ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕೋರಿ ಸುಪ್ರೀಂಗೆ ಅರ್ಜಿ

Share

ನವದೆಹಲಿ,ಮೇ:ಕೇದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ತೆರೆಮರೆ ಪ್ರಯತ್ನ ನಡೆಸುತ್ತಲೆ ಇದೆ
ಈಗ ಇದಕ್ಕೆ ಪೂರಕವಾಗಿ ವಕೀಲರೊಬ್ಬರು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರವು ನಡೆಸಿದ ‘ಹತ್ಯಾಕಾಂಡ’ದಲ್ಲಿ ಬಿಜೆಪಿಯ 16 ಕಾರ್ಯಕರ್ತರು ಅಸುನೀಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೇ 2ರ ನಂತರ ನಡೆದಿರುವ ಬಿಜೆಪಿ ಬೆಂಬಲಿಗರ ಹತ್ಯೆಗಳ ಕುರಿತ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ವಕೀಲ ಘನಶ್ಯಾಂ ಉಪಾಧ್ಯಾಯ ಅವರು ಅರ್ಜಿಯಲ್ಲಿ ಕೋರಿದ್ದಾರೆ.
‘ಬಿಜೆಪಿಯ 16 ಕಾರ್ಯಕರ್ತರ ಹತ್ಯಾಕಾಂಡವು ಟಿಎಂಸಿಯ ಗೂಂಡಾಗಳಿಂದ ಆಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಣತಿಯಂತೆ ಇವೆಲ್ಲ ನಡೆದಿವೆ’ ಎಂಬ ಮಾಧ್ಯಮ ವರದಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.

Girl in a jacket
error: Content is protected !!