ಬೆಂಗಳೂರು ,ಆ. 4: ನೂತನ ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದಾರು.
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ವಿಸ್ತರಣೆ ಬಳಿಕ ಮೊದಲ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಕೋವಿಡ್ ನಿಯಂತ್ರಣ ಮತ್ತು ನೆರೆ ವೀಕ್ಷಣೆ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಅನಾವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ, ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಕಾರ್ಯಗಳನ್ನು ನೀಡುವ ಸಂಬಂಧ ಸೂಚನೆ ನೀಡಲಾಗಿದ.
ಕೋವಿಡ್ ನಿಯಂತ್ರಣ ಸಂಬಂಧ ಟಾಸ್ಕ್ ಪೋರ್ಸ್ ಪುನಾರಚನೆ ಬಗ್ಗೆ ತೀರ್ಮಾನ ಮಾಡಲಾಗಿದೆ. ಸರ್ಕಾರ ಬದಲಾವಣೆ ಯಿಂದ ಅಷ್ಟೇ ಟಾಸ್ಕ್ ಫೋರ್ಸ್ ಪುನಾರಚನೆ ಗೆ ನಿರ್ಧಾರ ಮಾಡಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿರುವ ಹಿನ್ನಲೆ ಕೂಡಲೇ ಜಿಲ್ಲೆಗೆ ಹೋಗಿ ಪರಿಸ್ಥಿತಿ ಅವಲೋಕಿಸುವ ಕುರಿತು ತಿಳಿಸಲಾಗಿದೆ. ಹಾಗೇ ಪ್ರವಾಹ ಎಲ್ಲ ವೀಕ್ಷಣೆ ಮಾಡಿ ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು. ನೆರೆ ಹಾನಿ ಕುರಿತು ವರದಿ ಸಲ್ಲಿಕೆಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಲಾಗುವುದು ಎಂದರು.
ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ
ಇನ್ನು ಇದೇ ವೇಳೆ ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಹಂಚಿಕೆ ಬಗ್ಗೆ ನಿರ್ಧಾರ ಆಗಲಿದೆ. ಖಾತೆ ಹಂಚಿಕೆ ಹಿಂದೆ ವಿಳಂಬ ಆಗಿರುವುದು ಗೊತ್ತಿದೆ. ಒಂದು ತಿಂಗಳು ಒಂದು ವಾರ ತಡವಾಗಿದೆ. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ. ಆದಷ್ಟು ಬೇಗ ಖಾತೆ ಹಂಚಿಕೆ ಆಗಲಿದೆ. ಖಾತೆ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನ ಮಾಡುವುದಿಲ್ಲ. ಅದನ್ನು ನಾನೇ ನಿರ್ಧಾರ ಮಾಡುತ್ತೇನೆ. ಇದುವರೆಗೂ ಯಾವುದೇ ಖಾತೆ ಬೇಕು ಎಂದು ಸಚಿವರು ಕೇಳಿಲ್ಲ. ಅದೇ ಖಾತೆಯನ್ನು ಮುಂದುವರೆಸಿ ಎಂದು ಕೂಡ ಯಾರು ಕೇಳಿಲ್ಲ. ನೀವು ಯಾವುದೇ ನಿರ್ಧಾರ ಮಾಡಿದ್ದರೂ ಅದಕ್ಕೆ ನಾವು ಅದಕ್ಕೆ ಬದ್ದರಾಗಿರುತ್ತೇವೆ ಎಂದಿದ್ದಾರೆ