ಮುಂಬೈ, ಜೂ, ೧೦; ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ೧೧ ಜನ ಮೃತಪಟ್ಟ ಘಟನೆ ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ಸಂಭಿವಿಸಿದೆ
ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ ೧೮ ಜನರನ್ನು ರಕ್ಷಣೆ ಮಾಡಲಾಗಿದ್ದು, ೬ ಮಕ್ಕಳು ಸೇರಿದಂತೆ ೧೧ ಜನರು ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ೬ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಟ್ಟಡ ಕುಸಿದು ಮುಂಬೈನಲ್ಲಿ ೧೧ ಸಾವು
Share