ಮತ್ತೆ ಅಡುಗೆ ಅನಿಲ ಬೆಲೆ‌ಏರಿಕೆ

Share

ನವದೆಹಲಿ,ಅ,06: ದೇಶದಲ್ಲಿ ಮತ್ತೆ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಎಲ್ಪಿಜಿ ಅಡುಗೆ ಸಿಲಿಂಡರ್ ಬೆಲೆಯನ್ನು ಮತ್ತೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.
ದೇಶಾದ್ಯಂತ ಇಂದಿನಿಂದಲೇ ಹೊಸ ದರಗಳು ಜಾರಿಯಾಗಲಿವೆ ಎಂದು ಹೇಳಲಾಗಿದೆ.ಪೆಟ್ರೋಲಿಯಂ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 15 ರೂ. ಹೆಚ್ಚಳ ಮಾಡಿದ್ದು, ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ಈಗ 899.50 ರೂ. ಆಗಿದೆ. 5 ಕೆಜಿ ಸಿಲಿಂಡರ್‌ನ ಹೊಸ ದರ ಈಗ 502 ರೂ. ಆಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.

Girl in a jacket
error: Content is protected !!