ಭಾರತದಲ್ಲಿ ಧಾರ್ಮಿಕ ಪರಂಪರೆಗೆ ವಿಶೇಷ ಸ್ಥಾನವಿದೆ; ರಘುಮೂರ್ತಿ

Share

ನಾಯಕನಹಟ್ಟಿ,ಏ,01:ನಮ್ಮ ರಾಷ್ಟ್ರದ ಧಾರ್ಮಿಕ ಪರಂಪರೆಗೆ ವಿಶೇಷವಾದ ಸ್ಥಾನಮಾನವಿದೆ ಋಗ್ವೇದದಪಲ್ಲಿ ಆರ್ಯನರು ಧಾರ್ಮಿಕ ನೆಲೆಘಟ್ಟನ್ನು ಗಟ್ಟಿಗೊಳಿಸಿದರು ಸಿಂಧೂ ನಾಗರೀಕತೆ ಯಿಂದಲು ಧಾರ್ಮಿಕ ಭಾವನೆ ಶ್ರೀಮಂತ ಗೊಂಡಿತು ಎಂದು ತಾಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು

ಕರ್ನಾಟಕ ರಾಜ್ಯ ಸರ್ಕಾರದಿಂದ ಧಾರ್ಮಿಕ ದಿನಾಚರಣೆಯನ್ನು ಗೌರಸಮುದ್ರದ ಅಧಿದೇವತೆ ಮಾರಮ್ಮನ ದೇವಸ್ಥಾನದಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ತಾಲೂಕಿನಲ್ಲಿ ಎರಡು ಮೇಜರ್ ಮುಜರಾಯಿ ದೇವಸ್ಥಾನಗಳಿದ್ದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಗೌರಸಮುದ್ರದ ಮಾರಮ್ಮ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬರು ಭಕ್ತಾಧಿಗಳಿಗೆ ವಿಶೇಷವಾಗಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಆವರಣದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿ ಈ ಲಿಂಗಕ್ಕೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಚನೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ ಇದೊಂದು ವಿನೂತನ ಕ್ರಮವಾಗಿದ್ದು ದೇವಸ್ಥಾನಕ್ಕೆ ಬರುವ ಭಕ್ತಾದಿಗಳೆಲ್ಲರೂ ಶ್ರದ್ದೆ ಮತ್ತು ಭಕ್ತಿಯಿಂದ ಯುಗಾದಿಯ ಹೊಸವರ್ಷವನ್ನು ಆಚರಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಾಗೆಯೇ ಮಾನ್ಯ ಸಾರಿಗೆ ಸಚಿವರು ಹಾಗೂ ಈ ಕ್ಷೇತ್ರದ ಶಾಸಕರು ಅಪೇಕ್ಷೆಯಂತೆ ಗೌರಸಮುದ್ರ ಮಾರಮ್ಮ ದೇವಸ್ಥಾನದ ತುಂಬಲಿ ನಲ್ಲಿ ನೂರು ಜನ ಭಕ್ತಾದಿಗಳು ಉಳಿದುಕೊಳ್ಳಲು ಡಾರ್ಮೆಂಟರಿ ಹಾಲ್ ಶೌಚಾಲಯ ಮತ್ತು ಸ್ಥಾನದ ಕೊಠಡಿಗಳನ್ನು ನಿರ್ಮಿಸಲಾಗುವುದು ಹಾಗೆಯೇ ಎಲ್ಲೆಲ್ಲಿ ಹೈಮಾಸ್ ದೀಪಗಳು ದುರಸ್ತಿಯಲ್ಲಿವೇಯೋ ಅವುಗಳನ್ನು ತಕ್ಷಣ ರಿಪೇರಿ ಮಾಡಿಕೊಡಲಾಗುವುದು ಎಂದು ಹೇಳಿದರು ಸಮಾರಂಭದಲ್ಲಿ ಗೌರ ಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರಕ ಸದಸ್ಯರಾದ ಅಂತ ಶುಭ ಓಬಣ್ಣ ಶಶಿಧರ್ ಮುಂತಾದವರು ಉಪಸ್ಥಿತರಿದ್ದರು

Girl in a jacket
error: Content is protected !!