ವಿವಿಧತೆಯಲ್ಲಿ ಏಕತೆಯೇ ನಿಜವಾದ ಗಣರಾಜ್ಯ-ಇಮ್ಮಡಿ ಸಿದ್ದರಾಮೇಶ್ವರ

Share

 

ವಿವಿಧತೆಯಲ್ಲಿ ಏಕತೆಯೇ ನಿಜವಾದ ಗಣರಾಜ್ಯ-ಇಮ್ಮಡಿ ಸಿದ್ದರಾಮೇಶ್ವರ

by ಕೆಂಧೂಳಿ

ಚಿತ್ರದುರ್ಗ, ಜ,27-ವಿವಿಧತೆಯಲ್ಲಿ ಏಕತೆ ಎನ್ನುವ ವಾಕ್ಯ ಬದುಕಿನ ತಾತ್ವಿಕತೆಯೂ ಆಗಬೇಕು. ಸಂಸ್ಕೃತಿ, ಸಂಪ್ರದಾಯ, ಭಾಷೆ, ಎಲ್ಲವೂ ವಿಭಿನ್ನವಾಗಿದ್ದಾಗಲೂ ಅದರಲ್ಲಿಯೇ ಒಗ್ಗಟ್ಟು ತರುವುದಿದೆಯೆಲ್ಲ ಅದೇ ನಿಜವಾದ ಗಣರಾಜ್ಯ ಎಂದು ಭಾವಿಸುತ್ತೇವೆ ಎಂದು ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಎಸ್ ಜೆ ಎಸ್ ಸಮೂಹ ಸಂಸ್ಥೆಗಳು ಏರ್ಪಡಿಸಿದ ಗಣರಾಜ್ಯೋತ್ಸವದ ಧ್ವಜಾರೋಹ ನೇರವೇರಿಸಿ ಮಾತನಾಡಿದ ಅವರು ಅಂಬೇಡ್ಕರ ನೀಡಿದ ಭಾರತದ ಸಂವಿಧಾನ ಕೇವಲ ದಾಖಲೆಗಳ ಹೊತ್ತಗೆ ಅಲ್ಲ. ಅದು ಜನರ ಜೀವನದ ಚಲನಶಕ್ತಿ. ಅದೊಂದು ಚೇತನ, ಎಲ್ಲಾ ಕಾಲಗಳಲ್ಲಿಯೂ ಆತ್ಮಚೇತನವಾಗಿ ಇರಲಿದೆ. ಭಾರತದಂತಹ ಬಹು ಆಯಾಮಗಳ ಸಮಾಜದಲ್ಲಿರುವ ಸಾಮಾನ್ಯ ಲಕ್ಷಣವೆಂದರೆ ಜಾತ್ಯತೀತತೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಪ್ರಜಾತಂತ್ರ ಕಟ್ಟಡದ ಒಂದು ಆಧಾರಸ್ತಂಭ. ಅದು ನಮ್ಮ ಸಹಜೀವನವನ್ನು ಒಗ್ಗೂಡಿಸುವ ಶಕ್ತಿ. ಪ್ರಜಾಪ್ರಭುತ್ವವು ಜೀವಂತವಾಗಿದ್ದರೆ ಅದರ ಫಲವನ್ನು ಅನುಭವಿಸುವುದು ನಮ್ಮೆಲ್ಲರಿಗೂ ಖಾತ್ರಿಯಾಗುತ್ತದೆ. ಪ್ರಜಾಪ್ರಭುತ್ವವೇನಾದರೂ ಸತ್ತರೆ ನಮ್ಮೆಲ್ಲರ ಸರ್ವನಾಶ ಖಂಡಿತ. ಸಂವಿಧಾನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆಗೆ ಮಾರ್ಗದರ್ಶನ ನೀಡುವುದಲ್ಲದೆ, ನಾಗರಿಕರ ಹಕ್ಕು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸಹ ನಿಗದಿಪಡಿಸುತ್ತದೆ. ಸಂವಿಧಾನದ ಈ ಆಶಯಗಳನ್ನು ಈಡೇರಿಸುವುದು ಒಂದು ಪ್ರಜಾಸತ್ತಾತ್ಮಕ ಸರಕಾರದ ಆದ್ಯ ಕರ್ತವ್ಯವಾಗಿದೆ ಹೇಳಿದರು.

ರಾಮಕೃಷ್ಣ ಪ್ರೌಢಶಾಲೆ, ಸಿದ್ಧರಾಮೇಶ್ವರ ಪ್ರೌಢಶಾಲೆ, ಶಾರದ ಬಾಲಕಿಯರ ಪ್ರೌಢಶಾಲೆ, ಎಸ್ ಜೆ ಎಸ್ ಆಂಗ್ಲ ಮಾದ್ಯಮ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.

Girl in a jacket
error: Content is protected !!