ನವದೆಹಲಿ,ಮೇ,೨೪:ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಬಹುತೇಕ ಎಲ್ಲಾ ರಾಜ್ಯಗಳು ಸಹಮತ ವ್ಯಕ್ತಪಡಿಸಿರುವ ಹಿನ್ನೆಲಯಲ್ಲಿ ಜೂನ್ ೧ಕ್ಕೆ ಈ ಕುರಿತು ಅಂತಿಪ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.
ಭಾನುವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಸಬೇಕೆ ಅಥವಾ ಶಾಲಾ ಮಟ್ಟದಲ್ಲೇ ಪರೀಕ್ಷೆನಡೆಸಿ ವಿದ್ಯಾರ್ಥಿಗಳನ್ನು ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡಬೇಕೆ ಎಂಬ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸಹಮತ ಬಾರದ ಕಾರಣ ಯವುದೆ ನಿರ್ದಾರಕ್ಕೆ ಬಂದಿಲ್ಲವಾದರೂ ಕೂಡ ಬಹುತೇಕ ರಾಜ್ಯಗಳು ಅಂತಿಮ ಪರೀಕ್ಷೆ ಬರೆಸುವುದೇ ಒಳಿತ ಎನ್ನುವ ಮಾತುಗಳು ಕೇಳಿ ಬಂದ ಕಾರಣ ಈ ಆಧಾರದ ಮೇಲೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ.
ಜುಲೈ ೧೫ರಿಂದ ಆಗಸ್ಟ್ ೨೬ರ ಮಧ್ಯೆ ಪರೀಕ್ಷೆ ನಡೆಸಲು ಸಿಬಿಎಸ್ ಇ ಪ್ರಸ್ತಾವನೆ ಸಲ್ಲಿಸಿದ್ದು ಫಲಿತಾಂಶ ಸೆಪ್ಟೆಂಬರ್ ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಹುತೇಕ ರಾಜ್ಯಗಳು ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟುಬಿಟ್ಟಿವೆ. ಕೇರಳ ಮತ್ತು ದೆಹಲಿ ರಾಜ್ಯಗಳು ಪರೀಕ್ಷೆಗೆ ಮೊದಲು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎಂದು ಪ್ರಸ್ತಾಪಿಸಿದರೆ ಮಹಾರಾಷ್ಟ್ರ ಪರೀಕ್ಷೆಯನ್ನೇ ರದ್ದುಮಾಡಬೇಕೆಂದು ಹೇಳಿದೆ.
ರಾಜ್ಯಗಳ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದ ನಂತರ ಈ ನಿಟ್ಟಿನಲ್ಲಿ ಇನ್ನಷ್ಟು ಚರ್ಚೆ, ಮಾತುಕತೆಗಳು ಮುಖ್ಯ ಎಂದು ತೀರ್ಮಾನಕ್ಕೆ ಬರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರ. ಹಗಾಗಿ ಜೂನ್ ೧ ರಂದು ಮತ್ತೊಂದು ಸಭೆ ನಡೆಸಿ ಅಂದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನುವುದು ಅಧಿಕಾರಿಗಳ ಅಭಿಮತ.
ದ್ವಿತೀಯ ಪಿಯು ಪರೀಕ್ಷೆಗೆ ರಾಜ್ಯಗಳ ಒಲವು-ಜೂನ್ ೧ಕ್ಕೆ ಅಂತಿಮ ತೀರ್ಮಾನ
Share