ. 15,189 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 77,717ಕ್ಕೆ ಇಳಿದಿದೆ.

ಇದೇ ಅವಧಿಯಲ್ಲಿ ಕೊರೊನಾದಿಂದ ಬಳಲುತ್ತಿದ್ದ 308 ಜನ ಸಾವಿಗೀಡಾಗಿದ್ದು, ಇದುವರೆಗೆ 20,618 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಂತಾಗಿದೆ. ಪ್ರತಿ 100 ಜನ ಸೋಂಕಿತರಲ್ಲಿ 1.50ರಷ್ಟು ಮರಣ ಪ್ರಮಾಣ ದಾಖಲಾಗಿದೆ.
2020ರ ಮಾರ್ಚ್‌ನಿಂದ ನಗರದಾದ್ಯಂತ ಒಟ್ಟು 13,72,475 ಜನ ಸೋಂಕಿಗೆ ಒಳಗಾಗಿದ್ದು, 12,74,140 ಜನ ಗುಣಮುಖರಾಗಿದ್ದಾರೆ.

Girl in a jacket
error: Content is protected !!