ದ್ವತೀಯ ಪಿಯುಸಿ ಫಲಿತಾಂಶ- ಈ ಬಾರಿಯೂ ಮಹಿಳೆಯರೆ ಟಾಪ್
by-ಕೆಂಧೂಳಿ
ಬೆಂಗಳೂರು, ಏ.08-ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಎಂದಿನಂತೆ ಮಾಮೂಲಿ ಮಹಿಳಾ ವಿದ್ಯಾರ್ಥಿಗಳೆ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ್ದಾರೆ.
ಮಂಗಳೂರಿನ ಕೊಡಿಬೈಲ್ನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಎಸ್. 597 ಅಂಕ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಐಎನ್ಡಿಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್.ಆರ್.ಸಂಜನಾ ಬಾಯಿ 597 ಅಂಕ ಗಳಿಸುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮಂಗಳೂರಿನ ಕೊಡಿಂಬೈಲ್ನ ಕೆನೆರಾ ಪಿಯು ಕಾಲೇಜಿನಿ ವಿದ್ಯಾರ್ಥಿನಿ ದೀಪಾಶ್ರೀ ಎಸ್. 599 ಅಂಕ ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿದ್ದಾರೆ.
ಮೊದಲಸ್ಥಾನ ಉಡುಪಿ- ಯಾದಗಿರಿ ಕೊನೆ;
ರಾಜ್ಯದಲ್ಲಿ ಉಡುಪಿ ಜಿಲ್ಲೆ 93.90 ಫಲಿತಾಂಶ ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಶೇ.48.45 ಫಲಿತಾಂಶ ತನ್ನದಾಗಿಸಿಕೊಂಡಿದೆ.
ರಾಜ್ಯದಲ್ಲಿ ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.53, ವಾಣಿಜ್ಯ ವಿಭಾಗದಲ್ಲಿ ಶೇ.76.07, ಹಾಗೂ ವಿಜ಼್ಞಾನ ವಿಭಾಗದಲ್ಲಿ ಶೇ.82ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.