ಬ್ಯಾಂಕ್ ವಂಚನೆ ಪ್ರಕರಣ; ಕೃಷ್ಣಯ್ಯಶೆಟ್ಟಿ ದೋಷಿ

Share

ಬ್ಯಾಂಕ್ ವಂಚನೆ ಪ್ರಕರಣ; ಕೃಷ್ಣಯ್ಯಶೆಟ್ಟಿ ದೋಷಿ

by- ಕೆಂಧೂಳಿ

ಬೆಂಗಳೂರು, ಫೆ,06-ಬ್ಯಾಂಕಿಗೆ ನಕಲಿ ದಾಖಲೆ ನೀಡಿ ಕೋಟ್ಯಂತರ ರೂ ವಂಚಿಸಿದ ಪ್ರಕರಷಕ್ಕೆ ಸಂಬಂಧಿಸಿದ ಮಾಜಿ ಸಚಿ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ

ಬೆಗಳೂರಿನ  ಜನಪ್ರತಿನಿಧಿಗಳ ಕೋರ್ಟ್ನಡೆಸಿದ ವಿಚಾತಣೆ ನಂತರ ವಂಚನೆ ಪ್ರಕರಣ ಸಾಭೀತಾದ ಕಾರಣ ತಪ್ಪಿತಸ್ಥರೆಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಕರಣ ಪ್ರಕಟಿಸಬೇಕಿದೆ

Adavategement

ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ಕೂ ಜನರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲೆ ಇತ್ತು. ಇದೀಗ ಈ ಆರೋಪ ಸಾಬೀತಾಗಿದೆ.

2012 ರಲ್ಲಿ ಖಾಸಗಿ ಬ್ಯಾಂಕ್‌ಗೆ ಗ್ಯಾಂಗ್‌ ವಂಚನೆ ಮಾಡಿತ್ತು. ಆರೋಪಿಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿತ್ತು. ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಸಾಲವನ್ನು ಕೃಷ್ಣ ಶೆಟ್ಟಿ ಪಡೆದುಕೊಂಡಿದ್ದರು.

ಮಾಲೂಕು ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ, ಬಾಲಾಜಿಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಇದರಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್‌ ಸಲ್ಲಿಸಿತ್ತು.

ಕೃಷ್ಣಯ್ಯ ಶೆಟ್ಟಿ, ಕೆ.ವಿ.ಹನುಮಪ್ಪ ರೆಡ್ಡಿ, ಜಿ.ಎಂ.ರಮೇಶ್ ಹಾಗೂ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2)ರಡಿ ಸಿಬಿಐ ಕೇಸ್ ದಾಖಲಿಸಿತ್ತು.

Girl in a jacket
error: Content is protected !!