ಬೆಂಗಳೂರು,ಮೇ,೨೭: ಕೊರೊನಾ ಸಂಕಷ್ಟ ಎದುರಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಇದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ ಬಂಗಳೂರಿನಲ್ಲಿ ಇಂದು ೫೯೭೭ ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರಿನ ವಿವಿಧ ವಾರ್ಡ್ಗಳಲ್ಲಿನ ಸೋಂಕಿತರ ಸಂಖ್ಯೆ ಈ ರೀತಿ ಇದೆ:
ಬೊಮ್ಮನಹಳ್ಳಿಯಲ್ಲಿ-೫೪೭, ದಾಸರಹಳ್ಳಿ-೨೧೫, ಬೆಂಗಳೂರು ಪೂರ್ವ-೭೮೩, ಮಹಾದೇವಪುರ-೯೮೭, ಆರ್ಆರ್ ನಗರ-೪೪೨, ಬೆಂಗಳೂರು ದಕ್ಷಿಣ-೬೧೬, ಬೆಂಗಳೂರು ಪಶ್ಚಿಮ-೪೭೯, ಯಲಹಂಕ-೪೬೪, ಹೊರವಲಯದ ತಾಲೂಕುಗಳಲ್ಲಿ ೪೪೮ ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೬೧೧ ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.ಕೋವಿಡ್ ಬುಲೆಟಿನ್ನಿನ್ನೆ ನಗರದಲ್ಲಿ ೬೪೩೩ ಪ್ರಕರಣಗಳು ಪತ್ತೆಯಾಗಿದ್ದು, ೨೮೫ ಮಂದಿ ಸೋಂಕಿತರು ಮೃತಪಟ್ಟಿದ್ದರು. ಈವರೆಗೆ ೨,೦೭,೩೫೭ ಸಕ್ರಿಯ ಪ್ರಕರಣಗಳಿವೆ. ಮೇ ೨೪ರಂದು ೫೬,೧೬೪ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ ೨೯.೯೫%ರಷ್ಟಿದ್ದು, ಮರಣ ಪ್ರಮಾಣ ೧.೫೫% ಇದೆ.
ಬೆಂಗಳೂರಲ್ಲಿ ಇಂದು ೫,೯೭೭ ಸೋಂಕಿತರು ಪತ್ತೆ
Share