ಮಾನವಧರ್ಮದ ನಿಜಾರ್ಥ ತಿಳಿಸಿದ ಶರಣರು-ಮುಖ್ಯಮಂತ್ರಿ ಚಂದ್ರು

Share

ಮಾನವಧರ್ಮದ ನಿಜಾರ್ಥ ತಿಳಿಸಿದ ಶರಣರು-ಮುಖ್ಯಮಂತ್ರಿ ಚಂದ್ರು

ಚಿತ್ರದುರ್ಗ,ಜ,೧೯-ಮನುಷ್ಯನಿಗೆ ಬೇಕಾದ ಎಲ್ಲವನ್ನು ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣು ನೀಡಿದರು ಅಲ್ಲದೆ ಎಲ್ಲಾ ವರ್ಗದವರನ್ನು ಒಳಗೊಂಡ ಸಂವಿಧಾನವನುಕೊಟ್ಟರು ಎಂದು ನಟ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು

೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮನುಷ್ಯನಿಗೆ ಎನೇನು ಬೇಕು ಅದೆಲ್ಲವನ್ನು ೧೨ನೇಯ ಶತಮಾನದಲ್ಲಿಯೇ ಬಸವಾದಿ ಶರಣರು ಎಲ್ಲ ವರ್ಗದವರನ್ನು ಒಳಗೊಂಡ ಸಂವಿಧಾನವನ್ನು ಕೊಟ್ಟರು. ಸಪ್ತಶುದ್ದಿಗಳ ಮೂಲಕ ಎಲ್ಲವನ್ನು ತಿದ್ದುವ ಕೆಲಸ ಮಾಡಿದರು. ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಧರ್ಮ ಮಾನವ ಧರ್ಮ. ಅದು ಶರಣರ ಧರ್ಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧರಾಮ ಬೆಲ್ದಾಳ ಶರಣರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಂ ಕೆ ತಾಜ್‌ಪೀರ್, ಅ.ಭಾ.ವೀ.ಲಿಂ.ಮ.ಸ. ಜಿಲ್ಲಾಧ್ಯಕ್ಷ ಶ್ರೀ ಮಹಡಿ ಶಿವಮೂರ್ತಿ, ಮೈಸೂರು ಜಿ.ಕ.ಸಾ.ಪ. ಮಾಜಿ ಅಧ್ಯಕ್ಷ ಶ್ರೀ ಎಂ ಚಂದ್ರಶೇಖರ್, ಹಿರಿಯ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್, ಹರಗುರು ಚರಮೂರ್ತಿಗಳು ಉಪಸ್ಥಿತಿರಿದ್ದರು.
ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರು ಜಯದೇವ ಜ್ಯೋತಿ ರೂಪಕ, ಮೈಸೂರು ನಿರಂತರ ಫೌಂಡೇಶನ್ ರವರು ಬಸವಣ್ಣನವರ ವಚನಾಧಾರಿತ ಕೂಡಲ ಸಂಗಮ ದೃಶ್ಯರೂಪಕ ನಡೆಸಿಕೊಟ್ಟರು.

 

 

Girl in a jacket
error: Content is protected !!