ಮೋದಿ ವಿದೇಶಿ ಪ್ರವಾಸದಿಂದ ಹಿಂದುರಿಗದಾಗಲೇ ದೆಹಲಿ ಸರ್ಕಾರ ರಚನೆ?

Share

ಮೋದಿ ವಿದೇಶಿ ಪ್ರವಾಸದಿಂದ ಹಿಂದುರಿಗದಾಗಲೇ ದೆಹಲಿ ಸರ್ಕಾರ ರಚನೆ?

  by-ಕೆಂಧೂಳಿ

ನವದೆಹಲಿ,ಫೆ,೦೯- ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ ಆದರೆ ಮೋದಿ ವಿದೇಶ ಪ್ರವಾಸಕ್ಕೆ ತೆರಳುವ ಕಾರನ ಬಹುತೇಕ ೧೩ ರ ನಂತರವೇ ಗದ್ದುಗೆ ಏರುವ ವ್ಯಕ್ತಿಯಾರು ಮತ್ತು ಅಧಿಕಾರ ವಹಿಸಿಕೊಳ್ಳುವ ದಿನಾಂಕ ಗೊತ್ತಾಗಲಿದೆ.
ಆದರೆ ಎಎಪಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಕಡೆಯೇ ಹೆಚ್ಚು ಒಲವು ತೋರಲಾಗುತ್ತಿದೆ ಎನ್ನಲಾಗುತ್ತಿದ್ದು ಬಹುತೇಕ ಇವರೇ ಸಿಎಂ ಆಗುವ ಲಕ್ಷಣಗಳು ಗೋಚರವಾಗುತ್ತಿವೆ
ಆದರೆ ಇನ್ನೂ ಐದಾರು ದಿನ ಈ ಹಗ್ಗ ಜಗ್ಗಾಟ ನಡೆಯಲಿದೆ ಯಾಕೆಂದರೆ
.ಫೆ.೧೫ರ ವರೆಗೆ ಸರ್ಕಾರ ರಚನೆ ಇಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Adavatigement

ಹೌದು. ಇದೇ ಫೆ.೧೨-೧೩ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ ೪೭ನೇ ಅಧ್ಯಕ್ಷರಾಗಿ ಟ್ರಂಪ್ ೨ನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ಭೇಟಿಯಾಗಿದೆ. ಪ್ರವಾಸ ಮುಗಿಸಿ ಫೆ.೧೪ರಂದು ಮೋದಿ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಪ್ರಮಾಣ ವಚನ ಸಮಾರಂಭ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯು ಪ್ರಮಾಣ ವಚನ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದೆ. ಈ ಸಮಾರಂಭಕ್ಕೆ ಎಲ್ಲಾ ಎನ್‌ಡಿಎ ನಾಯಕರು ಹಾಗೂ ಸಿಎಂಗಳನ್ನ ಆಹ್ವಾನಿಸಲಾಗುತ್ತದೆ. ಹೀಗಾಗಿಯೇ ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಮುಖಂಡರಾದ ರಮೇಶ್ ಬಿಧೂರಿ, ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್, ಕೈಲಾಶ್ ಗೆಹ್ಲೋಟ್ ಹಾಗೂ ಕಪಿಲ್ ಮಿಶ್ರಾ ಸೇರಿ ಹಲವರು ಸಿಎಂ ರೇಸ್‌ನಲ್ಲಿದ್ದಾರೆ.

Girl in a jacket
error: Content is protected !!