ಮನೆ ಮನೆಗೆ ಕಂದಾಯ ದಾಖಲೆ ಉದ್ಟಾಟನೆ

Share

ಚೆಳ್ಳಕೆರೆ, ಮಾ, 12:ಕಂದಾಯ ದಾಖಲೆಗಳು ರೈತರ ಮನೆ ಬಾಗಿಲಿಗೆ ಎನ್ನುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯಕ್ರಮವನ್ನು ಚಳ್ಳಕೆರೆ ತಾಲ್ಲೂಕು ಮರುಕಟ್ಟೆ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು .

ಆರಂಭದಲ್ಲಿ ಶಾಸಕರಾದ ತಾಶೀಲ್ದಾರ್ ಆದ ಎನ್ ರಘುಮೂರ್ತಿ ಇವರನ್ನು ಎತ್ತಿನ ಬಂಡಿ ಗಾಡಿಯಲ್ಲಿ ಸ್ವಾಗತಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಮತ್ತು ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಕೇರಿಗಳಲ್ಲಿ ಸಂಚರಿಸಿ ಜನಪದ ಶೈಲಿಯ ಅರಳಿಕಟ್ಟೆಯಲ್ಲಿ ಸಮಾರಂಭ ಆಯೋಜಿಸಿ ಉದ್ಘಾಟಿಸಲಾಯಿತು.

ನಂತರ ಮಾತನಾಡಿದ ಶಾಸಕ ಟಿ ರಘುಮೂರ್ತಿ ಅವರು ಈ ಗ್ರಾಮದಲ್ಲಿ ಈ ದಿನ ಲೋಕರ್ಪಣೆ ಗೊಂಡಿರುವ ಈ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿಸಿ ಮುಂಬರುವ ದಿನಗಳಲ್ಲೂ ಕೂಡ ಅಧಿಕಾರಿಗಳು ಈ ರೀತಿ ಜನರ ಸಮಸ್ಯೆಯನ್ನು ಬಗೆಹರಿಸಿದರೆ ಸಮಾಜದ ಮತ್ತು ಸರ್ಕಾರದ ಋಣ ತೀರಿಸುವ ಕೆಲಸ ಮಾಡಿದಂತಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶಿಲ್ದಾರ್ ರಘುಮೂರ್ತಿ , ರಾಜ್ಯ ಸರ್ಕಾರದ ಯೋಜನೆ ಬಡವರಿಗೆ ಮತ್ತು ಖಾತೆದಾರರಿಗೆ ವರದಾನವಾಗಲಿದೆ ಇದರಿಂದ ಸಮಯ ಹಣ ಕಿರಿಕಿರಿ ತಪ್ಪಲಿದೆ ತಾಲೂಕಿನ 257 ಗ್ರಾಮಗಳಲ್ಲಿ ಏಕಕಾಲಕ್ಕೆ ಎಲ್ಲಾ ಗ್ರಾಮಗಳಲ್ಲಿ ಕಾರ್ಯಕ್ರಮ ಲೋಕಾರ್ಪಣೆಗೊಂಡಿತು ಬಹುತೇಕ ಜನರು ತಾಲೂಕು ಕಚೇರಿ ಯನ್ನು ಅರಸಿ ಬರುವುದು ಕಡಿಮೆಯಾಗಲಿದೆ ಎಂದರು.

ಜನಪ್ರತಿನಿಧಿಗಳು ಯೋಜನೆಯ ಉದ್ದೇಶವನ್ನು ಸಾರ್ವಜನಿಕರಿಗೆ ತಿಳಿಸಿ ಸರ್ಕಾರದ ಮೇಲೆ ಸ್ವಸ ಮತ್ತು ನಂಬಿಕೆ ಹುಟ್ಟಿಸಬೇಕು ಹಾಗೆ ಇಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಎಲ್ಲಾ ಗ್ರಾಮಗಳಲ್ಲೂ ಸಂಚರಿಸಿ ಸಾರ್ವಜನಿಕರಿಂದ ಅಹವಾಲು ಪಡೆದು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡುವ ಕೆಲಸ ನಮ್ಮಗಳ ದಾಗಿದ್ದು ಸಾರ್ವಜನಿಕರು ಮುಕ್ತವಾಗಿ ನಮ್ಮ ಸಮಸ್ಯೆಗಳನ್ನು ನಮ್ಮ ಗಳಲ್ಲಿ ಹೇಳಿ ಕೊಳ್ಳಬಹುದೆಂದು ತಿಳಿಸಿದರು.  ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಬೇಕಾಗಿ ತಾಸಿಲ್ದಾರ್ ರಘುಮೂರ್ತಿ ಮತ್ತು ಸಿಬ್ಬಂದಿಯವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮವನ್ನು ಕಚೇರಿಯನ್ನು ಉದ್ಘಾಟಿಸಿ ಕಂದಾಯ ದಾಖಲೆಗಳ ಕಿಟ್ಟನ್ನು ಆಯ್ದ ಖಾತೆ ದಾರರಿಗೆ ವಿತರಿಸಿದರು .ಸಮಾರಂಭದಲ್ಲಿ ನನ್ನಿವಾಳಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಸದಸ್ಯರಾದ ಅಂತ ರಾಜಣ್ಣ ಒಬ್ಬಮ್ಮ ಮತ್ತು ಇತರರು ಉಪಸ್ಥಿತರಿದ್ದರು

Girl in a jacket
error: Content is protected !!