–ಮಾನಸ,ಬೆಂಗಳೂರು
ಭಾರತೀಯ ಸಶಸ್ತ್ರ ಪಡೆಗಳು: ಮುಸ್ಲಿಂ ಯುವಕರಿಗೆ ಅವಕಾಶಗಳು
ಇಸ್ಲಾಂನಲ್ಲಿ ತಾಯ್ನಾಡಿಗೆ ನಿಷ್ಠೆಯು ನಂಬಿಕೆಯ ಒಂದು ಭಾಗವಾಗಿರುವ ಇಸ್ಲಾಂ ಅನ್ನು ಧರ್ಮವಾಗಿ ಅನುಸರಿಸುವುದಕ್ಕೂ ಮತ್ತು ಆ ದೇಶಕ್ಕೆ ನಿಷ್ಠೆಯನ್ನು ಹೊಂದಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಖುರಾನ್ ಹೇಳುತ್ತದೆ, “ಓ ನಂಬುವವರೇ, ದೇವರಿಗೆ ವಿಧೇಯರಾಗಿರಿ ಮತ್ತು ಪ್ರವಾದಿಗೆ ವಿಧೇಯರಾಗಿರಿ ಮತ್ತು ನಿಮ್ಮಿಂದ ಅಧಿಕಾರದಲ್ಲಿರುವವರಿಗೆ ವಿಧೇಯರಾಗಿರಿ (೪:೬೦). ಅವರ ಸ್ವಂತ ದೇಶ ಮತ್ತು ಅವರ ಜನರನ್ನು ಪ್ರೀತಿಸು ಒಳ್ಳೆಯ ಮುಸ್ಲೀಮರ ಲಕ್ಷಣವಾಗಿದೆ. ಪ್ರೊಫೆಟ್ ಹಜರತ್ ಮುಹಮದ್ ಹೇಳಿದರು: ’ನಿಮ್ಮ ದೇಶವನ್ನು ಪ್ರೀತಿಸುವುದು (ದೇಶಭಕ್ತಿ) ನಿಮ್ಮ ನಂಬಿಕೆಯ ಒಂದು ಭಾಗವಾಗಿದೆ’. ಒಬ್ಬ ನಿಜವಾದ ಮುಮಿನ್ (ನಂಬಿಕೆಯುಳ್ಳವ) ತನ್ನ ಸ್ವಂತ ದೇಶವನ್ನು ತುಂಬಾ ಆತ್ಮೀಯವಾಗಿ ಪ್ರೀತಿಸುತ್ತಾರೆ. ಅವರು ತನ್ನ ದೇಶದ ಹಿತಾಸಕ್ತಿಗಾಗಿ ಕೆಲಸ ಇದಕ್ಕೆ ವಿರುದ್ಧವಾಗಿ ಯಾರು ತಮ್ಮ ದೇಶವನ್ನು ಪ್ರೀತಿಸು ಅಂಥವರು ಕೃತಘ್ನರು. ಅವರು ದೇಶದ್ರೋಹದ ಅಪರಾಧಿಗಳು ಮತ್ತು ಅಂತಹ ವ್ಯಕ್ತಿಗಳು ಎಂದಿಗೂ ನಿಜವಾಗಿಯೂ ಧರ್ಮ ನಿಷ್ಠರಾಗಿರುವುದಿಲ್ಲ ಮತ್ತು ಮುಮಿನ್ ಆಗಿರುವುದಿಲ್ಲ.
