ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ!

Share

 

Writing:ಪರಶಿವ ಧನಗೂರು

ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ!

ಭಾರತದ ಮಿತ್ರ ರಾಷ್ಟ್ರವಾದ ಆಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಇತ್ತ ನಮ್ಮ ಭಾರತದ ಕಾಶ್ಮೀರದ ಕಣಿವೆಯಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ಫೋಟ, ಉಗ್ರರ ದಾಳಿ ನಡೆಯುತ್ತಲೇ ಇದೆ! ಇದ್ದಕ್ಕಿದ್ದಂತೆ ಈ ಭಯೋತ್ಪಾದಕರು ಇಷ್ಟೊಂದು ಚಿಗಿತುಕೊಂಡಿದ್ದು ಹೇಗೆ? ಆಗಾಗ ಶತ್ರುಗಳ ಹುಟ್ಟಡಗಿಸಲು ಉರಿದಾಳಿ ನಡೆಸಿ ಉಗ್ರಗಾಮಿಗಳ ಸದ್ದಡಗಿಸುತಿದ್ದ ನಮ್ಮ ಭಾರತೀಯ ಮಿಲಿಟರಿ ಪಡೆಗಳ ಹದ್ದಿನ ಕಣ್ಣಿದ್ದರೂ ಕಾಶ್ಮೀರ ಕಣಿವೆಯಲ್ಲಿ ನಿತ್ಯ ಗುಂಡಿನಚಕಮಕಿ, ನುಸುಳುಕೋರರ ಬಂಧನದ ಸುದ್ಧಿಗೇನೂ ಕೊರತೆಯಿಲ್ಲ. ಕಳೆದೊಂದು ವರ್ಷದಲ್ಲಿ ಇಳಿಮುಖವಾಗಿದ್ದ ಉಗ್ರಗಾಮಿ ಚಟುವಟಿಕೆಗಳು ದಿಢೀರನೆ ಏರಿಕೆ ಕಾಣುತಿದ್ದು ಭಾರತವನ್ನು ಮತ್ತಷ್ಟು ಆತಂಕಕ್ಕೆ ಮೂಡುತ್ತಿವೆ! ಭಾರತ ಸರ್ಕಾರದ ಜೊತೆ ಉತ್ತಮ ಒಡನಾಟ ವಿಟ್ಟುಕೊಂಡಿರುವ ಕಾಶ್ಮೀರದ ಮುಸ್ಲಿಂ ಮುಖಂಡರನ್ನು ಹುಡುಕಿ ಮನೆಗೆ ನುಗ್ಗಿ ಹತ್ಯೆಮಾಡುತ್ತಿರುವ ಭಯೋತ್ಪಾದಕರು ಒಳಗೊಳಗೇ ಮತ್ತೊಂದು ದೊಡ್ಡ ವಿಧ್ವಂಸಕ ಕೃತ್ಯ ವನ್ನು ನಡೆಸಲು ಸಂಚು ರೂಪಿಸುತ್ತಿರುವ ವಾಸನೆ ಭಾರತದ ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳಿಗೆ ಬಂದಿದೆ.
1947ರಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.

 

