ಯುವಕನಿಂದ ದಾಳಿಗೊಳಗಾಗಿದ್ದ ನೇತ್ರಾವತಿ ಚಿಕಿತ್ಸೆಗೆ ಇಮ್ಮಡಿ ಶ್ರೀಗಳಿಂದ 1ಲಕ್ಷ ದನ ಸಹಾಯ

Share

ಯುವಕನಿಂದ ದಾಳಿಗೊಳಗಾಗಿದ್ದ ನೇತ್ರಾವತಿ ಚಿಕಿತ್ಸೆಗೆ ಇಮ್ಮಡಿ ಶ್ರೀಗಳಿಂದ 1ಲಕ್ಷ ದನ ಸಹಾಯ

 by-ಕೆಂಧೂಳಿ

ಚಿತ್ರದುರ್ಗ,ಫೆ,27- ಯುವಕನೊಬ್ಬ ನ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ  ಬಾಗಲಕೋಟ ಜಿಲ್ಲಾ ಹುನಗುಂದ ತಾಲ್ಲೂಕು ಗೂಡುರೂ ಗ್ರಾಮದ 22 ವರ್ಷದ ನೇತ್ರಾವತಿ ವಿ ಗೂಡೂರುತೀ ಚಿಕಿತ್ಸೆ ಗೆ  ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು 1ಲಕ್ಷ  ರೂ, ನೀಡಿದ್ದಾರೆ.

ಯುವತಿಗೆ ಪೋಷಕರಿಲ್ಲದ  ಕಾರಣ ತಗಡಿನ ಗುಡಿಸಲು ವಾಸಿಯಾಗಿರುವ ಬಡಕುಟುಂಬದ ಹಿನ್ನೇಲೆಯನ್ನು ಅರಿತ ಅಶೋಕ ಲಿಂಬಾವಳಿ ಅವರು ಭೋವಿ ಗುರುಪೀಠದ ಜಗದ್ಗುರುಗಳಿಗೆ ವಿಷಯ ತಿಳಿಸಿದ್ದರು.

ತಾತ್ಕಾಲಿಕ ಆಶ್ರಯ ನೀಡಿದ ಇಳಕಲ್ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳಿ ಸ್ವಾಮೀಜಿ  ಚೆಕ್ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,
ತೆಲಸಂಗ ಕುಂಬಾರ ಗುರುಪೀಠದ ಜಗದ್ಗುರು ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತಮಠ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಭಾರತೀಯ ರೈಲ್ವೆ ಪ್ರಾಧಿಕಾರದ ಸದಸ್ಯ ಅಶೋಕ ಲಿಂಬಾವಳಿ, ಭಾಜಪ ಪರಿಶಿಷ್ಟ ಜಾತಿಯ ರಾಜ್ಯ ಕಾರ್ಯದರ್ಶಿ ತುಮಕೂರಿನ ಓಂಕಾರೇಶ್ವರ, ಬಾಗಲಕೋಟ ವಕೀಲ ಕುಮರಸ್ವಾಮಿ ಹಿರೇಮಠ, ಹನುಮಂತ ತುಂಬದ, ಬಸವರಾಜ ಒಡೆಯರಾಜ, ರಾಘವೇಂದ್ರ ಚಿಂಚಲಿ ಹಾಗೂ ಭೋವಿ ಸಮಾಜದ ಇನ್ನಿತರರ ಮುಖಂಡರಿದ್ದರು.

Girl in a jacket
error: Content is protected !!