ʼಇ-ರೂಪಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಮೋದಿ ಚಾಲನೆ

Share

ನವದೆಹಲಿ,ಆ,02: ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ʼಇ-ರೂಪಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ಈ ಇ-ರುಪಿ, ಸರ್ಕಾರಿ ಯೋಜನೆಗಳ ಲಾಭಗಳನ್ನು ಫಲಾನುಭವಿಗೆ ತಲುಪಿಸುವಲ್ಲಿ ಸರ್ಕಾರ ಹಾಗೂ ಫಲಾನುಭವಿ ನಡುವೆ ಪ್ರಸ್ತುತ ಇರುವ ಸೋರಿಕೆ ಹಾಗೂ ದುರುಪಯೋಗವನ್ನು ತಡೆಗಟ್ಟುವಂತಹ ಒಂದು ಉಪಯುಕ್ತ ಉಪಕ್ರಮವಾಗಿದೆ.

ಈ ಆಯಪ್ ಅನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ರಚಿಸಿದೆ.

ಬಳಕೆದಾರರಿಗೆ ಭೌತಿಕ ಸಂವಹನದ ಅಗತ್ಯವಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದರರ್ಥ ಗ್ರಾಹಕರು ಮತ್ತು ಸೇವಾ ಪೂರೈಕೆದಾರರು ಇಬ್ಬರೂ ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ವೋಚರ್ ಗಳೊಂದಿಗೆ ವ್ಯವಹರಿಸಬಹುದು ಎನ್ನಲಾಗಿದೆ.

Girl in a jacket
error: Content is protected !!