ಭ್ರಷ್ಟರಾಜ್ಯದ ವಿವಿದೆಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

Share

ಬೆಂಗಳೂರು, ಮೇ,15-ಭ್ರಷ್ಟ ಅಧಿಕಾರಿಗಳ ವಿರುದ್ಧ ಬೇಟೆ ಮುಂದುವರಿಸಿರುವ ಲೋಕಾಯುಕ್ತರು ಇಂದು ಬೆಳಂಬೆಳಿಗ್ಗೆರಾಜ್ಯದ ವಿವಿದೆಡೆ ಭ್ರಷ್ಟ ಅಧಿಕಾರಿಗಳ ಮನೆ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.

ಕಲುಬುರುಗಿ,ತುಮಕೂರು, ಯಾದಗಿರಿ ಸೇರಿದಂತೆ ವಿವಿದೆಡೆ ದಾಳಿ ನಡೆಸಿದ್ದು,ನಗ- ನಗದು,ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ತಹಶೀಲ್ದಾರ್ ಮನೆ ಹಾಗೂ ಯಾದಗಿರಿ ಜಿಲ್ಲೆಯ ಲೋಕಾಯುಕ್ತ ಶಹಾಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ,ತುಮಕೂರಿನಲ್ಲಿ ನಿರ್ಮಿತ ಕೇಂದ್ರದ ಎಂಡಿ ರಾಜಶೇಖರ್ ಹಾಗೂ ಸಹೋದರರ ಮನೆ ಮೇಲೆ ಕೂಡ ಅಧಿಕಾರಿಗಳು ದಾಳಿ ನಡಸಿದ್ದಾರೆ. ಒಟ್ಟು ಏಳು ಅಧಿಕಾರಿಗಳು ಮನೆ ಕಚೇರಿ ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆಯನ್ನು ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಹಿನ್ನಲೆಯಲ್ಲಿ ದೂರುಗಳು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ದ ಈ ಕ್ರಮವನ್ನು ಕೈಗೊಳ್ಳಲಾಗಿದೆ ..

Girl in a jacket
error: Content is protected !!