ಶಿಕಾರಿಪುರ,ಅ,೦೬:ಸದಸ್ಯರ ಹಿತ ಕಾಯುವುದು ಕಷ್ಟ್ಟಕ್ಕೆ ಸ್ಪಂದಿಸುವುದು ಒಬ್ಬ ಅಭಿವೃದ್ದಿ ಅಧಿಕಾರಿ ಕೆಲಸ ಮನುಷ್ಯ ಗಿಂತ ಅವನಲ್ಲಿಯ ಮನುಷ್ಯತ್ವ ದೊಡ್ಡದು ಅದಕ್ಕೆ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಇದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಿಸಿದರು .
ಮಂಜುನಾಥ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಎಲ್‌ಐಸಿ ಏಜೆಂಟರು. ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ಕೆಲಸಮಾಡುವ ಜಾಗದ ಜೊತೆಯಲ್ಲಿ ಇರುವವರು. ಕುಟುಂಬ ದವರತೆ ಇರಬೇಕು ಸ್ನೇಹ ಪ್ರೀತಿ ಸಂಪಾದಿಸಿ ಗೌರವದಿಂದ ನೋಡಿದಾಗಲೇ ನಂಬಿಕೆ ಬೆಳೆದು. ನಮ್ಮೊಂದಿಗೆ ವ್ಯವಹರಿಸುವ ಧೈರ್ಯ ಮಾಡುತ್ತಾರೆ ನನ್ನ ಈ ಬೆಳೆವಣಿಗೆಗೆ ಕೊಲ್ಲೂರು ತಾಯಿ ಅನುಗ್ರಹ ಹಾಗೂ ನನ್ನ ಎಲ್ಲಾ ಸದಸ್ಯರ ಸಹಕಾರ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ಮುಂದೆ ಹೀಗೆ ನೀವು ಬೆಳೆದು ಎಲ್‌ಐಸಿ ಯಿಂದ . ಯಾವರೀತಿ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೇಗೆ ಕಾರಣವಾಯಿತು.ನಾವು ಯಾವರೀತಿ ಕೆಲಸ ಮಾಡಿದೆವು ಅದನ್ನು ಮುಂದಿನ ಯುವ ಪೀಳಿಗೆಗೆ ಮಾಹಿತಿ ನೀಡಿ ದಾಗಲೇ ಆ ಸಂಸ್ಥೆಗೆ ನಾವು ಮಾಡುವ ನಂಬಿಕೆ ಪ್ರಾಮಾಣಿಕ ಕರ್ತವ್ಯ ವಾಗಿದೆ ಎಂದರು
ಈ ಸಂದರ್ಬದಲ್ಲಿ ಗೌರವದ ಗುರುಸಂದೇಶ ಪ್ರೀತಿ ಪೂರ್ವಕ ಬೀಳ್ಕೊಡುಗೆ ಸನ್ಮಾನ ಮಾಡಲಾಯಿತು ಪತ್ನಿ ಶಾಂತ ಮಂಜುನಾಥ್. ನಿಗಮದ ಶಾಕಾಧಿಕಾರಿ ವೆಂಕಟರಮಣ.ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣ್ ಮೊದಲಾದವರು ಹಾಜರಿದ್ದರು.
ಮುನುಷ್ಯನಿಗಿಂತ ಮುನುಷ್ಯತ್ವ ದೊಡ್ಡದು
Share