ಬೆಂಗಳೂರು,ಮೇ,೨೫: ಅನಾಥಶ್ರಮಗಳಲ್ಲಿನ ವೃದ್ಧರಿಗೆ ಮತ್ತು ವಿಕಲ ಚೇತನಿರಿಗೆ ಬೆಂಗಳೂರು ನಗರ ಜಿಲ್ಲಾಡಿಳ ಅಲ್ಲಿಯೇ ಲಸಿಕೆ ಹಾಕಲು ನಿರ್ಧರಿಸಿದೆ
ಪಂಚಾಯ್ತಿ, ರೆವಿನ್ಯೂ ಹಾಗೂ ಹೆಲ್ತ್ ಆಫೀಸರ್ಸ್ ನಿಂದ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶೇಷ ಚೇತನರು ಬರೋಬ್ಬರಿ ೫೯ ಸಾವಿರ ಮಂದಿ ಇದ್ದಾರೆ. ಅದರಲ್ಲಿ ೪೫ ವರ್ಷ ಮೇಲ್ಪಟ್ಟವರು ಬರೋಬ್ಬರಿ ೧೯,೯೧೧ ಮಂದಿ ಇಷ್ಟು ಮಂದಿಯ ಮ್ಯಾಪಿಂಗ್ ಮಾಡಿ ಅವರಿರೋ ಸ್ಥಳಕ್ಕೆ ವಾಹನ ವ್ಯವಸ್ಥೆ ಮಾಡಿ, ವಿಶೇಷ ಚೇತನರಿರೋ ಮನೆ ಮನೆಗೆ ತೆರಳಿ ತಮ್ಮ ವಾಹನದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಜಿಲ್ಲಾಡಳಿತ ಲಸಿಕೆ ಹಾಕಿಸ್ತಿದೆ.
ಒಂದು ವೇಳೆ ಆಧಾರ್ ಕಾರ್ಡ್ ಇಲ್ದಿದ್ರೂ ಡೋಂಟ್ ವರಿ. ವಾಕ್ಸಿನ್ ಹಾಕಿಸಿಕೊಳ್ಳಲು ಜಿಲ್ಲಾಡಳಿತವೇ ತಾತ್ಕಾಲಿಕ ಐಡಿ ಕಾರ್ಡ್ ನೀಡಲಿದೆ. ಇದಲ್ಲದೆ ಆಶ್ರಮಗಳಲ್ಲಿರೊ ವಯೋ ವೃದ್ಧರಿಗೆ ಆಧಾರ್ ಕಾರ್ಡ್ ಇಲ್ದಿದ್ರೂ ಐಡಿ ಕಾರ್ಡ್ ಕೊಟ್ಟು ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ವಿಕಲಚೇತನರು, ಅನಾಥಾಶ್ರಮದ ವಯೋವೃದ್ಧರಿಗೆ ಲಸಿಕೆಗೆ ವ್ಯವಸ್ಥೆ..!
Share