ರೈತರ ಮಕ್ಕಳು, ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ಭರ್ಜರಿ ಗಿಫ್ಟ್ ಕೊಟ್ಟ ಬಸವರಾಜ ಬೊಮ್ಮಾಯಿ
ಬೆಂಗಳೂರು,ಜು,28: ಮಕ್ಕಳು, ಹಿರಿಯ ನಾಗರೀಕರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಶಿಷ್ಯವೇತನನ್ನು ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.
ಹೌದು ಅಧಿಕಾರಿಗಳ ಜತೆ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಜಾರಿ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುದಾನ ನೀಡಲಾಗುತ್ತದೆ. ರೈತರ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು. ಹೀಗಾಗಿ ಅನುದಾನ ನೀಡಲಾಗುತ್ತದೆ. ಇನ್ನು ವಿಧವಾ ವೇತನವನ್ನ 600ರಿಂದ 800ಕ್ಕೆ ಏರಿಕೆ, ವಿಶೇಷ ಚೇತನರಿಗೆ 600ರಿಂದ 800ರೂಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಸಂಧ್ಯಾಸುರಕ್ಷಾ ಯೋಜನೆ ಹಣವನ್ನ 1000ರೂ ನಿಂದ 1200 ರೂ ಗೆ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈಗ ನಾನು ಸಿಎಂ ಆಗಿ ನಿರ್ಣಯಗಳನ್ನು ಹೇಳುತ್ತಿದ್ದೇನೆ. ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಸರ್ಕಾರದ ದಿಕ್ಸೂಚಿಯನ್ನ ಹೇಳಿದ್ದೇನೆ. ಕಟ್ಟಕಡೆಯ ಸಮಾಜದ ಪರ ಸರ್ಕಾರ ಇರಬೇಕು. ದಕ್ಷ ಪ್ರಾಮಾಣಿಕ ಜನಪರ ಆಡಳಿತ ನೀಡಬೇಕು. ಯೋಜನೆ ಜಾರಿಯಲ್ಲಿ ವಿಳಂಬವಾಗಬಾರದು. ಇತರೆ ಇಲಾಖೆಗಳ ಮಧ್ಯೆ ಸಂಬಂಧ ಚೆನ್ನಾಗಿ ಇರಬೇಕು. ಯಾವುದೇ ಕೆಲಸ ತಡವಾಗದಂತೆ ಮಾಡಬೇಕು. ಇಲಾಖೆಗಳ ಜವಾಬ್ದಾರಿ ಸಂಪೂರ್ಣ ನಿಮ್ಮದು ಎಂದು ಹೇಳಿದ್ದೇನೆ. ಅನಗತ್ಯ ಖರ್ಚು ಕಡಿಮೆ ಮಾಡಬೇಕೆಂದು ಅದಿಕಾರಿಗಳಿಗೆ ಸೂಚಿಸಿದ್ದೇನ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.