*ವರದಿ :-ಆಂಜನೇಯ ನಾಯಕನಹಟ್ಟಿ
ಜಗಳೂರು,ಆ,-ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹುಚ್ಚವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ಶೀಘ್ರ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿಮಕ್ಕಳು ಶಾಲೆಯ ಮುಂಭಾಗದಲ್ಲಿ ಎಸ್ ಡಿ ಎಂ ಸಿ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.
ಹುಚ್ಚನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013 ರಿಂದಲೂ ಮೂರು ಶಿಕ್ಷಕರು ಮಾತ್ರ ಇದ್ದು.
ಸದರಿ ದಿನಾಂಕದ ಶಾಲಾ ಹಾಜರಾತಿಯ ಪ್ರಕಾರ 65 ಮಕ್ಕಳಿದ್ದು ಒಂದರಿಂದ ಎಂಟನೇ ತರಗತಿವರೆಗೆ ತರಗತಿಗಳು ಇರುತ್ತವೆ ಈ ತರಗತಿಗಳಲ್ಲಿ ಕೇವಲ ಮೂರು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸಕ್ಕೆ ಬೋಧನೆಗೆ ತೊಂದರೆ ಉಂಟಾಗಿದೆ,ಮೂರು ಶಿಕ್ಷಕರಲ್ಲಿ ಸಹ ಶಿಕ್ಷಕರೇ ಹೆಡ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಶಾಲೆಯನ್ನು ಇಲ್ಲಿಯವರೆಗೂ ನಡೆಸಿಕೊಂಡು ಬರುತ್ತಿದ್ದಾರೆ ದುರಂತವೆಂದರೆ ಒಂದರಿಂದ ಎಂಟನೇ ತರಗತಿವರೆಗೂ ಮೂರು ಶಿಕ್ಷಕರಿದ್ದು ಮಕ್ಕಳಿಗೆ ಸರಿಯಾದ ತರಗತಿಗಳನ್ನು ತೆಗೆದುಕೊಳ್ಳಲು ಪಠ್ಯಕ್ರಮಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊಟ್ರೇಶ್ ರವರು ನಮ್ಮ ಶಾಲೆಯಲ್ಲಿ ಈಗಾಗಲೇ 65 ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ನಮಗೆ ಕೇವಲ ಮೂರು ಶಿಕ್ಷಕರು ಮಾತ್ರ ಇದ್ದಾರೆ. ನಮ್ಮಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ತರಗತಿಗಳಿದ್ದು 2013 ರಿಂದ ಮೂರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ನಮ್ಮ ಮಕ್ಕಳಿಗೆ ಕೊರತೆಯಾಗುತ್ತಿದೆ ಸಹ ಶಿಕ್ಷಕರು ಹೆಡ್ ಮಾಸ್ಟರ್ ಕಾರ್ಯವನ್ನು ನಿಭಾಯಿಸುತ್ತಿದ್ದು ಇಲ್ಲಿಯವರೆಗೂ ಶಾಲೆ ನಡೆದುಕೊಂಡು ಬರುತ್ತಿದೆ ನಮ್ಮ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಠ್ಯಕ್ರಮಗಳ ಪೂರೈಕೆಗೆ ಒಂದು ಇಲ್ಲ ಎರಡು ಶಿಕ್ಷಕರನ್ನು ಶಿಕ್ಷಣಾಧಿಕಾರಿಗಳು ತಕ್ಷಣವೇ ನೇಮಕ ಮಾಡಿ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಈಗಾಗಲೇ ಶಿಕ್ಷಣಾಧಿಕಾರಿಗಳ ತಂಡದಿಂದ ನಮಗೆ ಇನ್ನೂ ಒಂದು ವಾರದೊಳಗೆ ಶಿಕ್ಷಕರ ನೇಮಕವಾಗಲಿ ಅಥವಾ ಅತಿಥಿ ಶಿಕ್ಷಕರ ನೇಮಕವಾಗಲಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರು ಎಸ್ ಟಿ ಎಂ ಸಿ ಅಧ್ಯಕ್ಷರಾದ ಕೊಟ್ರೇಶ್ ಗ್ರಾಮಸ್ಥರಾದ ಶರೀಫ್ ಮಲ್ಲಿಕ್ ಎಲ್ಲಮ್ಮ ಮಂಜುಳಾ ಮುಮ್ತಾಜ್ ಶಾಲಾ ಮಕ್ಕಳು ಗ್ರಾಮಸ್ಥರು ಪೋಷಕರು ಭಾಗಿಯಾಗಿದ್ದರು