ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲ-ನಾಗರಾಜ ಗೌಡ ಆರೋಪ

Share

ಶಿಕಾರಿಪುರ,ಆ,೦೮:ಇಲ್ಲಿನ ಪುರಸಭೆಯಲ್ಲಿ ಸಂಪೂರ್ಣ ಬಹುಮತ ವಿಲ್ಲದೇ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದು ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲ ವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಆರೋಪಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಬ್ಬಂದಿಗಳ ಕೊರತೆ ಇದೆ,ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಅವರದೇ ಸರ್ಕಾರ ಅವರೇ ಮುಖ್ಯಮಂತ್ರಿ ಶಾಸಕರು ಸಂಸದರು ಅವರ ಪಕ್ಷದವರೆ ಇದ್ದರೂ ಸಾರ್ವಜನಿಕ ರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲದೆ ಕೇವಲ ಅವರ ಪಕ್ಷದ ಕಾರ್ಯಕ್ರಮದಲ್ಲಿ ಬಾಗಿಯಾಗು ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪುರಸಭೆಗೆ ಬಂದವರು ಹಿಡಿ ಶಾಪ ಹಾಕುವುದನ್ನು ನೋಡುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದಲ್ಲಿ ಎಂಟರಿಂದ ಒಂಬತ್ತು ಸಾವಿರ ಕಟ್ಟಡಗಳು ಇದ್ದು ಅದರಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಕಟ್ಟಡಗಳು ಹಾಗೂ ನಿವೇಶನಗಳು ಈ ಸ್ವತ್ತು ಸಿಗದೆ ಮನೆ ನಿರ್ಮಾಣ ಹಾಗೂ ದುರಸ್ತಿ ಕೆಲಸಗಳು ಪರವಾನಿಗೆ ಸಿಗದೆ ಬ್ಯಾಂಕ್ ಗಳಲ್ಲಿ ಸಾಲ ಸಿಗದೆ ಜನ ಸಾಮಾನ್ಯರು ತೊಂದರೆ ಗೆ ಒಳಗಾಗಿದ್ದಾರೆ ಎಂದು ದೂರಿದರು.
ಹಲವಾರು ಬಾರಿ ಸಂಸದ ಶಾಸಕರ ಗಮನಕ್ಕೆ ತಂದರೂ ಯಾವ ಪ್ರಯೋಜನ ವಾಗಲಿಲ್ಲ .ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ನವರ ಅದ್ಯಕ್ಷ್ಟೆಯಲ್ಲಿ ಕಮಿಟಿ ರಚನೆ ಮಾಡಿದರೂ ಪ್ರಯೋಜನವಾಗಲಿಲ್ಲ ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ವಿದ್ದರೂ ಜನರ ಬಗ್ಗೆ ಇಷ್ಟ್ಟು ನಿರ್ಲಕ್ಷ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.ಜನಸಾಮಾನ್ಯರಿಗೆ ಈ ಸ್ವತ್ತು ಹಾಗೂ ಅಕ್ರಮ ಸಕ್ರಮ ಸೌಲಬ್ಯಾ ವಂಚನೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾ ನಾಯಕ್ . ಶಿವು ಹುಲ್ಮಾ ರ.ಇತರರು ಉಪಸ್ಥಿತರಿದ್ದರು.

Girl in a jacket
error: Content is protected !!