ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ

Share

 

ಬೆಂಗಳೂರು, ಮಾ,02:ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಾರ್ಚ್‌ 8 ರಂದು ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಒಂದು ಟಿಕೆಟ್ ಖರೀದಿಸಿದರೆ ಮತ್ತೊಬ್ಬರಿಗೆ ಉಚಿತ ಪ್ರವೇಶ ಘೋಷಿಸಿದೆ.

ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಂಡರ್‌ಲಾ ಆ ದಿನದಂದು ಕೇವಲ ಮಹಿಳೆಯರು ಹಾಗೂ ಯುವತಿಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. 10 ವರ್ಷ ಒಳಗಿನ ಗಂಡು ಮಕ್ಕಳಿಗೆ ಪ್ರವೇಶವಿದ್ದು, ಉಳಿದಂತೆ ಯಾವ ಪುರುಷರಿಗೂ ಆ ದಿನ ಪ್ರವೇಶವಿರುವುದಿಲ್ಲ.

ಇದಷ್ಟೆ ಅಲ್ಲದೆ, ವಂಡರ್‌ಲಾ ರೆಸಾರ್ಟ್‌HBನಲ್ಲಿಯೂ ಸಹ ಮಹಿಳೆಯರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ. ರೆಸಾರ್ಟ್ ರೂಮ್‌ ಬುಕ್ಕಿಂಗ್ ಮೇಲೆ ಒನ್‌ ಪ್ಲಸ್ ಒನ್ ಆಫರ್ ನೀಡಲಾಗಿದೆ. ರೆಸಾರ್ಟ್‌ ಹಾಗೂ ಪಾರ್ಕ್‌ ಎರಡೂ ಕಡೆ ಬುಕ್ಕಿಂಗ್ ಮಾಡುವವರಿಗೂ ಸಹ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯರ ದಿನವನ್ನು ವಂಡರ್‌ಲಾ ವಿಭಿನ್ನ ಹಾಗೂ ಅವರಿಗಾಗಿ ಸಂಪೂರ್ಣ ಮನರಂಜನೆ ನೀಡಲು ಮುಂದಾಗಿದೆ. ಹೆಚ್ಚಿನ ವಿವರಗಳಿಗಾಗಿ 9945500011 ಅಥವಾ apps.wonderla.co.in/wd/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Girl in a jacket
error: Content is protected !!