ಬೆಂಗಳೂರು,ಆ,01:ಸಿನಿಮಾಪತ್ರಿಕಾಛಾಯಾಗ್ರಾಹಕರು ಕರೋನಾ ವಾರಿಯರ‍್ಸ್ ಕಳೆದ ಹದಿನೆಂಟು ತಿಂಗಳುಗಳಿಂದ ವಿಶ್ವಕ್ಕೆ ವ್ಯಾಪಿಸಿರುವ ಕರೋನ ಎಂಬಮಹಾಮಾರಿಯಿಂದ ಜನರುಹೈರಣಾಗಿದ್ದಾರೆ.ಸರ್ಕಾರವುಲಾಕ್‌ಡೌನ್‌ಏರಿದಕಾರಣ ಚಟುವಟಿಕೆಗಳುಸ್ತಬ್ದಗೊಂಡಿದ್ದವು.ಈ ಸಂದರ್ಭದಲ್ಲಿಜೀವದ ಹಂಗನ್ನುತೊರೆದುಸಾಮಾಜಿಕ
ಸೇವೆಯಲ್ಲಿತೊಡಗಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರನ್ನು ಎಸ್.ಎಸ್.ಕಲಾ ಸಂಗಮವು
ಗುರುತಿಸಿ ಅವರನ್ನುಗೌರವಿಸುವ ಕಾರ್ಯಕ್ರಮನ್ನುಏರ್ಪಡಿಸಿತ್ತು.
ಈ ಪೈಕಿ ಕಳೆದಮೂರು ದಶಕಗಳಿಂದ ಸಿನಿಮಾ ಪತ್ರಿಕೆಗಳಿಗೆ ಫೋಟೋಗಳನ್ನು ಒದಗಿಸುತ್ತಿರುವ ಹಿರಿಯಛಾಯಾಗ್ರಾಹಕರುಗಳಾದಕೆ.ಎನ್.ನಾಗೇಶ್‌ಕುಮಾರ್, ಮನೋಹರ್‌ಅಲಿಯಾಸ್ ಮನು ಮತ್ತು
ಕೆ.ಎಸ್.ಮೋಕ್ಷೇಂದ್ರ ಇವರುಗಳನ್ನು ಸಂಸ್ಥೆಯು ಹಾರ, ಶಾಲು, ಪೇಟ ಮತ್ತುಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಯಿತು.
ನಜ್ಮಾ ಫಾರುಖ್, ಅಸಿಸ್ಟೆಂಟ್ ಕಮಿಷನರ್‌ಆಫ್ ಪೋಲೀಸ್, ಖ್ಯಾತಗಾಯಕ ಶಶಿಧರ್‌ಕೋಟೆ,
ಸಮಾಜ ಸೇವಕ ಮಂಜುನಾಥ್‌ಬನಶಂಕರಿ, ನಿವೃತ್ತ ಶಿಕ್ಷಕಿ ನಾಗಮಣಿ.ಟಿ.ಆರ್ ಮುಂತಾದ
ಗಣ್ಯರುಗಳು ಸಾಧಕರನ್ನು ಗೌರವಿಸಿದರು.
ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್.ಬಿ.ಕೆ
ಸಾರಥ್ಯದಲ್ಲಿಸಮಾರಂಭವು ನಡೆಯಿತು.