ಬಿಜೆಪಿಯಿಂದ ಇಂದಿನಿಂದ` ಭೀಮ ಹೆಜ್ಜೆ’ ರ‍್ಯಾಲಿ
ಕೆಂಧೂಳಿ
ಬೆಂಗಳೂರು,ಏ,೧೧- ಈಗ ಪ್ರತಿಭಟನೆಗಳ ಪರ್ವ, ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ತಿಭಟನೆ ಮಾಡಿದರೆ, ಕಾಂಗ್ರೆಸ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಈನಿಟ್ಟಿನಲ್ಲಿ ರಾಜ್ಯದಜನರಗಮನಸೆಳೆಯಲು ಬಿಜೆಪಿ ‘ಭೀಮ ಹೆಜ್ಜೆ ಎನ್ನುವ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಇಂದಿನಿಂದ(ಶುಕ್ರವಾರ ಏ೧೧) ಆರಂಭವಾಗಲಿರುವ ಈ ಬೃಹತ್ ರ‍್ಯಾಲಿ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಅರಂಭವಾಗಲಿದೆ. ಸಾವಿರಾರು ದ್ವಿಚಕ್ರವಾಹನಗಳು ಈ ವೇಳೆ ಭಾಗವಹಿಸಲಿವೆ.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಿಐಸಿ ಎಕ್ಸಿಬಿಷನ್ ಸೆಂಟರ್ ಮುಂದಿನ ಮೈದಾನದಿಂದ ರ‍್ಯಾಲಿ ಹೊರಡುತ್ತದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ರ‍್ಯಾಲಿ ತಲುಪಲಿದೆ. ನಿಪ್ಪಾಣಿಗೆ ತೆರಳುವ ಸಂದರ್ಭದಲ್ಲಿ ಡಾ.ಅಂಬೇಡರ್ ಅವರ ಪುತ್ಥಳಿ ಇರುವ ತಾಲ್ಲೂಕು ಕೇಂದ್ರ ಮತ್ತು ಎಲ್ಲ ಗ್ರಾಮಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ರ‍್ಯಾಲಿಯನ್ನು ಆರಂಭಿಸಲಿದೆ.
ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ರ‍್ಯಾಲಿ ರಾಜ್ಯದ ಜನರನ್ನು ಗಮನಸೆಳೆಯುವುದು ಇದರ ಉದ್ದೇಶವಾಗಿದೆ. ಅಂಬೇಡ್ಕರ್ ಬಗ್ಗೆ ಅಭಿಮಾನವನ್ನು ಪ್ರದರ್ಶಿಸುವ ಮೂಲಕ ಹಿಂದುಳಿದ ಜನಗಳನ್ನು ಆಕರ್ಷಿಸುವುದು ಇದರ ಉದ್ದೇಶವಾಗಿದೆ ಎನ್ನಲಾಗಿದೆ.