ಮೋದಿ ಆರ್ಥಿಕ ಮತ್ತು ವಿದೇಶಾಂಗ ನೀತಿ ವಿರುದ್ಧ ಸುಬ್ರಮಣ್ಯಂ‌ ಸ್ವಾಮಿ ವಿರೋಧ

Share

ನವದೆಹಲಿ,ಆ,14: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ‘ಮೋದಿ ಭಾರತದ ರಾಜ ಅಲ್ಲ’ ಎಂದು ಹೇಳಿದ್ದಾರೆ.

ತಮ್ಮ ಆಯ್ಕೆಯ ಸಚಿವ ಸ್ಥಾನ ನೀಡದಿರುವುದು ನಿಮ್ಮ ಅಸಮಾಧಾನಕ್ಕೆ ಕಾರಣ ಎಂದು ವಾದಿಸಿದ ಟ್ವಿಟರ್
ಬಳಕೆದಾರರೊಬ್ಬರಿಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ನಾನು ಬೇರೆ ಕಾರಣಕ್ಕಾಗಿ “ಮೋದಿ ವಿರೋಧಿ” ಎಂದು ಹೇಳಿದ್ದಾರೆ.

“ನಾನು ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ ಮತ್ತು ಅದರ ಬಗ್ಗೆ ಯಾವುದೇ ಜವಾಬ್ದಾರಿಯುತರೊಂದಿಗೆ ಚರ್ಚಿಸಲು ನಾನು ಸಿದ್ಧ. ಪ್ರಜಾಪ್ರಭುತ್ವದ ಬಗ್ಗೆ ನೀವು ಕೇಳಿದ್ದೀರಾ? ಮೋದಿ ಭಾರತದ ರಾಜ ಅಲ್ಲ” ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಭಾರತದ ವಿದೇಶಾಂಗ ನೀತಿಗಳ ಪರಿಣಾಮಕಾರಿತ್ವವನ್ನು ಸ್ವಾಮಿ ಪ್ರಶ್ನಿಸಿದ್ದು, ಇದು ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿರ್ಧಾರಗಳಿಂದಾಗಿ “ಅವ್ಯವಸ್ಥೆ” ಯಾಗಿದೆ ಎಂದಿದ್ದಾರೆ.

Girl in a jacket
error: Content is protected !!