ಮೈಸೂರು,ಜೂ,೧೯: ರಾಜ್ಯದ ಪ್ರತಿಷ್ಠಿತ ಅರಣ್ಯಪ್ರದೇಶವಾದ ನೊಗರಹೊಳೆಯಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭವಾಗಿದೆ.
ನಾಗರ ಹೊಳೆ ಅರಣ್ಯದಲ್ಲಿ ಕ್ಯಾಮರಾವನ್ನು ಹಳವಡಿಸಲಾಗಿದ್ದು ಹುಲಿಯ ವಯಸ್ಸು ಮತ್ತು ಲಿಂಗ ಪತ್ತೆಯನ್ನು ಮಾಡಲಾಗುತ್ತದೆ ಎಂದು ವಲಯಾಧಿಕಾರಿ ತಿಳಿಸಿದ್ದಾರೆ.
ಕೊರೊನಾ ಹಾವಳಿ ಇರುವುದರಿಂದಾಗಿ ಸ್ವಯಂ ಸೇವಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಒಟ್ಟು ೮೪೦ ಚದರ ಕಿ.ಮೀ ವ್ಯಾಪ್ತಿ ಇರುವ ನಾಗರ ಹೊಳೆ ಅರಣ್ಯ ಗಣತಿ ನಡೆಲಾಗುತ್ತಿದೆ. ಈಗಾಗಲೇ ಹುಲಿ ಗಣತಿ ಕಾರ್ಯಾರಂಭಗೊಂಡಿದೆ. ಪ್ರಥಮ ಹಂತದ ಗಣತಿ ಕಳೆದ ಮೇ ತಿಂಗಳಿನಲ್ಲಿ ಆರಂಭವಾಗಿ ಮುಕ್ತಾಯವಾಗಿತ್ತು. ಇದೀಗ ಎರಡನೇ ಹಂತದ ಗಣತಿಯನ್ನು ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಾಗಿದೆ. ಹುಲಿ ಗಣತಿ ಕಾರ್ಯದಲ್ಲಿ ೪೫೦ ಸ್ವಯಂ ಚಾಲಿತ ಕ್ಯಾಮೆರಾ ಬಳಸಲಾಗಿದೆ. ಒಂದು ತಿಂಗಳ ಗಣತಿ ಕ್ಯಾಮೆರಾ ಡೇಟಾ ಆಧರಿಸಿ ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು ಹಾಗೂ ಲಿಂಗ ಪತ್ತೆಹಚ್ಚಲಿದ್ದಾರೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ೮ ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಬ್ಲಾಕ್ ಒಂದರಲ್ಲಿ ಹುಣಸೂರು, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿಕುಪ್ಪೆ ವಲಯಗಳಿವೆ.
ನಾಗರಹೊಳೆಯಲ್ಲಿ ಹುಲಿಗಣತಿ ಕಾರ್ಯ ಆರಂಭ
Share