ನವದೆಹಲಿ,ಜು.೧೩- ಸಾರ್ವಜನಿಕ ಸೇವೆ,ಕಾನೂನು,ರಾಜತಾಂತ್ರಿಕತೆ ಮತ್ತು ವಿದ್ವಾಂಸರ ಕೊಡಿಗೆಗಳನ್ನು ಪರಿಗಣಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಲ್ಕು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ.
ನಾಮನಿರ್ದೇಶಿತರಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಅನುಭವಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಿಂ, ಕೇರಳ ಮೂಲದ ಶಿಕ್ಷಣ ತಜ್ಞ ಮತ್ತು ಸಮಾಜಿಕ ಕಾರ್ಯಕರ್ತ ಸಿ.ಸದಾನಂದನ್ ಮಾಸ್ಟರ್ ಮತ್ತು ಖ್ಯಾತ ಇತಿಹಾಸಕಾರ ಡಾ.ಮೀನಾಕ್ಷಿ ಜೈನ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ
ಈ ನಾಮ ನಿರ್ದೇಶನಗಳು,ಸಾಹಿತ್ಯ,ವಿಜ್ಞಾನ,ಕಲೆ ಮತ್ತು ಸಾಮಾಜಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಹೊಂದಿರುವ ೧೨ ಮಂದಿಯನ್ನ ನಾಮನಿರ್ದೇಶನ ಮಾಡಲು ರಾಷ್ಟ್ರಪತಿಗಳಿಗಳ ಸಾಂವಿಧಾನಿಕ ಅಧಿಕಾರದ ಪ್ರಕಾರ , ಈ ಹಿಂದೆ ನಾಮನಿರ್ದೇಶನಗೊಂಡ ಸದಸ್ಯರ ನಿವೃತ್ತಿಯಿಂದ ತೆರವಾಗಿದ್ದ ಖಾಲಿ ಹುದ್ದೆಗಳನ್ನು ಭರ್ತಿಮಾಡಲಾಗಿದೆ,
ಈ ಘೋಷಣೆ ನಂತರ ಅರ್ಹರ ನೇಮಕ ಎನ್ನುವ ಮೆಚ್ಚುಗೆ ವ್ಯಕ್ತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ನಾಮನಿರ್ದೇಶಿತರನ್ನು ಅಭಿನಂದಿಸಿದ್ದಾರೆ. ಅವರ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ ಮತ್ತು ಸಂಸದೀಯ ಪಟುಗಳಾಗಿ ಯಶಸನ್ನು ಸಾಧಿಸಲು ಎಂದು ಹಾರೈಸಿದ್ದಾರೆ.
ನಿಕ್ಕಂ, ಸೇರಿ ನಾಲ್ವರು ರಾಜ್ಯ ಸಭೆಗೆ ನಾಮ ನಿರ್ದೇಶನ
Share