ಗಡಿನಾಡು ಜಮ್ಮು ಕಾಶ್ಮೀರದ ಕಣಿವೆಯ ಕೆಲವು ಜನರಲ್ಲಿ ಪ್ರತ್ಯೇಕ ವಾದದ, ಪ್ರತ್ಯೇಕ ಧಾರ್ಮಿಕತೆಯ ವಿಷಬಿತ್ತಿದ ಪಾಕಿಸ್ತಾನ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಭಯೋತ್ಪಾದಕರಿಂದ ದಾಳಿನಡೆಸುವುದರ ಜೊತೆಗೆ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಅಸ್ಥಿರತೆ, ಅಶಾಂತಿ ಉಂಟು ಮಾಡಲು ಮತಾಂಧ ಜಿಹಾದಿ ಉಗ್ರಗಾಮಿ ಸಂಘಟನೆಗಳನ್ನು ಬಳಸಿಕೊಂಡು ಆಟ ಆಡುತ್ತಲೇ ಇದೆ. ಜೊತೆಗೆ ಭಾರತದ ಇತರ ರಾಜ್ಯಗಳಲ್ಲಿಯೂ ಭಯಾನಕ ಬಾಂಬ್ ದಾಳಿ ಸ್ಫೋಟಗಳನ್ನು ನಿರಂತರವಾಗಿ ನಡೆಸಿ ಭಾರತೀಯ ಸಾರ್ವಜನಿಕರ ಜೀವತೆಗೆದು, ಸಾವಿರಾರು ಜನರ ನೆಮ್ಮದಿ ಕೆಡಿಸಿ ವಿಕ್ರತಿ ಮೆರೆಯುತ್ತಲೇ ಇದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿ ನಡೆಸಿದ 1971ರ ಯುದ್ಧ ಮತ್ತು 1965ರ ಲಾಲ್ ಬಹದ್ದೂರ್ ಶಾಸ್ತ್ರಿಯವರ ತಾಷ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ ಈ ಯಾವುದಕ್ಕೂ ಬಗ್ಗದ, ಗೌರವಕೊಡದ ಪಾಕಿಸ್ತಾನ ಗಡಿಯಲ್ಲಿ ಜೆಹಾದಿ ಮೊಜಾಹಿದ್ದೀನ್ಸ್ ಭಯೋತ್ಪಾದಕರನ್ನು ಟ್ರೈನಿಂಗ್ ನೀಡಿ ಒಳನುಗ್ಗಿಸಿ ದಿನನಿತ್ಯ ವಿಧ್ವಂಸಕಾರಿ ಕ್ರತ್ಯನಡೆಸಲು ಪ್ರೇರೇಪಿಸುತ್ತಲೇ ಇದೆ.


ಇತ್ತಿಚೆಗೆ 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಪಾಕ್ ಸೈನಿಕರಿಗೂ, ಭಯೋತ್ಪಾದಕರಿಗೂ ಏಕ ಕಾಲದಲ್ಲಿ ಬಡಿದು ಬುದ್ಧಿಕಲಿಸಿ ವಿಜಯ ಪತಾಕೆ ಹಾರಿಸಿದ ನಮ್ಮ ಸೈನಿಕರ ಶೌರ್ಯದ ತಾಕತ್ತು ಏನೆಂದು ಗೊತ್ತಿದ್ದರೂ, ಪದೇ ಪದೇ ಕಾಲುಕೆರೆದು ಗಡಿಯಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಉಲ್ಲಂಘಿಸಿ ಭಯೋತ್ಪಾದಕರನ್ನಿಟ್ಟು ಗೆರಿಲ್ಲಾ ವಾರ್ ನಡೆಸುತ್ತಿರುವ ಈ ಪಾಕಿಸ್ತಾನ ಈಗ ತಮ್ಮ ಸ್ನೇಹಿತರಾದ ತಾಲಿಬಾನಿ ಟೆರರಿಸ್ಟ್ ಗಳು ಆಫ್ಘಾನ್ ನೆಲದಲ್ಲಿ ಷರಿಯಾ ಕಾನೂನು ಸ್ಥಾಪಿಸಲೇ ಕುಣಿದು ಕುಪ್ಪಳಿಸುತಿದ್ದಾರೆ! ಮೊನ್ನೆ ತಾನೆ ಪಾಕಿಸ್ತಾನದ ರಾಜಕೀಯ ಮುಖಂಡನೊಬ್ಬ ‘ತಾಲಿಬಾನ್ ಸರ್ಕಾರ ಕ್ಕೆ ಯಾರಾದರೂ ಸಪೋರ್ಟ್ ಮಾಡದಿದ್ದರೇ, ಅವರನ್ನು ಎದುರು ಹಾಕಿಕೊಂಡರೇ 9/11 ಮಾದರಿಯಲ್ಲಿ ಅಮೆರಿಕಾದ ಆವಳಿಕಟ್ಟಡದ ಮೇಲೆ ದಾಳಿ ಮಾಡಿದಂತೆ ನಿಮಗೂ ತಾಲಿಬಾನಿಗಳು ದಾಳಿ ಮಾಡುತ್ತಾರೆ!!’ ಹುಷಾರ್!! ಎಂದು ಎಚ್ಚರಿಕೆ ನೀಡುತ್ತಲೇ ಜಾಗತಿಕ ಸಮುದಾಯಗಳನ್ನು ಹೆದರಿಸುತ್ತಿದ್ದಾನೆ! ಪಾಕ್ ನ ಮಿತ್ರ ರಾಷ್ಟ್ರವಾದ ಚೀನಾ ತಾಲಿಬಾನಿಗಳಿಗೆ ಹಣಕಾಸು ನೆರವು ನೀಡುವಂತೆ ವಿಶ್ವಸಂಸ್ಥೆಗೆ ಕರೆ ನೀಡುತ್ತಿದ್ದಾನೆ! ಅಮೆರಿಕಾದ ಅಧ್ಯಕ್ಷ ಬೈಡನ್ ತನ್ನ ಸೈನಿಕರರು ಕಾಬೂಲ್ ಏರ್ ಪೋರ್ಟ್ ನಲ್ಲಿ ಐಸಿಸ್-ಕೆ ಉಗ್ರರ ರಾಕೆಟ್ ದಾಳಿಗೆ ಕರಗಿಹೋದರೆಂದು ಕಣ್ಣೀರಿಡುತ್ತಾ ಮಾಧ್ಯಮದೆದುರು ಬಿಕ್ಕಳಿಸುತ್ತಿದ್ದಾನೆ! ಈ ಎಲ್ಲಾ ಜಗನ್ನಾಟಕಗಳ ಸೂತ್ರದಾರರು ಯಾರು ಎಂಬುದು ಜಗತ್ತಿಗೆ ತಿಳಿಯಲೇಬೇಕಿದೆ.

