ನಮ್ಮ ಕೃಷಿ ನೀತಿಯಲ್ಲಿ ಲೋಪದೋಷಗಳಿವೆ:ಬಸವರಾಜ ಬೊಮ್ಮಾಯಿ

Share

ಹಾವೇರಿ:(ರಾಣೆಬೆನ್ನೂರು),ಜೂ,28-ನಮ್ಮ ದೇಶದ ಎಲ್ಲ ಜನರಿಗೂ ಆಹಾರ ದೊರೆಯುತ್ತಿದೆ. ಆದರೆ, ಆಹಾರ ಬೆಳೆಯುವ ರೈತರ ಪರಿಸ್ಥಿತಿ ಸೋಚನೀಯವಾಗಿದೆ. ಇದು ವಿಪರ್ಯಾಸ. ನಮ್ಮ ಕೃಷಿ ನೀತಿಯಲ್ಲಿ ಎಲ್ಲೋ ಲೋಪದೋಷಗಳಿವೆ. ರೈತರ ಪರವಾಗಿರುವ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹನುಮನಮಟ್ಟಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕೃಷಿ ಮಹಾವಿದ್ಯಾಲಯ ಐ.ಸಿ.ಎ ಆರ್ ಕೃಷಿ ವಿಜ್ಞಾನ ಕೇಂದ್ರಕ್ಕೆ, ಭೇಟಿ ನೀಡಿ, ಮಹಾವಿದ್ಯಾಲಯದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈ ರಾಜ್ಯದ ಕೃಷಿಯ ಭವಿಷ್ಯವನ್ನು ಬರೆಯುವ ವಿಜ್ಞಾನಿಗಳು ಇಲ್ಲಿ ಸೇರಿದ್ದೀರಿ. ತಮ್ಮ ಜೀವನದಲ್ಲಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದ್ದರೂ ಕೂಡ ತಾವು ಕೃಷಿಯನ್ನು ಆಯ್ಕೆ ಮಾಡಿದ್ದೀರಿ. ಎಂಜನೀಯರಿಂಗ್, ಕಾಮರ್ಸ್ ಮೆಡಿಕಲ್ ಕ್ಷೇತ್ರ ಇದ್ದರೂ, ನಮ್ಮ ಮೂಲ ಕಾಯಕ ಕೃಷಿ ನಮ್ಮ ದೇಶದ ಇತಿಹಾಸ ಕೃಷಿ, ಭವಿಷ್ಯವೂ ಕೃಷಿ. ನೀವು ಕೃಷಿಯ ವಿದ್ಯಾರ್ಥಿಗಳಾಗಿ ದೇಶದ ಭವಿಷ್ಯ ಕೃಷಿ ಅಂತ ನಿರೂಪಿಸಿ ತೋರಿಸಬೇಕಾಗಿದೆ. ಅದು ಯಾವಾಗ ಆಗುತ್ತದೆ ಎಂದರೆ ಕೃಷಿ ಕೂಡ ಲಾಭದಾಯಕವಾದಾಗ ಮಾತ್ರ ಸಾಧ್ಯವಾಗಿದೆ. ಕೃಷಿ ಕೇವಲ ಲಾಭವಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚು ಈ ದೇಶದ ನಾಗರಿಕರಿಗೆ ಆಹಾರ ಒದಗಿಸುವ ಜವಾಬ್ದಾರಿ ಇದೆ. ಬೇರೆ ಯಾವುದೇ ಕಂಪನಿ, ಸಂಸ್ಥೆಗೆ ಈ ಜವಾಬ್ದಾರಿ ಇಲ್ಲ. ನಮ್ಮ ದೇಶ ಸ್ವಾತಂತ್ರ್ಯ ಆದಾಗ 33 ಕೋಟಿ ಜನಸಂಖ್ಯೆ ಇತ್ತು ಈಗ 130 ಕೋಟಿಯಾಗಿದೆ. ಆಗ 33 ಕೋಟಿ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗಿರಲಿಲ್ಲ. ವಿದೇಶಗಳಿಂದ ಆಹಾರ ಪದಾರ್ಥ ಆಮದು ಮಾಡಿಕೊಳ್ಳುತ್ತಿದ್ದೇವು. ಆಹಾರದ ಸುರಕತೆ ಒಂದು ದೇಶಕ್ಕೆ ಇಲ್ಲ ಅಂದರೆ ಆ ದೇಶ ಸ್ಥಾಭಿಮಾನಿ ದೇಶ ಆಗುವುದಿಲ್ಲ. ಯಾವ ದೇಶಕ್ಕೆ ಸ್ವಾಭಿಮಾನ ಇರುವುದಿಲ್ಲವೋ ಆ ದೇಶಕ್ಕೆ ಅಸ್ಥಿತ್ವ ಕೂಡ ಇರುವುದಿಲ್ಲಿ. ಈ ದೇಶದ ಸ್ಥಾಭಿಮಾನ, ಸ್ವಾವಲಂಬನೆ, ಹಸಿರು ಕಾಂತಿ ಮಾಡಿರುವುದು ರೈತ. ಈಗ 133 ಕೋಟಿ ಜನರಿಗೆ ಆಹಾರ ಸಿಗುತ್ತಿದೆ. ಆದರೆ, ಆಹಾರ ಬೆಳೆಯುವ ರೈತರ ಪರಿಸ್ಥಿತಿ ಸೋಚನೀಯವಾಗಿದೆ. ಇದು ವಿಪರ್ಯಾಸ. ನಮ್ಮ ಕೃಷಿ ನೀತಿಯಲ್ಲಿ ಎಲ್ಲೋ ಲೋಪದೋಷಗಳಿವೆ ಎನ್ನುವುದು ಬಹಳ ಸಪ್ನ ಎಂದು ಹೇಳಿದರು.