ಸಶಸ್ತ್ರ ಪಡೆಗೆ ಸೇರುವ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಆತಂಕಗಳಿವೆ. ಇದು ಹೆಚ್ಚಾಗಿ ಅಜ್ಞಾನ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಉಂಟಾಗುತ್ತದೆ. ಭಾರತೀಯ ಸೈನ್ಯದ ನೈಜ ಚಿತ್ರಣವನ್ನು ಪ್ರತಿನಿಧಿಸಲು ಈ ಪುರಾಣಗಳನ್ನು ವಾಸ್ತವ ಮತ್ತು ಸಾಕ್ಷ್ಯಗಳೊಂದಿಗೆ ಎದುರಿಸಬೇಕು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಭಾರತೀಯ ಮುಸ್ಲಿಮರ ಪ್ರಾತಿನಿಧ್ಯವು ಚರ್ಚೆಯ ವಿಷಯವಾಗಿದೆ ಮತ್ತು ಇದನ್ನು ನಿ???ರಿಸುವ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ, ಅಲ್ಪಸಂಖ್ಯಾತರು ಅಥವಾ ಎಸ್.ಸಿ./ಎಸ್.ಟಿ.ಗಳಿಗೆ ಯಾವುದೇ ಮೀಸಲಾತಿ ಇಲ್ಲ. ಒಂದು ವಿಶಿಷ್ಟವಾದ ಪ್ರಾತಿನಿಧ್ಯ ವ್ಯವಸ್ಥೆಯು ಅಸ್ತಿತ್ವದಲ್ಲಿದೆ. ಇದು ಪ್ರಾದೇಶಿಕವಾಗಿ ಸಮತೋಲಿತವಾಗಿದೆ ಮತ್ತು ಪುರುಷರಜನಸಂಖ್ಯಾ ಸೂಚ್ಯಂಕ ಎಂದು ಕರೆಯಲ್ಪಡುವುದನ್ನು ಆಧರಿಸಿದೆ. ಇ?? ಪ್ರಾದೇಶಿಕ ವಿತರಣೆಯ್ನು ಖಾತ್ರಿ ಪಡಿಸುತ್ತದೆ. ಆದರೆ ಯಾವುದೇ ನಂಬಿಕೆ ಅಥವಾ ಜಾತಿಗೆ ಯಾವುದೇ ಪಕ್ಷಪಾತವಿಲ್ಲ. ಇದು ಅಧಿಕಾರಿಗಳ ಕೇಡರಿನ ಅಸ್ತಿತ್ವದಲ್ಲಿದೆ. ಅಧಿಕಾರಿ ಮಟ್ಟದಲ್ಲಿ ಇಸಾಧಾರಣವಾಗಿ ಮುಕ್ತ ಸ್ಪರ್ಧೆಯಾಗಿದೆ ಮತ್ತು ಸಮರ್ಥರನ್ನು ಆಯ್ಕೆ ಮಾಡಲಾಗುತ್ತದೆ.
ಸ್ವತಂತ್ರ ಭಾರತದ ಇತಿಹಾಸವು, ಮುಸ್ಲಿಂ ಅಧಿಕಾರಿಗಳು ಅತ್ಯಂತ ಉನ್ನತ ಸ್ಥಾನಗಳನ್ನು ತಲುಪಿದ ಉದಾಹರಣೆಗಳಿಂದ ತುಂಬಿದೆ. ಭಾರತೀಯ ಸೇನೆಯು ಇಲ್ಲಿಯವರೆಗೆ ಒಂಭತ್ತು ಮುಸ್ಲಿಂ ಮೇಜರ್ ಜನರಲ್‌ಗಳನ್ನು ಹೊಂದಿದ್ದು, ವಾಯುಪಡೆಗೆ ಒಮ್ಮೆ ಮುಸ್ಲಿಂ ಏರ್ ಚೀಫ್ ಮಾರ್ಷರ್ಲರು ಆಜ್ಞೆ ಮಾಡಿದ್ದರು. ಭಾರತೀಯ ಮಿಲಿಟರಿ ಅಕಾq ಮಿಯು ಒಬ್ಬ ಮುಸ್ಲಿಂಕಮಾಂಡೆಂಟ್‌ರನ್ನು ಹೊಂದಿತ್ತು ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಇಬ್ಬರನ್ನು ಹೊಂದಿತ್ತು.
ಈ ಅಂಕಿ ಅಂಶಗಳು ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಮಾತ್ರ ಕಾಣುತ್ತವೆ.
ಭಾರತೀಯ ಮುಸ್ಲಿಮರು ಈ ಶ್ರೇಷ್ಠ ಮತ್ತು ವೃತ್ತಿಪರ ದಳಗಳ ಭಾಗವಾಗಿ ಮಾತೃಭೂಮಿಯ ಸೇವೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು.
ಭಾರತೀಯ ಸಶಸ್ತ್ರದ ಭಾರತದ ಮುಸ್ಲೀಮರ ವಿಷಯಕ್ಕೆ ಬಂದರೆ, ಬಹುಸಂಖ್ಯ,
ಸಹಿಷ್ಣುತೆ, ಏಕೀಕರಣ ಮತ್ತು ಬಹು ನಂಬಿಕೆ ಅಸ್ತಿತ್ವವನ್ನು ಉತ್ತೇಜಿಸಲು ಭಾರತೀಯ
ಸೇನೆಯು ರಾಷ್ಟ್ರೀಯ ಏಕೀಕರಣ ಸಂಸ್ಥೆ ಹೊಂದಿರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ಇಚ್ಚೆಯಂತೆ ಪ್ರಾರ್ಥಿಸಲು, ಉಪವಾಸ ಮಾಡಲು ಸಾಧ್ಯವಿಲ್ಲ ಎಂಬ ಭಯವು ತಪ್ಪು ತಿಳುವಳಿಕೆಯಾಗಿರುತ್ತದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್‌ರವರು, ಮುಸ್ಲಿಂ ಗೆ ನೇಡಿಯರ‍್ಸ್ ಉಪಘಟಕವನ್ನು ಸಾಮಾನ್ಯವಾಗಿ
ಯಾವಾಗಲು ಒಬ್ಬ ಮುಸ್ಲೀಮೇತರ ಕಮಾಂಡೆಂಟರೇ ಆಜ್ಞಾಪಿಸುತ್ತಾರೆಂದು ಬರೆದಿದ್ದಾರೆ. ಆ ಅಧಿಕಾರಿ ರಂಜಾನ್‌ನ ಎಲ್ಲಾ ೩೦ ಉಪವಾಸಗಳನ್ನು ಸೈನ್ಯದೊಂದಿಗೆ ಇಟ್ಟುಕೊಂಡು ಮತ್ತು ದಿನಕ್ಕೆ೫ ಬಾರಿ ಮಾಡುವ ಪ್ರಾರ್ಥನೆಗಳನ್ನು ನಡೆಸಿಕೊಡುತ್ತಾರೆ.