ಅಮಾನವೀಯ ಸಿದ್ಧಾಂತದ ತಾಲಿಬಾನ್ ಭಯೋತ್ಪಾದಕರಿಗೆ ಸುಸಜ್ಜಿತ ಸಂಪನ್ಮೂಲ, ಶಶ್ತ್ರಾಸ್ತ್ರ ಹೊಂದಿದ ಖನಿಜ ಸಂಪತ್ತಿನ ದೇಶವನ್ನು ಇಷ್ಟು ಈಸಿಯಾಗಿ ಕೈವಶವಾಗುವಂತೆ ಒಳ ಒಪ್ಪಂದ ಮಾಡಿಕೊಂಡವರಾರು? ಕಾರಣವೇನೂ?
ಸಾಕಷ್ಟು ಸಂಪನ್ಮೂಲ ವೈಜ್ಞಾನಿಕ ವ್ಯವಸ್ಥೆ, ತಾಂತ್ರಿಕ ಸಲಕರಣೆಗಳನ್ನು ಹೊಂದಿದ್ದ ಆಫ್ಘಾನ್ ದೇಶವನ್ನು ಕೈವಶ ಮಾಡಿಕೊಂಡು ಕುಳಿತಿರುವ ತಾಲಿಬಾನಿಗಳು ಈಗ ಯಾವ ಅಣುಬಾಂಬ್ ತಯಾರಿಸಿದರೂ ಕೇಳುವವರಾರು? ಜೈವಿಕ ಅಸ್ತ್ರಗಳನ್ನು ತಯಾರಿಸಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದರೇ ಜಗತ್ತಿನ ಜನರ ಗತಿಯೇನೂ? ಇಡೀ ಬ್ರಹ್ಮಾಂಡವನ್ನೇ ಇಸ್ಲಾಮಿಕ್ ಸ್ಟೇಟ್ಸ್ ಮಾಡಬೇಕು, ಅಲ್ಲೆಲ್ಲ ಶರಿಯಾ ಕಾನೂನನ್ನು ಜಾರಿಗೆ ತರಬೇಕೆಂದು ಹೊರಟಿರುವ ವಿವಿಧೆಡೆ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಭಯೋತ್ಪಾದಕರು ಈಗ ಬಿಲದಿಂದೆದ್ದು ಮುನ್ನೆಲೆಗೆ ಬರುತ್ತಿದ್ದಾರೆ! ಮೂಲೆಯಲ್ಲೆಲ್ಲೋ ಬಚ್ಚಿಟ್ಟುಕೊಂಡಿದ್ದ ಐಸಿಸ್-ಕೆ ಎಂಬ ಭಯೋತ್ಪಾದಕ ಸಂಘಟನೆ ಕೂಡ ಈಗ ಕಾಬೂಲ್ ಏರ್ ಪೋರ್ಟ್ ಗೆ ಬಂದು ರಾಕೆಟ್ ದಾಳಿ ನಡೆಸುತ್ತಿದೆ! ಪಾಪ ಇದು ಏನೆಂದು ಅಲ್ಲೆ ಕಾಬೂಲ್ ಏರ್ ಪೋರ್ಟ್ ಸುತ್ತ ಸುತ್ತುವರಿದಿರುವ ರಕ್ಕಸ ತಾಲಿಬಾನ್ ಉಗ್ರರಿಗೆ ಗೊತ್ತೇ ಇಲ್ಲವಂತೇ! ಇದನ್ನೆಲ್ಲ ಈ ಜಗತ್ತಿನ ಜನ ನಾವು ನಂಬಬೇಕಂತೆ.

