ದೇಶದಲ್ಲಿ ಮತ್ತೇ ಏರಿಕೆ ಕಂಡ ಕೋವಿಡ್ ಸಂಖ್ಯೆ

Share

ನವದೆಹಲಿ,ಮೇ,೨೩ ದೇಶದಲ್ಲಿ ಕಳೆದ ೩೪ ಗಂಟೆಯಲ್ಲಿ ೨,೪೦ ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು ೩,೭೪೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಬಿಡುಗಡೆ ಮಾಡಿದ ಕೋವಿಡ್ ಸೋಂಕಿತರ ವಿವರದಲ್ಲಿ ಸದ್ಯ ಕೋವಿಡ್ ಸೋಂಕಿತರ ಸಂಖ್ಯೆ ಕೊಂಚ ಹೆಚ್ಚಾಗಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨,೬೫,೩೦,೧೩೨ಕ್ಕೆ ಏರಿಕೆಯಾಗಿದೆ. ಆ ಪೈಕಿ ೨,೯೯,೨೬೬ ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ಸೋಂಕು ಕಾಣಿಸಿಕೊಂಡಾಗಿನಿಂದ ಇದುವರೆಗೆ ೨,೩೪,೨೫,೪೬೭ ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ ೨೮,೦೫,೩೯೯ ಸಕ್ರಿಯ ಪ್ರಕರಣಗಳಿವೆ.:ದೇಶದಲ್ಲಿ ಈವರೆಗೆ ೧೯,೫೦,೦೪,೧೮೪ ಡೋಸ್ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ,ಕರ್ನಾಟಕದಲ್ಲಿ ೪,೮೩,೨೨೫ ಮಹಾರಾಷ್ಟ್ರದಲ್ಲಿ ೩,೫೪,೮೩೦, ಕೇರಳದಲ್ಲಿ ೨,೮೯,೬೫೭, ತಮಿಳುನಾಡಿನಲ್ಲಿ ೨,೮೪,೨೭೮,ಆಂಧ್ರಪ್ರದೇಶದಲ್ಲಿ ೨,೧೦,೬೮೩, ಪಶ್ಚಿಮ ಬಂಗಾಳದಲ್ಲಿ ೧,೩೧,೬೮೮, ರಾಜಸ್ಥಾನದಲ್ಲಿ ೧,೨೨,೩೩೦ ಸಕ್ರಿಯ ಪ್ರಕರಣಗಳು ದಾಖಲಾಗಿವೆ.

Girl in a jacket
error: Content is protected !!