ಎಲ್ಲಿ೧೨೦ ಮುಸ್ಲೀಮರು ಇರುವರೋ ಅಲ್ಲಿ ಧಾರ್ಮಿಕ ಮಾರ್ಗದರ್ಶನಕ್ಕಾಗಿ ಧಾರ್ಮಿಕ ಶಿಕ್ಷಕರನ್ನು ನೇಮಿಸುವ ನಿಯಮವಿದೆ. ಮುಸ್ಲೀಮರ ಸೈನ್ಯದ ಉಪಘಟಕವು ಎಲ್ಲಿ ಇರುತ್ತದೆಯೋ ಅಲ್ಲಿ ದೇವಸ್ಥಾನ, ಚರ್ಚ್ ಅಥವಾ ಗುರುದ್ವಾರದಂತೆಯೇ ಮಸೀದಿ ಕೂಡ ಕಡ್ಡಾಯವಾಗಿರುತ್ತದೆ. ಅಖಿಲ ಭಾರತದ ಎಲ್ಲಾ ವರ್ಗದ ಘಟಕದಲ್ಲಿ ಮುಸ್ಲಿಮರು ಹಾಜರಿದ್ದಾರೆ, ನಿಜವಾದ ಭಾರತದ ಉತ್ಸಾಹದಲ್ಲಿ ಬಹುನಂಬಿಕೆಯ ಅಸ್ತಿತ್ವದ ಸದ್ಗುಣಗಳೊಂದಿಗೆ ನಿರಂತರವಾಗಿ ಬೋಧಿಸಲ್ಪಡುವ ಸರ್ವ್ ಧರ್ಮ್ ಸ್ಟೈಲ್ (ಒಂದೇ ಛಾವಣಿಯ ಅಡಿಯಲ್ಲಿ ಎಲ್ಲಾ ಧರ್ಮಗಳು) ಇರುತ್ತದೆ. ಇz ಲ್ಲವೂ ಸೈನಿಕರಿಗಾಗಿ ಮತ್ತು ಸೇನೆಯ ಜಾತ್ಯಾತೀತ ಮತ್ತು ಸಹಿಷ್ಣು ಸಂಸ್ಕೃತಿಯ ಪ್ರದರ್ಶನವಾಗಿದೆ.
ಭಾರತೀಯ ಸಶಸ್ತ್ರ ಸೇವಾ ಅಧಿಕಾರಿಗಳಿಗೆ ಒಂದೇ ಒಂದು ನಿಯಮವಿದೆ – ನಿಮ್ಮ
ಸ್ವಂತ ನಂಬಿಕೆಯನ್ನು ಅನುಸರಿಸಿ, ಆದರೆ ನೀವು ಆಜ್ಞಾಪಿಸುವ ಸೈನಿಕನ ನಂಬಿಕೆಯು
ಅಧಿಕಾರಿಯ ನಂಬಿಕೆಯಾಗಿರಬೇಕು. ಮುಸ್ಲಿಂ ಯುವಕರು ಎ ಡೆ ಅವಕಾಶಗಳನ್ನು
ಅಪೇಕ್ಷಿಸುತ್ತಾರೆ. ಆದರೆ ಭಾರತೀಯ ಸಶಸ್ತ್ರ ಪಡೆಗಳ ವಿವಿಧ ಕೇಡೆರ್‌ಗಳಿಗೆ ಬರಲು
ಹಿಂಜರಿಯುತ್ತಾರೆ. ಭಾರತದ ಸಾಮಾಜಿಕ ರಚನೆಯನ್ನು ಬಲಪಡಿಸುವ ಸಂಬಂಧದಲ್ಲಿ, ಸಶಸ್ತ್ರ ಪಡೆಗಳು ಅಪಾರ ಕೊಡುಗೆ ನೀಡಬಹುದು. ಆದ್ದರಿಂದ ಮುಸ್ಲಿಂ ಯುವಕರು ಅದರ ಭಾಗವಾಗಬೇಕು.