ಶುಕ್ರವಾರ ಕೋವಿಡ್‌ನಿಂದ ೩೫,೮೭೯ ಮಂದಿ ಮುಕ್ತ

Share

ಬೆಂಗಳೂರು,ಮೇ,೧೪:ಕಳೆದ ೨೪ ಗಂಟೆಯಲ್ಲಿ ೩೫,೮೭೯ ಜನಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಶುಕ್ರವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕೋವಿಡ್ ವರದಿಯಲ್ಲಿ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ವರದಿಯನ್ನು ನೀಡಿದ್ದು,ಶುಕ್ರವಾರದ ಅಂಕಿ ಅಂಶದ ಪ್ರಕಾರ, ರಾಜ್ಯದಲ್ಲಿ ಈವರೆಗೆ ಒಟ್ಟು ೧೫,೧೦,೫೫೭ ಮಂದಿ ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕರ್ನಾಟಕದಲ್ಲಿ ಇಂದು ೪೧,೭೭೯ ಹೊಸ ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ೫,೯೮,೬೦೫ ಸಕ್ರಿಯ ಪ್ರಕರಣಗಳಿವೆ. ಅಲ್ಲದೆ, ಶುಕ್ರವಾರ ಒಟ್ಟು ೩೭೩ ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೋವಿಡ್-೧೯: ದೇಶದಾದ್ಯಂತ ಹೆಚ್ಚಳಗೊಂಡ ಚೇತರಿಕೆ ಪ್ರಮಾಣ ಂಗಳೂರಿನಲ್ಲಿ ಶುಕ್ರವಾರ ೧೪,೩೧೬ ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ೧೨,೮೯೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ೧೨೧ ಸಾವು ವರದಿಯಾಗಿದೆ.

Girl in a jacket
error: Content is protected !!