ಆಲಮಟ್ಟಿ,ಆ,07:ಪ್ರವಾಹದಿಂದ ಉಂಟಾದ ಬೆಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ನಡೆದಿದ್ದು ಸಮೀಕ್ಷಾ ವರದಿ
ಬಂದ ನಂತರ ಬೆಳೆ ಹಾನಿ ಪರಿಹಾರ ವಿತರಿಸುವಂತೆ ಸರಕಾರಕ್ಕೆ ಶೀಘ್ರ ಪ್ರಸ್ತಾವನೆಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಯಲಗೂರು ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಈಚೆಗೆ ಉಂಟಾದ ಪ್ರವಾಹದಿಂದ
ಬೆಳೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.
ಕೃಷ್ಣಾ ನದಿ ಪ್ರವಾಹದಿಂದ ಯಲಗೂರು ಸೇರಿದಂತೆ ನಿಡಗುಂದಿ ತಾಲೂಕಿನಲ್ಲಿ ೪೬೫ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು ಶೀಘ್ರವಾಗಿ ಸೂಕ್ತ ರೀತಿಯಲ್ಲಿ ಬೆಳೆ ಹಾನಿಪರಿಹಾರ ವಿತರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕಳೆದ ವರ್ಷ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಸಹಕಾರದಿಂದ
ಕೋವಿಡ್ ನಿಯಂತ್ರಣ ಹಾಗೂ ಪ್ರವಾಹ ನಿಯಂತ್ರಣ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲೂ
ಕೊರೊನಾ ೨ನೇ ಅಲೆ ಹಾಗೂ ಪ್ರವಾಹವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಲಾಗಿದೆ ಎಂದರು.
೨೦೧೯ರಲ್ಲಿ ಉಂಟಾದ ಪ್ರವಾಹದಿಂದ ಬೆಳೆ ಹಾನಿಯಾಗಿದ್ದರಿಂದ ರೈತರಿಗೆ ಪರಿಹಾರ
ವಿತರಿಸಲಾಗಿದೆ. ಆದರೆ ಕೆಲ ರೈತರಿಗೆ ತಾಂತ್ರಿಕ ತೊಂದರೆಯಿಂದಾಗಿ ಪರಿಹಾರ ತಲುಪಿಲ್ಲ.
ಈ ಬಾರಿ ಆ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಅಕಾರಿಗಳಿಗೆ ಸೂಚಿಸಿದ್ದೇನೆ
ಎಂದರು.
ಜಾಕ್‌ವೆಲ್ ಸ್ಥಳಾಂತರಿಸಿ
ನಿಡಗುಂದಿ ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಜಾಕ್‌ವೆಲ್ ಪ್ರತಿ ಬೇಸಿಗೆಯಲ್ಲಿ ಹಾಗೂ
ಪ್ರವಾಹ ಉಂಟಾದಾಗ ಜಾಕ್‌ವೆಲ್ ಬಂದ್ ಆಗಿ ತಾಲೂಕು ಕೇಂದ್ರವಾಗಿರುವ ನಿಡಗುಂದಿ
ಪಟ್ಟಣಕ್ಕೆ ನೀರು ಸರಬರಾಜು ವ್ಯತ್ಯಯ ಉಂಟಾಗುತ್ತಿದೆ. ಜಾಕ್‌ವೆಲ್ ಯಂತ್ರೋಪಕರಣಗಳು
ಹಾನಿಗೀಡಾಗಿ ಕನಿಷ್ಠ ಎರಡು ತಿಂಗಳು ಜನ ಕುಡಿವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ
ನಿಡಗುಂದಿ ಪಟ್ಟಣದ ಬಿಜೆಪಿ ಮುಖಂಡರು ಸಚಿವೆ ಜೊಲ್ಲೆ ಗಮನಕ್ಕೆ ತಂದರು.
ಈಗಾಗಲೇ ಜಾಕ್‌ವೆಲ್ ಸಮಸ್ಯೆ ಕುರಿತು ಅಕಾರಿಗಳು ಗಮನಕ್ಕೆ ತಂದಿದ್ದಾರೆ.
ಜಾಕ್‌ವೆಲ್‌ನ್ನು ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಿರ್ಮಿಸಲು
ಕ್ರಮಕೈಗೊಳ್ಳಲಾಗುವುದು ಎಂದು ಸಚಿವೆ ಜೊಲ್ಲೆ ತಿಳಿಸಿದರು.
ಗ್ರಾಮ ಸ್ಥಳಾಂತರಿಸಿ
ಪ್ರತಿ ಬಾರಿ ಪ್ರವಾಹ ಉಂಟಾದಾಗ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮಸ್ಥರು
ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಈ ಗ್ರಾಮವನ್ನು ಸ್ಥಳಾಂತರ
ಮಾಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸಚಿವರ ಗಮನಕ್ಕೆ ತಂದರು. ಗ್ರಾಮ
ಸ್ಥಳಾಂತರ ಕುರಿತು ಪರಿಶೀಲಿಸಲಾಗುವುದು ಎಂದು ಸಚಿವೆ ಜೊಲ್ಲೆ ತಿಳಿಸಿದರು.
ಜಿಲ್ಲಾಕಾರಿ ಪಿ.ಸುನಿಲಕುಮಾರ, ಜಿಪಂ ಸಿಇಒ ಗೋವಿಂದರೆಡ್ಡಿ, ಕಂದಾಯ ಉಪವಿಭಾಗಾಕಾರಿ
ಬಲರಾಮ ಲಮಾಣಿ, ಕೃಷಿ ಜಂಟಿ ನಿರ್ದೇಶಕ ಡಾ.ವಿಲಿಯಮ್ಸ್ ರಾಜಶೇಖರ್, ಬಿಜೆಪಿ
ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಡಾ.ಸಂಗಮೇಶ ಗೂಗಿಹಾಳ, ತಹಸೀಲ್ದಾರ್ ಸತೀಶ ಕೂಡಲಗಿ,ನಿಡಗುಂದಿ ಪಪಂ ಮುಖ್ಯಾಕಾರಿ ರಮೇಶ ಮಾಡಬಾಳ ಸೇರಿದಂತೆ ನಾನಾ ಇಲಾಖೆ ಅಕಾರಿಗಳು ಹಾಗೂಬಿಜೆಪಿ ಕಾರ್ಯಕರ್ತರು ಇದ್ದರು.
ನದಿ ತೀರಕ್ಕೆ ಭೇಟಿ ನೀಡುವ ಮುನ್ನ ಯಲಗೂರೇಶನ ದರ್ಶನ ಪಡೆದ ಸಚಿವೆ ಶಶಿಕಲಾ ಜೊಲ್ಲೆ
ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು
ಬೆಳೆ ಪರಿಹಾರಕ್ಕಾಗಿ ಸರಕಾರಕ್ಕೆ ಶೀಘ್ರ ಪ್ರಸ್ತಾವನೆ
Share