21 ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಸಿಎಂ

Share

ಆಲಮಟ್ಟಿ; ಆ.೨೧ರಂದು ತುಂಬಿದ ಕೃಷ್ಣೆಯ ಜಲನಿ
ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲಮಟ್ಟಿಜಲಾಶಯಕ್ಕೆ ಗಂಗಾಪೂಜೆ, ಬಾಗಿನ ಅರ್ಪಿಸಿದ ನಂತರ ಪ್ರವಾಹಮತ್ತು ಕೋವಿಡ್ ಕುರಿತು ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ
ಪಿ.ಸುನಿಲಕುಮಾರ ಹೇಳಿದರು.
ಶುಕ್ರವಾರ ಆಲಮಟ್ಟಿ ಜಲಾಶಯದ ಹಿಂಭಾಗದ ಬಾಗೀನ ಅರ್ಪಿಸುವಸ್ಥಳ ಹಾಗೂ ಹೆಲಿಪ್ಯಾಡಗೆ ಭೇಟಿ ನೀಡಿ ಅವರು ಮಾತನಾಡಿದರು.

 


ಹೆಲಿಕಾಪ್ಟರ್ ಮೂಲಕ ಆಗಮಿಸುವ ಮುಖ್ಯಮಂತ್ರಿಯವರು ಹೆಲಿಪ್ಯಾಡ್‌ನಿಂದ ನೇರವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು,
ಅವರೊಂದಿಗೆ ಸಚಿವರುಗಳು ಇರಲಿದ್ದು, ನಂತರ ಜಲಾಶಯಕ್ಕೆತೆರಳಿ ಬಾಗಿನ ಅರ್ಪಿಸುವರು. ಅವಳಿ ಜಿಲ್ಲೆಯ ಶಾಸಕರುಗಳು,ಸಂಸದರುಗಳು ನೇರವಾಗಿ ಬಾಗೀನ ಅರ್ಪಿಸುವ ಸ್ಥಳಕ್ಕೆ ಆಗಮಿಸಿ
ಮುಖ್ಯಮಂತ್ರಿಯವರೊಂದಿಗೆ ಬಾಗೀನ ಅರ್ಪಿಸುವರು.
ನಂತರ ಕೆಬಿಜೆನ್ನೆಲ್ ಎಂ.ಡಿ ಕಚೇರಿ ಸಭಾಂಗಣದಲ್ಲಿ ಅವಳಿ ಜಿಲ್ಲೆಯಜಿಲ್ಲಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಹಹಾಗೂ ಕೋವಿಡ್ ಕುರಿತು ಸಭೆ ನಡೆಸುವರು. ಸಭೆ ನಂತರ
ಎಂ.ಡಿ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಿಂದಅಹವಾಲು ಸ್ವೀಕರಿಸಲಿದ್ದಾರೆ ಎಂದರು.
ಎಸ್ಪಿ ಆನಂದಕುಮಾರ ಎಚ್.ಡಿ. ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿಬೃಹತ್ ಸಮಾರಂಭದ ಬದಲು ಸರಳವಾಗಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು
ಪಾಲಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ
ಕಲ್ಪಿಸಲಾಗುತ್ತಿದ್ದು ನಿಗದಿತ ಸ್ಥಳಗಳಿಗೆ ಪೊಲೀಸ್
ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆಎಂದರು.
ಪತ್ರಕರ್ತರಿಂದಲೂ ಸಹಕಾರ ಅಗತ್ಯವಿದೆ. ಬಾಗಿನ ಅರ್ಪಣೆಸ್ಥಳದಲ್ಲಿ ಸಮನ್ವಯತೆಯಿಂದ
ಕೆಲವರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಗೋವಿಂದರೆಡ್ಡಿ, ಕೆಬಿಜೆನ್ನೆಲ್ ಮುಖ್ಯ ಅಭಿಯಂತರಎಚ್.ಸುರೇಶ, ಅಧೀಕ್ಷಕ
ಅಭಿಯಂತರ ಡಿ.ಬಸವರಾಜ, ಎಎಸ್‌ಪಿ ಡಾ.ರಾಮ ಅರಸಿದ್ಧಿ, ಡಿವೈಎಸ್‌ಪಿಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ ಜುಟ್ಟಲ್
ಸೇರಿದಂತೆ ಇತರರಿದ್ದರು.
ಬಿಗಿಭದ್ರತೆ: ಉತ್ತರವಲಯ ಐಜಿಪಿ ಎನ್.ಸತೀಶಕುಮಾರ
ನೇತೃತ್ವದಲ್ಲಿ ಓರ್ವ ಎಸ್ಪಿ, ಎಎಸ್ಪಿ, ೫ಜನ ಡಿವೈಎಸ್ಪಿ, ೧೧ಸಿಪಿಐ, ೨೯ಪಿಎಸೈ,
೩೩ಎಎಸೈ, ೭೩ಮುಖ್ಯಪೇದೆ, ೧೭೭ಪೇದೆ, ೨೬ಮಹಿಳಾ ಪೇದೆ, ೩ಐಆರ್‌ಬಿ
ಬಟಾಲಿಯನ್ ತುಕಡಿ, ೨ಡಿಎಆರ್ ತುಕಡಿ ಸೇರಿದಂತೆ ಅಗತ್ಯ ಬಗ್ಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಆರೋಗ್ಯ ಇಲಾಖೆಯಿಂದ ಸುಮಾರು ೨೦ಜನರನ್ನು ಪರೀಕ್ಷೆಗೊಳಪಡಿಸಿದರು. ಆದರೆ ಯಾವುದೇ ಪಾಜಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದರು.

Girl in a jacket
error: Content is protected !!