ಎಲ್ಲಾ ಉಗ್ರಗಾಮಿ ಸಂಘಟನೆಗಳು ಒಂದಿಲ್ಲೊಂದು ದಿನ ತಮ್ಮ ಶರಿಯಾ ಕಾನೂನಿನ ಅಡಿಯಲ್ಲಿ ಒಂದಾಗೇ ತೀರುತ್ತವೆ. ತಮಗೆ ಬೇಕಾದ ದೇಶಗಳನ್ನು ಸುಪರ್ದಿಗೆ ತೆಗೆದುಕೊಂಡು ಆಳ್ವಿಕೆ ನಡೆಸುತ್ತವೆ. ಅದಕ್ಕಾಗಿ ಅವರು ತುಳಿಯುವ ಮಾರ್ಗ ಮಾತ್ರ ಭಯೋತ್ಪಾದಕ ಹಿಂಸಾಚಾರವೆ. ಇದಂತು ಸ್ಪಷ್ಟ. ತಾವು ಪಡೆಯಲೇಬೇಕೆಂದು ಕಣ್ಣುಹಾಕಿ ಕುಳಿತಿದ್ದ ವಿವಿಧ ದೇಶಗಳ ಪ್ರದೇಶಗಳ ಮೇಲೆ ಈಗ ಎಲ್ಲಾ ಭಯೋತ್ಪಾದಕರು ಒಳಗೊಳಗೇ ತಂತ್ರ ರೂಪಿಸಿ ಒಂದಾಗಿ ಪಾಕಿಸ್ತಾನ-ಚೀನಾದಂತ ದೇಶಗಳಿಂದ ಶಸ್ತ್ರಾಸ್ತ್ರಗಳ ಸಹಾಯ ಪಡೆದು ಮುಗಿಬಿದ್ದಿದ್ದಾರೆ! ತಾಲಿಬಾನ್ ಆಡಳಿತದ ವಿಜಯೋತ್ಸವದ ಸಡಗರದ ಗುಂಗಿನಲ್ಲಿ ನಮ್ಮ ಕಾಶ್ಮೀರದ ಕಣಿವೆಗೂ ಕಣ್ಣುಹಾಕಿರುವ ಭಯೋತ್ಪಾದಕರು ಈಗ ಅಲ್ಲಿ ತಮ್ಮ ಎಲ್ಲ ಚಟುವಟಿಕೆಗಳನ್ನು ಬಿರುಸಿನಿಂದ ನಡೆಸುತ್ತಿರುವುದು ಗುಪ್ತಚರ ಇಲಾಖೆ ಮಾಹಿತಿ ಬರುತ್ತಿದೆ! ಇದ್ದಕ್ಕಿದ್ದಂತೆ ನೂರಾರು ಮಂದಿ ಕಾಶ್ಮೀರದ ಮುಸ್ಲಿಂ ಜನಾಂಗದ ಯುವಕರು ನಾಪತ್ತೆ ಯಾಗಿದ್ದಾರಂತೆ! ಮಿಸ್ಸಿಂಗ್ ಲಿಂಕ್ ನಾ ಮೂಲ ಹುಡುಕುತ್ತಾ ಹೋದ ನಮ್ಮ ಮಿಲಿಟರಿ ಇಂಟಿಲಿಜನ್ಸ್ ಯೂನಿಟ್ ನವರಿಗೆ ಬಂದಿರುವ ಮಾಹಿಯೇನೆಂದರೆ ಭಾರತ-ಪಾಕ್ ಗಡಿನಿಯಂತ್ರಣ ರೇಖೆಯುದ್ದಕ್ಕೂ ಇತ್ತೀಚೆಗೆ ತಲೆಯೆತ್ತಿರುವ ಭಯೋತ್ಪಾದಕರ ಶಿಬಿರಗಳಲ್ಲಿ ಕಾಶ್ಮೀರದ ಮುಸ್ಲಿಂ ಯುವಕರು ಟೆರರಿಸ್ಟ್ ರೆಕ್ರುಟ್ಮೇಂಟ್ ಗಳಲ್ಲಿ ಸೇರ್ಪಡೆಗೊಂಡು ಕೈಯಲ್ಲಿ ಗನ್ ಹಿಡಿದು ಭಯೋತ್ಪಾದಕರಾಗಿ ತಯಾರಾಗುತ್ತಿರುವ ಕರಾಳ ಚಿತ್ರಣ! ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಕಣಿವೆಯಲ್ಲಿ ಮತ್ತು ಪಿಓಕೆ ಬಾರ್ಡರ್ ನಾ ಆಚೆ ದಡ್ಡಕಾಡು ಗುಡ್ಡಗಾಡು ಪ್ರದೇಶಗಳಲ್ಲಿ ಬಂದು ಬೀಡುಬಿಟ್ಟಿರುವ ಪ್ರಮುಖ ಆರು ಭಯೋತ್ಪಾದಕ ಸಂಘಟನೆಗಳು ಕಾಶ್ಮೀರವನ್ನು ಕೈವಶ ಮಾಡಿಕೊಳ್ಳುವ ದುರಾಲೋಚನೆಯಿಂದ ಕಾಶ್ಮೀರದ ಮುಸ್ಲಿಂ ಜನಾಂಗದ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೆಳೆಯಲು, ಗಡಿಯುದ್ದಕ್ಕೂ ಶಿಬಿರಗಳಲ್ಲಿ ಹೊಸದಾಗಿ ರಿಕ್ರುಟ್ಮೆಂಟ್ ಆರಂಭಿಸಿರುವುದು ಭಾರತದ ಗುಪ್ತಚರ ವಿಭಾಗಕ್ಕೆ ಮಾಹಿತಿ ಬಂದಿದೆ! ಶಿಕ್ಷಣದ ಕೊರತೆಯಿಂದ, ಭಯೋತ್ಪಾದಕರು ಒಡ್ಡುತ್ತಿರುವ ಡ್ರಗ್ಸ್ ಆಮಿಸದಿಂದ, ‘ಗನ್ ಕಲ್ಚರ್’ ಶೋಕಿಯಿಂದ ಮತ್ತು ಜೆಹಾದಿ ಧರ್ಮ ಬೋಧನೆ ಯಿಂದ ಪ್ರೇರೇಪಿತರಾಗಿ ನೂರಾರು ಮಂದಿ ಮುಸ್ಲಿಂ ಜನಾಂಗದ ಯುವಕರು ನಾಪತ್ತೆ ಯಾಗಿದ್ದು ಈ ವರ್ಷದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಯುವಕರು ಟೆರರಿಸ್ಟ್ ರೆಕ್ರುಟ್ಮೇಂಟ್ ಗಳಲ್ಲಿ ಸೇರ್ಪಡೆಗೊಂಡು ಕೈಯಲ್ಲಿ ಗನ್ ಹಿಡಿದು ಭಯೋತ್ಪಾದಕರಾಗುತ್ತಿರುವದು ಆತಂಕದ ವಿಷಯವಾಗಿದೆ.

