ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ೧೨೨ ರೂ ಇಳಿಕೆ

Share

ನವದೆಹಲಿ,ಜೂ,೦೧: ತೈಲ ಬೆಲೆ ಜೊತೆ ಜೊತೆಗೆ ಏರಿಕೆಯಾಗುತ್ತಿದ್ದ ವಾಣಿಜ್ಯ ಅನಿಲ ಸಿಲಿಂಡರ್ ದರ ಇಳಿಕೆಯಾಗಿದೆ.ಆದರೆ ಗೃಹ ಬಳಿಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೊರೊನಾ ಮದ್ಯೆ ಅಗತ್ಯವಸ್ತುಗಳು ಏರಿಕೆ ಕಾಣುತ್ತಿದ್ದವು ಈಗ ಅನಿಲಿ ಸಿಲಿಂಡರ್ ದರ ೧೨೨ ರೂ ಕಡಿತಗೊಳಿಸಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ ೧೨೨ರೂ ಕಡಿತ ಮಾಡಿದೆ. ಆದರೆ ೧೪.೨ ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಐಒಸಿ ವೆಬ್‌ಸೈಟ್‌ನ ಪ್ರಕಾರ, ಜೂನ್ ೧ ರಿಂದ ದೆಹಲಿಯಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ (ವಾಣಿಜ್ಯ ಬಳಕೆ ಸಿಲಿಂಡರ್) ಬೆಲೆ ಪ್ರತಿ ಸಿಲಿಂಡರ್‌ಗೆ ೧೪೭೩.೫೦ ರೂ.ಗೆ ಇಳಿಕೆಯಾಗಿದೆ. ಈ ಮೊದಲು ಅದರ ಬೆಲೆ ೧೫೯೫.೫೦ ರೂ. ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು ೧೨೨ ರೂ.ಗಳಷ್ಟು ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ೪೫.೫೦ ರೂ.ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ ೧೬೪೧ ರೂ.ನಿಂದ ೧೫೯೫.೫ ರೂ.ಗೆ ಇಳಿದಿತ್ತು. ಇದಕ್ಕೂ ಮೊದಲು ಮೇ ತಿಂಗಳ ಮೊದಲು ೧೯ ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು.
ಇನ್ನು ದೆಹಲಿಯಲ್ಲಿ ೧೯ ಕೆಜಿ ಸಿಲಿಂಡರ್ ದರ ೧೪೭೩.೫ರೂಗೆ ಇಳಿಕೆಯಾಗಿದ್ದು, ಮುಂಬೈನಲ್ಲಿ ೧೪೨೨.೫ರೂಗೆ ಇಳಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ೧೫೪೪.೫, ಚೆನ್ನೈನಲ್ಲಿ ೧೬೦೩.೦ರೂ ಗೆ ಇಳಿಕೆಯಾಗಿದೆ.
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಇದೇ ವೇಳೆ ಗೃಹ ಬಳಕೆಯ ಅಥವಾ ದೇಶೀಯ ೧೪.೨ ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದಿಗೂ ದೆಹಲಿಯ ದೇಶೀಯ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ ೮೦೯ ರೂ ಇದ್ದು, ಬೆಂಗಳೂರಿನಲ್ಲಿ ೮೧೨ ರೂ ಇದೆ.

Girl in a jacket
error: Content is protected !!