ದೆಹಲಿ ವಿಧಾನಸಭೆ ವಿರೋಧಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ
by-ಕೆಂಧೂಳಿ
ನವದೆಹಲಿ, ಫೆ,23- ಭಾನುವಾರ ನಡರದ ಎಎಪಿಯ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ವಿರೋಧ ಪಕ್ಷದ ನಾಯಕಿಯನ್ನಾಗಿ ಆಯ್ಕೆಮಾಡಲಾಗಿದೆ.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೇರಿದಂತೆ 22 ಎಎಪಿ ಶಾಸಕರು ಸಭೆಯಲ್ಲಿ ಪಾಲ್ಗೊಂಡ ಈ ಸಭೆಯಲ್ಲಿ ಅತಿಶಿಯನ್ನು ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿಯನ್ನಾಗಿಆಯ್ಕೆ ಮಾಡಲಾಗಿದೆ.
ಈ ಕುರಿತು ಪಕ್ಷಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ‘ನನ್ನಲ್ಲಿ ನಂಬಿಕೆಯನ್ನು ಇಟ್ಟಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತು ಶಾಸಕಾಂಗ ಪಕ್ಷಕ್ಕೆ ಧನ್ಯವಾದಗಳು. ಪ್ರಬಲ ಪ್ರತಿಪಕ್ಷವು ಜನರ ಧ್ವನಿಯನ್ನು ಎತ್ತಿ ಹಿಡಿಯುತ್ತದೆ. ಆಮ್ ಆದ್ಮಿ ಪಕ್ಷವು ಬಿಜೆಪಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತದೆ’ ಎಂದರು.
ದೆಹಲಿ ವಿಧಾನಸಭೆಯ ಮೊದಲ ಅಧಿವೇಶನ ಫೆಬ್ರುವರಿ 24 ರಿಂದ ಆರಂಭವಾಗಲಿದೆ. ಮೂರು ದಿನ ನಡೆಯುವ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವು ಹಿಂದಿನ ಎಎಪಿ ಸರ್ಕಾರದ ವಿರುದ್ಧ ಬಾಕಿ ಉಳಿದಿರುವ ಸಿಎಜಿ ವರದಿಗಳನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಹೇಳಿದೆ.