ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ‌ಘೋಷಣೆ

Share

ಬೆಂಗಳೂರು,ನ,16:  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ  ಇಂದು ನಡದ ಪನೀತ್ ನಮನ ಕಾರ್ಯಕ್ರರಮದಲ್ಲಿ ಘೋಷಿಸಿದರು

ಮುಂದುವರೆದು ಮಾತನಾಡಿದ ಬೊಮ್ಮಾಯಿ   ಹಾಗೆಯೇ ಡಾ.ರಾಜ್ ಕುಮಾರ್ ಸ್ಮಾರಕದಂತೆಯೇ ಅಪ್ಪು ಸ್ಮಾರಕ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

 

ನಾನು ಬಾಲ್ಯದಿಂದ ಪುನೀತ್ ರಾಜ್ ಕುಮಾರ್  ನೋಡಿದ್ದೇನೆ. ಅವರು ನಮಗೆ ಬಹಳ ಆತ್ಮೀಯರಾಗಿದ್ದರು.  ಬಾಲ ನಟನಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು.  ಇಂತಹ ಕಾರ್ಯಕ್ರಮ ಮಾಡುತ್ತೇವೆ ಎಂದುಕೊಂಡಿರಲಿಲ್ಲ.  ರಾಜ್ ಕುಮಾರ್ ಅವರ ವಿನಯ ಅಪ್ಪುನಲ್ಲಿ ಕಾಣುತ್ತಿದ್ದವು.   ಅಪ್ಪು ಪರೋಪಕಾರಿ ಕೆಲಸ ಯಾರಿಗೂ ತಿಳಿದಿಲ್ಲ.  ಪುನೀತ್ ಸಹಾಯ ಮಾಡಿದರೇ ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ. ಎಂದು ಸಿಎಂ ಬೊಮ್ಮಾಯಿ ಸ್ಮರಿಸಿದರು.

Girl in a jacket
error: Content is protected !!