ಮಳೆ, ಗಾಳಿ, ಬಿಸಲು ಎಲ್ಲವೂ ನಿಸರ್ಗದ ಕಿಯೆ ಒಂದು ಕಡೆಯಾದರೆ. ಇನ್ನೊಂದು ಕಡೆ ನಾವು ಸೃಷ್ಟಿ ಮಾಡಿರುವ ಮಾರುಕಟ್ಟೆಗಳು ರೈತನಿಗೆ ಸಹಕಾರಿಯಾಗಬೇಕು. ಆದರೆ, ಅವು ಆಗಿಲ್ಲ. ರೈತನ ಅನುಕೂಲಕ್ಕಾಗಿ ಎಪಿಎಂಸಿ ಮಾಡಿದ್ದೇವೆ. ಎಲ್ಲ ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿವೆ. ಹೀಗಾಗಿ ರೈತರ ಪರವಾಗಿರುವ ಮಾರುಕಟ್ಟೆ ಸೃಷ್ಟಿಯಾಗಬೇಕು. ಏಕೆಂದರೆ ರೈತರು ಬಹಳ ಮುಗ್ದರಿದ್ದಾರೆ. ಸುಗ್ಗಿ ಮಾಡಿದರೆ ಹಂಗಾಮು ಮುಗಿಯಿತು ಎಂದುಕೊಂಡಿದ್ದಾರೆ. ನಿಜವಾದ ಕೆಲಸ ಸುಗ್ಗಿಯಾದ ನಂತರ ಶುರುವಾಗುತ್ತದೆ. ಬೆಳೆಯನ್ನು ಸುರಕ್ಷಿತವಾಗಿ ಇಡುವುದು, ಸೂಕ್ತ ಮಾರುಕಟ್ಟೆ ಹುಡುಕುವುದು, ಸೂಕ್ತ ಬೆಲೆ ಪಡೆಯುವುದು ದೊಡ್ಡ ಚೆನ್ ಇದೆ ಎಂದರು.

ಕೃಷಿ ವಿಜ್ಞಾನಿಗಳು ಮಾರ್ಕೆಟಿಂಗ್, ಮೈಕೊ ಎಕನಾಮಿಕ್ಸ್ ಬಗ್ಗೆ ತಿಳಿದುಕೊಳ್ಳಬೇಕು. ಅದು ಬಹಳ ಮಹತ್ವದ ವಿಷಯ. ಪಾಥಮಿಕ ವಲಯದಲ್ಲಿ ಶೇ 1 ರಷ್ಟು ಅಭಿವೃದ್ಧಿಯಾದರೆ ಶೇ 4% ಉತ್ಪಾದನಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತದೆ. ಸೇವಾ ವಲಯದಲ್ಲಿ ಶೇ 10 ರಷ್ಟು ಅಭಿವೃದ್ಧಿಯಾಗುತ್ತದೆ. ಯಾವುದೇ ಕೃಷಿ ಆಧಾರಿತ ದೇಶದಲ್ಲಿ ಕೃಷಿ ಕ್ಷೇತ್ರ ಅತ್ಯಂತ ಬಹಳ ಮುಖ್ಯವಾಗಿದೆ. ನಾವು ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಕೃಷಿ ಮಾಡುತ್ತಿರುವ ರೈತನ ಬದುಕನ್ನು ಗಟ್ಟಿ ಮಾಡಬೇಕು. ಆತನ ಆರ್ಥಿಕತೆ ಸುಧಾರಿಸಬೇಕು ಎಂದು ಚರ್ಚೆ ಮಾಡುತ್ತೇವೆ. ಅದಕ್ಕೆ ನಾನು ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಮಾಡಿದ್ದೆ. ಈಗ ಅದನ್ನು ಸ್ಥಗಿತಗೊಳಿಸಿದ್ದಾರೆ. ಬಹಳಷ್ಟು ರೈತರ ಮಕ್ಕಳು ತಮ್ಮ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಅದನ್ನು ತಪ್ಪಿಸಲು ವಿದ್ಯಾನಿಧಿ ಯೋಜನೆ ಮಾಡಿದ್ದೆ. ಪ್ರತಿ ವರ್ಷ 11 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದ್ದೆ ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ , ಮಹಾವಿದ್ಯಾಲಯದ ಡೀನ್ ಡಾ.ಎ.ಜಿ ಕೊಪ್ಪದ, ಮಾಜಿ ಡೀನ್ ಡಾ.ಜೆ.ಎಸ್ ಹಿಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ವೀರನಗೌಡ ಪೋಲಿಸಗೌಡ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Girl in a jacket
error: Content is protected !!