 

 

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಅನಿವಾರ್ಯವಾಗಿ ಕೆಲವು ತಿಂಗಳು ಮಿಲಿಟರಿ ಆಡಳಿತ ಜಾರಿಯಲ್ಲಿದ್ದ ಕಾರಣದಿಂದ ಅಲ್ಲಿ ಮುಸ್ಲಿಂ ಜನಾಂಗದವರೇ ಬಹುಸಂಖ್ಯಾತ ರಾಗಿರುವ ಕಾರಣದಿಂದಲೂ ಇತ್ತೀಚೆಗೆ ಹಲವು ರಾಷ್ಟ್ರಗಳ ಭಯೋತ್ಪಾದಕ ಸಂಘಟನೆಗಳೂ ಕಾಶ್ಮೀರದಲ್ಲಿ ನೆಲೆಯೂರಲು ಇದೇ ಸರಿಯಾದ ಸಮಯ ಅಂದುಕೊಂಡ ಈಗ ಐಸಿಸ್-ಕೆ ಅಂತ ಮೋಸ್ಟ್ ನಟೋರಿಯಸ್ ಉಗ್ರಗಾಮಿ ಸಂಘಟನೆಗಳು ಇಲ್ಲಿ ತಮ್ಮ ಶಾಖೆ ತೆರೆಯಲು ತುದಿಗಾಲಲ್ಲಿ ನಿಂತಿರುವುದು ಭಾರತದ ಭದ್ರತೆಗೆ ಕಳವಳಕಾರಿಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹೀಗೆ ಕಾಶ್ಮೀರಿ ಯುವಕರ ನಾಪತ್ತೆ ಪ್ರಕರಣ, ಭಯೋತ್ಪಾದನಾ ಶಿಬಿರಗಳಲ್ಲಿ ಹೊಸದಾಗಿ ರಿಕ್ರುಟ್ಮೆಂಟ್ ನಡೆಯುತ್ತಿದ್ದರೂ ಯಾವಾಗಲೂ ಇನ್ನೂರರ ಗಡಿದಾಟುತ್ತಿರಲಿಲ್ಲ! ಆದರೆ ಈ ಬಾರಿಯಂತು ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರದ ಯುವಕರನ್ನು ಜೊತೆಗೆ ಭಾರತದ ಇತರ ರಾಜ್ಯಗಳಲ್ಲಿಯೂ ಮುಸ್ಲಿಂ ಜನಾಂಗದವರು ಮತ್ತು ಇತರರನ್ನು ಮತಾಂತರಗೊಳಿಸಿ ಭಯೋತ್ಪಾದಕ ಸಂಘಟನೆ ಗಳಿಗೆ ಸೇರಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಮೊದಲಬಾರಿಗೆ ಜಮ್ಮು ಕಾಶ್ಮೀರದ ಶ್ರೀನಗರದ ಟಾಪ್ ಆರ್ಮಿ ಕಮಾಂಡಿಂಗ್ ಆಫೀಸರ್(ಲೆಫ್ಟಿನೆಂಟ್ ಜನರಲ್ ಡಿ.ಪಿ.ಪಾಂಡೆ) ಒಬ್ಬರು ಗನ್ನು ಕೈಗೆತ್ತಿಕೊಂಡ ಮಕ್ಕಳ ಮನೆಬಾಗಿಲಿಗೆ ಹೋಗಿ ತಂದೆ ತಾಯಿ ಕುಟುಂಬಗಳ ಬಳಿ ‘ಈಗಾಗಲೇ ಟೆರರಿಸ್ಟ್ ರೆಕ್ರುಟ್ಮೇಂಟ್ ಗಳಲ್ಲಿ ಸೇರ್ಪಡೆಗೊಂಡಿರುವ ನಿಮ್ಮ ಮಕ್ಕಳನ್ನು ವಾಪಸ್ಸು ಕರೆಯಿಸಿಕೊಳ್ಳಿ!’ ಎಂದು ಮನವಿಮಾಡಿ ಮನವೂಲಿಸುತ್ತಿದ್ದಾರೆ!

 

ಈಗಾಗಲೇ ಭಯೋತ್ಪಾದಕರೊಂದಿಗೆ ಕೈಜೋಡಿಸಿ ಗನ್ನುಹಿಡಿದ ನಿಮ್ಮ ಮಕ್ಕಳನ್ನು ಶರಣಾಗತಿ ಮಾಡಿಸಿರೆಂದು ಬುದ್ಧಿ ಹೇಳುತ್ತಿದ್ದಾರೆ!!

ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಹನ್ನೊಂದು ಜನ ಸರ್ಕಾರಿ ನೌಕರರನ್ನು ಕೆಲಸದಿಂದ ಅಮಾನತ್ತು ಮಾಡಿ ಬಂಧಿಸಿ ಜೈಲಿಗಟ್ಟಲಾಗಿದೆ. ವೈಟ್ ಕಾಲರ್ ಜೆಹಾದಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಈ ಹನ್ನೊಂದು ಜನ ಕಾಶ್ಮೀರಿ ಮುಸ್ಲೀಮರು ಜಮ್ಮು-ಕಾಶ್ಮೀರದ ಕುಪ್ಪಾರ, ಶ್ರೀನಗರ, ಅನಂತ್ ನಾಗ್, ಪುಲ್ವಾಮಾ,ಬುಡ್ಗಾಮ್,ಬಾರಾಮುಲ್ಲಾ, ಮುಂತಾದ ಜಿಲ್ಲೆಗಳಲ್ಲಿ ಸರ್ಕಾರದ ಹೆಲ್ತ್, ಪೊಲೀಸ್, ಅಗ್ರಿಕಲ್ಚರ್, ಶಿಕ್ಷಣ, ಮೆಡಿಕಲ್ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸಮಾಡುತ್ತಿದ್ದಾಗಲೇ ಭಯೋತ್ಪಾದಕ ಸಂಘಟನೆ ಗಳೊಂದಿಗೆ ಒಳಗೊಳಗೇ ಸ್ಲೀಪರ್ ಶೆಲ್ ರೀತಿ ಕೆಲಸಮಾಡುತ್ತ, ಭಯೋತ್ಪಾದಕ ಸಂಘಟನೆಗಳಿಗೆ ಹೊಸ ಯುವಕರನ್ನು ಸೇರಿಸುವ, ಹಣಕಾಸು ಫಂಡಿಂಗ್ ಮಾಡುವ ಕೆಲಸದಲ್ಲಿ ನಿರತರಾಗಿದ್ದರಂತೆ! ಹವಾಲಾ ಮೂಲಕ ಭಯೋತ್ಪಾದಕರಿಗೆ ಹಣ ಸಂಗ್ರಹಿಸಿ, ಕೂಡಿಟ್ಟು ರವಾನಿಸುತ್ತಿ ವಿಷಯವನ್ನು ಎನ್.ಐ.ಎ ಟ್ರಾಕ್ ಮಾಡಿ ಬೇಧಿಸಿ ಬಯಲಿಗೆಳೆದಿದೆ! ಇದೆ ರೀತಿ ಕೆಲಸಮಾಡುತ್ತ ಇರುವ ಇನ್ನಷ್ಟು ವೈಟ್ ಕಾಲರ್ ಜೆಹಾದಿ ಮೊಜಾಹಿದ್ದೀನ್ಸ್ ಗಳು , ನಮ್ಮ ದೇಶದ ಮಿಲಿಟರಿ ಸೀಕ್ರೆಟ್ ದತ್ತಾಂಶಗಳ ಬಗ್ಗೆ ಮಾಹಿತಿ ತೆಗೆಯಲು ಕೂತಿರುವ ಸೈಬರ್ ಹ್ಯಾಕಿಂಗ್ ಉಗ್ರರು, ಆನ್ ಲೈನ್ ನಲ್ಲಿ ಸದ್ದಿಲ್ಲದೆ ಸೈಬರ್ ಕ್ಯಾಂಪೇನ್ ಮೂಲಕ ಹೊಸ ಯುವಕರನ್ನು ರೆಕ್ರುಟ್ಮೆಂಟ್ ಮಾಡಿಕೊಳ್ಳುತ್ತಿರುವ ಮತ್ತಷ್ಟು ವೈಟ್ ಕಾಲರ್ ಜೆಹಾದಿಗಳು, ಭಾರತದೊಳಗೆ ಕಾರ್ಯಾಚರಣೆ ಗಿಳಿದಿರುವುದು ಬೆಳಕಿಗೆ ಬರುತ್ತಿದೆಯಂತೆ!

