ಪಾಕಿಸ್ತಾನದಲ್ಲಿ ಇಂದಿನಿಂದ ಮಿನಿ ವಿಶ್ವಕಪ್ ಆರಂಭ

Share

ಪಾಕಿಸ್ತಾನದಲ್ಲಿ ಇಂದಿನಿಂದ ಮಿನಿ ವಿಶ್ವಕಪ್ ಆರಂಭ

by-ಕೆಂಧೂಳಿ

ಇಂದಿನಿಂದ ಪಾಕಿಸ್ತಾನದ ಲ್ಲಿ ಮಿನಿ ವಿಶ್ವಕಪ್ ಆರಂಭವಾಗಲಿದೆ,ಇದು ಒಂಬತ್ತನೇ ಚಾಂಪಿಯನ್ ಟ್ರೋಪಿಯಾಗಿದೆ. ಕರಾಚಿಯಲ್ಲಿ ಉದ್ಟಾಟನಾಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಮತ್ತು ಪಾಕಿಸ್ತನ ತಂಡಗಳ ನಡುವೆ ಹೋಟಾಟ ನಡೆಯಲಿದೆ.ಬಿ ಗುಂಪಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತದೆ ಎನ್ನುವುದು ಕುತೂಹಲ ಕೆರೆಳಿಸಿದೆ
.
ಅಂಕಿ ಅಂಶಗಳ ಲೆಕ್ಕಾಚಾರವನ್ನು ನೋಡಿದಾಗ ಈ ಆಟದಲ್ಲಿ ಪಾಕಿಸ್ತಾನ ಕೈ ಮೇಲಾಗುತ್ತದೆ. ಉಭಯ ದೇಶಗಳ ನಡುವೆ ಒಟ್ಟು ೧೧೮ ಪಂದ್ಯಗಳು ನಡೆದಿದ್ದು, ಪಾಕ್ ೬೧ ಹಾಗೂ ನ್ಯೂಜಿಲೆಂಡ್ ೫೩ ಪಂದ್ಯಗಳನ್ನು ಗೆದ್ದಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಅಂಕಿ ಅಂಶ ಅಮೋಘವಾಗಿವೆ. ೨೦೦೦, ೨೦೦೬, ೨೦೦೯ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ದೇಶಗಳು ಮುಖಾಮುಖಿ ಆಗಿದ್ದವು. ಈ ವೇಳೆ ನ್ಯೂಜಿಲೆಂಡ್ ಆಡಿದ ಮೂರು ಪಂದ್ಯಗಳನ್ನು ಗೆದ್ದ ಹಿರಿಮೆ ಹೊಂದಿದೆ. ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕಿವೀಸ್ ತಂಡ ಆತ್ಮ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ

೨೩ ವರ್ಷದ ಬಳಿಕ ಪಾಕ್ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ವೇಳೆ ಬಿಗ್ ಈವೆಂಟ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರಿಸಲು ಪಾಕ್ ಆಟಗಾರರು ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು ಚಿತ್ತ ಕದ್ದಿದ್ದಾರೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಅನುಭವ ಇದೆ. ಇವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ತ್ರಿಕೋನ ಸರಣಿಯ ವೇಳೆ ಅಮೋಘ ಲಯವನ್ನು ಕಂಡುಕೊಂಡಿರುವ ನಾಯಕ ಮೊಹಮ್ಮದ್ ರಿಜ್ವಾನ್ ಹಾಗೂ ಉಪನಾಯಕ ಸಲ್ಮಾನ್ ಅಘಾ ಅವರು ಮಧ್ಯಮ ಕ್ರಮಾಂಕದ ಬೆನ್ನೆಲೆಬು. ಇವರಿಗೆ ಸೌದ್ ಶಕೀಲ್ ಉತ್ತಮ ಸಾಥ್ ನೀಡಿದ್ದೇ ಆದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ತವರಿನ ಪಿಚ್‌ಗಳ ಮರ್ಮವನ್ನು ತಿಳಿದಿರುವ ಪಾಕ್ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಬಿಗುವಿನ ದಾಳಿ ನಡೆಸಬೇಕಿದೆ. ಅಲ್ಲದೆ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಡುವ ಅನಿವಾರ್ಯತೆ ಇದೆ.

 

Girl in a jacket
error: Content is protected !!