ಬೆಂಗಳೂರು,ಮೇ.20:ಕೇಂದ್ರ ಸರ್ಕಾರ ಕೂಡ ಮಹತ್ವ ನಿರ್ಧಾರ ತೆಗೆದುಕೊಂಡಿದೆ.ರಸಗೊಬ್ಬರದ ಬೆಲೆಯನ್ನು ಮೊದಲಿನಂತೆ ನೀಡುತ್ತಿದ್ದು,ಪ್ರಧಾನಿ ಮೋದಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್,ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಕೃಷಿಕರಿಗೆ ಕೊರತೆ ಇದೆ ಎಂದು ಕೆಲವರು ಹೇಳುತ್ತದ್ದಾರೆ. ಆದರೆ ಸರ್ಕಾರ ಸಂಕಷ್ಟದ ಕಾಲದಲ್ಲಿ ಪ್ಯಾಕೇಜ್ ಘೋಷಿಸಿದೆ. ಕೃಷಿಕರಿಗೆ,ಹೂಬೆಳೆಗಾರರಿಗೆ ಪರಿಹಾರ ನೀಡಿದ್ದಾರೆ.ಸಂಕಷ್ಟದ ಈ ಪ್ಯಾಕೇಜ್ ಅನ್ನುಸ್ವಾಗತಿಸುವುದಾಗಿ ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇರುವ ಬಗ್ಗೆ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿ
300 ಬೆಡ್ ಹೆಚ್ಚಳ,ಆಕ್ಸಿಜನ್ ಹಾಗೂ ಕಂಟೈನರ್ ಗೆ ಕೇಳಿದ್ದೇವೆ.ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ 623 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.ಪರಿಸ್ಥಿತಿ ನೋಡಿಕೊಂಡು ಕರ್ಪ್ಯೂ ವಿಸ್ತರಣೆ ಮಾಡಲಾಗುವುದು ಎಂದರು.
ರಸಗೊಬ್ಬರಕ್ಕೆ ಕೇಂದ್ರದ ಐತಿಹಾಸಿಕ ತೀರ್ಮಾನ: ಬಿ.ಸಿ.ಪಾಟೀಲ್
Share