ಪಾಕಿಸ್ತಾನದ ಮರ್ಜಿಗೂ ಬೀಳದೆ ತಾವೇ ಸ್ವತಹ ಕಾಶ್ಮೀರದ ವಿಚಾರದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳ ಬೆಂಬಲದಿಂದ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಇ-ತೋಯ್ಬಾ ಸಂಘಟನೆಗಳು ಮುಂಚೂಣಿಯಲ್ಲಿ ನಿಂತಿದ್ದು ಈಗ ಕಾಶ್ಮೀರದ ಮುಸ್ಲಿಂ ಯುವಕರನ್ನು ಭಯೋತ್ಪಾನಾ ರೆಕ್ರುಟ್ಮೆಂಟ್ ನತ್ತ ಸೆಳೆಯುತ್ತಿವೆ. ಗಡಿಯುದ್ದಕ್ಕೂ ಶಿಬಿರಗಳನ್ನು ಹಾಕಿ ಅಲ್ಲಿಂದಲೇ ಡ್ರೋನ್ ಮೂಲಕ ನಮ್ಮ ದೇಶದ ಮಿಲಿಟರಿ ಕ್ಯಾಂಪ್ ಗಳ ಮೇಲೆ ದಾಳಿ ಮಾಡುತ್ತಿವೆ! ಈಗಾಗಲೇ ದೇಶದ ಗಡಿಯೊಳಗೆ ನುಸುಳಿ ಬಂದು ಭೂಗತವಾಗಿ ಕಾರ್ಯಾಚರಣೆ ಗಿಳಿದಿರುವ ಭಯೋತ್ಪಾದಕರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವ ಗಡಿಯಾಚೆಗಿನ ಶಿಬಿರಗಳಲ್ಲಿ ಅಡಗಿರುವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಭಾರತದೊಳಗೆ ಪುಲ್ವಾಮಾ ದಂತ ದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ಕಾದು ಕುಳಿತಿರುವಂತೆ ಕಾಣುತ್ತಿದೆ. ಈಗಾಗಲೇ ಕಾಶ್ಮೀರದ ಭಯೋತ್ಪಾದಕರ ಮುಖಂಡ ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನ ತಲುಪಿ ಅಲ್ಲಿ ತಾಲಿಬಾನಿಗಳ ಜೊತೆ ಕಾಶ್ಮೀರದ ಕಣಿವೆಯ ವಿಷಯವಾಗಿ ಮಾತುಕತೆ ಮಾಡಿಕೊಂಡು ಬಂದಿದ್ದಾನೆ. ಆತ ಈಗ ತಾಲಿಬಾನಿಗಳ ಜೊತೆ ಕಾಬೂಲ್ ನಲ್ಲೆ ಇದ್ದಾನೆ ಎಂಬ ವದಂತಿಗಳೂ ಎದ್ದಿವೆ. ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ನಮ್ಮ ದೇಶದ ಪಾರ್ಲಿಮೆಂಟ್ ಮೇಲಾದ ದಾಳಿಗಳು, ಬಾಂಬೆಯಲ್ಲಿ ನಡೆದ ದೆಹಲಿಯಲ್ಲಿ, ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಬ್ಲಾಸ್ಟ್ ಗಳು, ವಿಮಾನ ಅಪಹರಣದಂತ ಪ್ರಕರಣಗಳು ಮರುಕಳಿಸುವ ಎಲ್ಲಾ ಸಾಧ್ಯತೆಗಳೂ ಈಗ ಹೆಚ್ಚಾಗಿರುವುದರಿಂದ ನಾವು ಮತ್ತಷ್ಟೂ ಜಾಗರೂಕತೆಯಿಂದ ಇರಬೇಕಾಗಿದೆ.

 

ಮತ್ತು ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿರುವ ಲಷ್ಕರ್-ಇ-ತೋಯ್ಬಾ, ಹಿಜ್ಬುಲ್ ಮುಜಾಹಿದ್ದೀನ್, ಜೈಷ್-ಇ-ಮೋಹಮ್ಮದ್ , ಹರ್ಕತ್ ಈ ಮುಜಾಹಿದ್ದೀನ್, ತಾಲಿಬಾನ್, ಐಸಿಸ್ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಮುನ್ನುಗ್ಗಬೇಕಿದೆ. ಸೈನ್ಯದ ಬಲವನ್ನು ಹೆಚ್ಚಿಸುತ್ತಲೇ ಸೈನಿಕರಿಗೆ ಮತ್ತಷ್ಟು ಆತ್ಮಬಲ ತುಂಬಬೇಕಿದೆ.

 

Girl in a jacket
error: Content is protected !!