ನವದೆಹಲಿ, ಸೆ,04- ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ಎನ್ಐಎ ತನಿಗೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸ್ಮಾಮೀಜೊಗಳ ನಿಯೋಗ ಮನವಿ ಮಾಡಿದೆ.
ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಗೆ ಭೇಟಿ ನೀಡಿದ ವಚನಾನಂದ ಸ್ವಾಮೀಜಿಗಳ ನಿಯೋಗ ಧರ್ಮಸ್ಥಳ ಪ್ರಕರಣ ಕುರಿತು ಚರ್ಚೆ ನಡೆಸಿದರು. ಸ್ವಾಮೀಜಿಗಳಿಂದ ಅಮಿತ್ ಶಾ ಅವರು ಬುರುಡೆ ಪ್ರಕರಣ ಕುರಿತು ಮಾಹಿತಿ ಪಡೆದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಬಗ್ಗೆ ಆಕ್ಷೇಪವಿಲ್ಲ. ಆದರೆ ಧರ್ಮಸ್ಥಳದ ವಿರುದ್ದ ಆಗುತ್ತಿರುವ ಷಡ್ಯಂತ್ರ ಹೊರಗೆ ಬರಬೇಕು ಎಂಬುದು ಆಗ್ರಹ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ. ನಿಯೋಗದಲ್ಲಿ ರಾಜಶೇಖರಾನಂ ಶ್ರೀ ಸಿದ್ದರಾಮೇಶ್ವರ ಶ್ರೀಗಳು ಮೊದಲಾದವರು ಇದ್ದರು.