ಮಕ್ಕಳಲ್ಲೂ ಕೊರೊನಾ ಸೋಂಕು ದೃಡ

Share

ಬೆಂಗಳೂರು,ಮೇ,೨೮: ಕೊರೊನಾ ಸೋಂಕು ಈಗ ಮಕ್ಕಳಲ್ಲೂ ತಗಲುತ್ತಿರುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ ,ರಾಜ್ಯಾದ್ಯಂತ ಹಲವು ಕಡೆ ಈಗ ಮಕ್ಕಳಿಗೂ ಈ ಸೋಂಕು ಹರಡುವ ಬಗ್ಗೆ ಕೆಲವುಕಡೆ ಈಗಾಗಲೇ ದೃಡಪಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದು ದೃಡಪಟ್ಟಿದ್ದು ಇಲ್ಲಿಯವರೆಗೂ ೧೩೫೦ ಮಕ್ಕಳಿಗೆ ಕೊರೊನಾ ಸೋಮಕು ತಗುಲಿರುವುದು ಪರೀಕ್ಷೆಯಿಂದ ಸಾಭೀತಾಗಿದೆ
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಅಧಿಕೃತ ಮಾಹಿತಿ ನೀಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ೨೫೦ ಮಕ್ಕಳಿಗೆ ಸೋಂಕು ಸಕ್ರಿಯವಾಗಿದ್ದು, ಕೊವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯವೆಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಕೊವಿಡ್ ಮೂರನೇ ಅಲೆಯಿಂದ ರಕ್ಷಿಸಲು ಸಕಲ ಸಿದ್ಧತೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ತಯಾರಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ೪ ತಾಲೂಕು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಕೊವಿಡ್ ಸೆಂಟರ್ ತೆರೆಯಲು ಆದೇಶಿಸಲಾಗಿದ್ದು, ಆಕಾಶ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ೨೫ ಬೆಡ್ ಮೀಸಲು ಇರಿಸಲಾಗಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆಗಳಲ್ಲಿ ಮಕ್ಕಳಿಗಾಗಿ ಕೊವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಜತೆಗೆ ಮಕ್ಕಳಿಗಾಗಿ ಐಸಿಯು ಹಾಗೂ ಎನ್‌ಐಸಿಯು ಮಾದರಿ ಬೆಡ್‌ಗಳನ್ನು ಸಹ ಸಿದ್ದಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.
ಹೀಗಾಗಿ ಈಗ ರಾಜ್ಯಾದ್ಯಂತ ಈ ಬಗ್ಗೆ ಮತ್ತಷ್ಟು ಎಚ್ಚರವಹಿಸಿದ್ದು ಎಲ್ಲಡೆ ಮಕ್ಕಳಿಗೂ ಸೋಂಕು ಪರೀಕ್ಷೆ ಮಾಡಲಾಗುತ್ತಿದೆ ಮೂರನೇ ಅಲೆ ಬಹುತೇಕ ಮಕ್ಕಳಿಗೆ ಹೆಚ್ಚು ಹರಡುವುದು ಎನ್ನುವ ಮಾಹಿತಿ ಇತ್ತು ಆದರೆ ಈಗಲೇ ಮಕ್ಕಳಿಗೂ ಸೋಂಕು ಹರಡುತ್ತಿರುವುದು ದೃಡಪಟ್ಟಿದೆ

Girl in a jacket
error: Content is protected !!