ಮಂಡ್ಯ,ಜೂ,29- ಮೇಕೆದಾಟು ಯೋಜನೆ ವಿಚಾರದಲ್ಲಿ ನಿಮಗೆ ಜವಾಬ್ದಾರಿ ಇಲ್ವ, 136 ಸೀಟು ಕೊಟ್ಟು ಜನರು ಆಶೀರ್ವಾದ ಮಾಡಿಲ್ವಾ? ಪೆನ್ನು ಪೇಪರ್ ಕೊಟ್ಟಿದ್ದು ನಿಮಗೆ ಯಾಕೆ? ಲೂಟಿ, ಭ್ರಷ್ಟಚಾರ, ಕೊಳ್ಳೆ ಹೊಡೆಯೋಕೆ ಪೆನ್ನು ಪೇಪರ್ ಕೊಟ್ರಾ ನಿಮಗೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.
ಮಂಡ್ಯದ ಮದ್ದೂರಲ್ಲಿ ಮಾತನಾಡಿದ ಅವರು, ನಮ್ಮ ನೀರು ನಮ್ಮ ಹಕ್ಕು ಅಂತಾ ಹೊರಟಿದ್ರು. ಪೆನ್ನು ಪೇಪರ್ ಕೇಳಿದ್ರು, ಅಂತ ಜನ ಕೊಟ್ಟಿದ್ದಾರೆ. ಹೋಗಿ ತಮಿಳುನಾಡು ಸಿಎಂ ಜತೆ ಮಾತನಾಡಲಿ ನಾವು ನಿಮ್ಮ ಜತೆ ಬರುತ್ತೇವೆ ಎಂದು DKS ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಬಿಜೆಪಿಯಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ. ಎರಡು ಪಕ್ಷದಲ್ಲಿ ಅಪಸ್ವರದ ಪ್ರಶ್ನೆಯೇ ಇಲ್ಲ. ಸಮನ್ವಯತೆಗಾಗಿ ಕಮಿಟಿ ಮಾಡಬೇಕು ಎಂದು ನಾಯಕರು ತೀರ್ಮಾನಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನ ನಾಯಕರು ತೆಗೆದುಕೊಳ್ಳುತ್ತಾರೆ. ಎಂದು ಹೇಳಿದರು.
ಮೂರು ಸೋಲು ನನಗೆ ಪಾಠವನ್ನ ಕಲಿಸಿದೆ. ಆ ಸೋಲನ್ನ ತಲೆಯಲ್ಲಿ ಇಟ್ಟುಕೊಂಡು ಚಿಂತೆ ಮಾಡಲ್ಲ. ಹೋರಾಟ ಅನ್ನೋದು ನನಗೆ ರಕ್ತಗತವಾಗಿಯೇ ಬಂದಿದೆ. ಮುಂದೆ ಸೇವೆ ಮಾಡಲು ಶಕ್ತಿಯನ್ನ ಜನ ನನಗೆ ಕೊಡುತ್ತಾರೆ ಎಂದು ಉತ್ತರಿಸಿದರು
ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತೆ ವಿಚಾರಕ್ಕೆ ಮಾತನಾಡಿದ ಅವರು, ಏನು ಕ್ರಾಂತಿ ಆಗೋತ್ತೋ ಗೊತ್ತಿಲ್ಲ. ರಾಜ್ಯದಿಂದ ಕಾಂಗ್ರೆಸ್ ಅನ್ನು ಬುಡದಿಂದ ಕಿತ್ತು ಹಾಕುತ್ತಾರೆ. ಕ್ರಾಂತಿ ಆಗುತ್ತೆ ಕ್ರಾಂತಿ ಆಗುತ್ತೆ ಅಂತಿದ್ದಾರೆ. ಕ್ರಾಂತಿ ಮಾಡುವವರು ಯಾರು.? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು. ಎರಡು ವರ್ಷದಿಂದ ಆಡಳಿತದಲ್ಲಿ ಇರೋದು ಕಾಂಗ್ರೆಸ್, ಕುಮಾರಣ್ಣ ಅಲ್ಲ. ಉಸ್ತುವಾರಿ ಸಚಿವರು ಹಿರಿಯರು, ಅವರ ಮೇಲೆ ನನಗೆ ಗೌರವ ಇದೆ. ಆದ್ರೆ ಕಳೆದ 2 ವರ್ಷದಿಂದ ಕೃಷಿ ಸಚಿವ ಕೊಡುಗೆ ಏನೆಂದು ಜನರು ಕೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಂಬಾಕು, ಮಾವು ಬೆಳೆಗಾರರಿಗೆ ರಾಜ್ಯ ಸರ್ಕಾರ ಕೃಷಿ ಸಚಿವರು ಸ್ಪಂದಿಸಲಿಲ್ಲ. ಅವರಿಗೆ ಸ್ಪಂದಿಸಿದ್ದು ಕೇಂದ್ರದ ಕೈಗಾರಿಕಾ ಸಚಿವರಾದ ಕುಮಾರಸ್ವಾಮಿ. ರಾಜ್ಯದ ರೈತರ ಬಗ್ಗೆ ಕಾಳಜಿ ತೋರಿದ್ದಾರೆ ಎಂದು ಹೇಳಿದರು.